Kranti movie trailer : ಡಿ ಬಾಸ್‌ ಅಭಿಮಾನಿಗಳಿಗೆ ಇಂದು ಸಖತ್‌ ಸ್ಪೆಷಲ್‌ ದಿನ. ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಟ್ರೇಲರ್‌ ನೋಡಿದ ಮೇಲೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಮಾಸ್‌ ಅಂಡ್‌ ಕ್ಲಾಸ್‌ ಲುಕ್‌ನಲ್ಲಿ ದಾಸ್‌ ಸೂಪರ್‌ ಆಗಿ ಕಾಣಿಸಿಕೊಂಡಿದ್ದು, ಜನವರಿ 26 ರಂದು ಥಿಯೇಟರ್‌ಗಳಲ್ಲಿ ಈ ಸಿನಿಮಾ ʼಕ್ರಾಂತಿʼ ಎಬ್ಬಿಸುವುದು ಪಕ್ಕಾ. 


COMMERCIAL BREAK
SCROLL TO CONTINUE READING

ಹೌದು... ದಚ್ಚು ಅಭಿಮಾನಿಗಳು ಬಹು ದಿನಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದರು. ವೇಟ್‌ ಇಸ್‌ ಎಂಡ್‌ ಎನ್ನುವಂತೆ ಕ್ರಾಂತಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಡಿ ಬಿಟ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಕ್ರಾಂತಿ ಅಬ್ಬರ ಶುರುವಾಗಿದೆ. ಬಿಡುಗಡೆಯಾದ ಕ್ಷಣವೇ ಲಕ್ಷಾಂತರ ಮಂದಿ ಗಜ ದರ್ಶನ ಮಾಡಿದ್ದಾರೆ. ಟ್ರೇಲರ್‌ ನೋಡಿದ ಮೇಲೆ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗುತ್ತಿದೆ. ಅಲ್ಲದೆ, ದರ್ಶನ್‌ ಲುಕ್‌ ಅಂತು ಕಡಕ್‌ ಆಗಿದೆ. ದಾಸನ ಡೈಲಾಗ್‌ ಕೇಳಿದ್ರೆ ಸಮಾಜಕ್ಕೆ ಇದೊಂದು ಉತ್ತಮ ಸಂದೇಶ ಸಾರುವ ಸಿನಿಮಾ ಅನ್ನೋದು ತಿಳಿಯುತ್ತದೆ.


ಇದನ್ನೂ ಓದಿ: Amid Aryan Khan dating : ಪಾಕ್‌ ನಟಿ ಜೊತೆ ಶಾರುಖ್‌ ಮಗ... ಡೇಟಿಂಗ್‌ ಮಾಡ್ತಿದಾರಾ ಇಬ್ರು..?


ಸದ್ಯ ಟ್ರೇಲರ್‌ ಬಿಡುಗಡೆ ಮಾಡಿ ಕ್ರಾಂತಿ ಚಿತ್ರ ತಂಡ ಅಭಿ ಪಿಕ್ಚರ್‌ ಬಾಕಿ ಹೈ ಎನ್ನುವಂತ ಸಂದೇಶ ಸಾರಿದೆ. ಈಗಾಗಲೇ ಬೆಂಗಳೂರಿನ ಸಿಟಿ ಮಲ್ಟಿಪ್ಲೆಕ್ಸ್‌ನಲ್ಲಿ ಕ್ರಾಂತಿ ಟ್ರೇಲರ್‌ ಪ್ರದರ್ಶನ ಮಾಡಲಾಗಿದೆ. ಡಿಬೀಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿಯೂ ನೋಡಬಹುದಾಗಿದೆ. ಚಿತ್ರದ ಟ್ರೇಲರ್‌ನಲ್ಲಿ ಬ್ಯಾಗ್ರೌಂಡ್‌ ಸ್ಟೋರ್‌ ಸೂಪರ್‌ ಆಗಿ ಮೂಡಿಬಂದಿದೆ. ಈ ಹಿಂದೆ ಚಿತ್ರದ ಫಸ್ಟ್‌ಲುಕ್‌ನಲ್ಲಿ ದರ್ಶನ್‌ ಒಂದು ಕೈಯಿಂದ ಬೈಕ್‌ ಎಳೆಯುತ್ತಾ ಐಸ್‌ ತಿನ್ನುವ ಶಾಟ್‌ ಭಾರಿ ಟ್ರೋಲ್‌ಗೆ ಒಳಗಾಗಿತ್ತು. ಆದ್ರೆ, ಟ್ರೇಲರ್‌ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. 


ʼಕ್ರಾಂತಿʼ ನಿರ್ದೇಶಕ ವಿ ಹರಿಕೃಷ್ಣ ಮತ್ತು ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರ ಹಿಂದಿನ ಸಹಯೋಗದ ಎರಡನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ದರ್ಶನ್‌ಗೆ ಜೊತೆಯಾಗಿದ್ದಾರೆ. ಸುಮಲತಾ ಅಂಬರೀಶ್‌, ವಿ ರವಿಚಂದ್ರನ್, ಅಚ್ಯುತ್ ಕುಮಾರ್, ಗಿರಿಜಾ ಲೋಕೇಶ್  ಸೇರಿದಂತೆ ಬಹುದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಕ್ರಾಂತಿ ಸಿನಿಮಾ ಜ.26ರಂದು ಬಿಡುಗಡೆಯಾಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.