actor Darshan : ನಿನ್ನೆ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ವಿವಾಹ ಮತೋತ್ಸವ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಅವರು ಭಾಗವಹಿಸಿ ನವ ಜೋಡಿಗೆ ಶುಭ ಕೋರಿದರು. ಅಲ್ಲದೆ, ಈ ವೇಳೆ ತಮ್ಮ ಜೀವನದಲ್ಲಾದ ಒಂದು ಕಹಿ ಘಟನೆಗೆ ಸ್ಪೂರ್ತಿಯಾದ ಡಾ. ವೀರೇಂದ್ರ ಹೆಗ್ಗಡೆ ಅವರ ಮಾತುಗಳನ್ನು ನೆನೆದರು.


COMMERCIAL BREAK
SCROLL TO CONTINUE READING

ಹೌದು... ಒಬ್ಬ ಸ್ಟಾರ್‌ ನಟನ ಮಗನಾಗಿದ್ದರೂ ಸಹ ತಂದೆಯ ನಿಧನದ ನಂತರ ಕಷ್ಟ ಪಟ್ಟು ಹಂತ ಹಂತವಾಗಿ ದರ್ಶನ್‌ ಅವರು ಬೆಳೆದು ಬಂದಿದ್ದು ಎಲ್ಲರಿಗೂ ಗೊತ್ತಿದೆ. ಇದೀಗ ತಮ್ಮ ತಂದೆಯವರ ಸಾವಿನ ಬಳಿಕ ನಡೆದ ಘಟನೆಯ ಬಗ್ಗೆ ದಚ್ಚು ಮನ ಬಿಚ್ಚಿ ಮಾತನಾಡಿದ್ದಾರೆ. ಧರ್ಮಸ್ಥಳದಲ್ಲಿ ನಡೆದ 51ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಚಿಕ್ಕವರಿದ್ದಾಗ ನಡೆದ ಸಂಗತಿ ಹಾಗೂ ವೀರೇಂದ್ರ ಹೆಗ್ಗಡೆಯವರ ಹಿತ ವಚನ ಅವರ ಜೀವನದ ಮೇಲೆ ಹೇಗೆ ಪ್ರಭಾವ ಬೀರಿತು ಎಂಬುವುದನ್ನ ನವ ಜೋಡಿಗೆ ತಿಳಿಸಿದ್ದಾರೆ.


ಇದನ್ನೂ ಓದಿ: ನೀವಷ್ಟೇ ಅಲ್ಲ ನಾನೂ ಸಹ ದರ್ಶನ್‌ ಅವರ ಅಭಿಮಾನಿ : ಡಾ. ವೀರೇಂದ್ರ ಹೆಗ್ಗಡೆ


ನನ್ನ ತಂದೆ ತೀರಿ ಹೋಗಿದ್ದರು. ನಾನು ನನ್ನ ತಮ್ಮ ಆಗ ಇನ್ನೂ ಚಿಕ್ಕವರು. ನನ್ನ ಅಕ್ಕನಿಗೆ ಇನ್ನೂ ಮದುವೆ ಆಗಿರಲಿಲ್ಲ. ಏನಕ್ಕೆ ಈ ಮಾತು ಹೇಳತ್ತೀದಿನಿ ಅಂದ್ರೆ ಈ ಜಾಗ ಮತ್ತು ಹೆಗ್ಗಡೆಯವರ ಹಿತ ವಚನ ಅದುಕ್ಕೋಸ್ಕರ. ನಮ್ಮ ತಾಯಿ ಅಲ್ಲೋ ಇಲ್ಲೋ ಒಂದಿಷ್ಟು ದುಡ್ಡು ಎತ್ಕೊಂಡು.. ಲೋ ಕಾರ್‌ ತೆಗೆಯೋ ಅಂದ್ರು, ಏನಪ್ಪಾ ನಮ್ಮಮ್ಮ ಕಾರ್‌ ತೆಗಿ ಅಂತ ಹೇಳ್ತೀದಾರೆ. ಡಿಸೇಲ್‌ ತರೋಕೆ ಕಾಸ್‌ ಇಲ್ಲ ಕಾರ್‌ ಎಲ್ಲಿಂದ ತೆಗಿಲಿ ಅಂದೆ, ಧರ್ಮಸ್ಥಳಕ್ಕೆ ಹೋಗುವ ನಡಿ ಅಂದ್ರು, ಅಲ್ಲಿಂದ ನಾವು ನಾಲ್ಕೇ ಜನ ನಾನು, ನಮ್ಮಮ್ಮ, ನನ್ನ ತಮ್ಮ, ನಮ್ಮಕ್ಕ ನಾಲ್ಕೇ ಜನ ಬಂದ್ವಿ. ಟೋಕನ್‌ ತಗೋಂಡ್ವಿ ದರ್ಶನ ಮಾಡ್ಕೊಂಡ್ವಿ.


ತಾಯಾಗಲಿದ್ದಾರೆ ನಟಿ ʼಇಲಿಯಾನಾʼ..! ಬೇಬಿ ಬಂಪ್‌ನೊಂದಿಗೆ ಪೋಸ್‌ ನೀಡಿದ ಬೆಡಗಿ


ಅವತ್ತು ವೀರೇಂದ್ರ ಹೆಗ್ಗಡೆ ಅವರು ಹೇಳಿದ ಮಾತು ತುಂಬಾನೆ ಚನ್ನಾಗಿತ್ತು. ಅಲ್ಲಮ್ಮಾ.. ಇಬ್ಬಿಬ್ರು ಗಂಡು ಮಕ್ಕಳನ್ನ ಬೆಳೆಸಿದಿಯಾ.. ಎಲ್ಲಾ ಒಳ್ಳೆಯದಾಗುತ್ತೆ. ಹೋಗು ಅಂತ ಹೇಳಿದ್ರು. ಅವತ್ತು ಹೋಗು ಅಂತ ಕಳಿಸದ್ರು ನೋಡಿ ಇವತ್ತು ಇಲ್ಲಿ ನಿಂತಿದೀನಿ ನಾನು. ಈ ರೀತಿಯ ಅವರ ಹಿತವಚನ ಇಲ್ಲಿವರೆಗೂ ತರುತ್ತದೆ. ಇಲ್ಲಿಗೆ ಬಂದವರು ಯಾರೂ ಬರೀಗೈಯಲ್ಲಂತೂ ಹೋಗಿಲ್ಲ. ನಾನು ಹೊಸ ಜೋಡಿಗೆ ಹೇಳುವುದು ಇಷ್ಟೇ... ಕಷ್ಟ ಸುಖ ಏನೇ ಬರಲಿ ಆ ಮಂಜುನಾಥ ಸ್ವಾಮಿ ಪಾದಕ್ಕೆ ಹಾಕ್ರಿ ಇಲ್ಲಿಗೆ ಬಂದು ವೀರೇಂದ್ರ ಹೆಗ್ಗಡೆ ಅವರ ಹತ್ರ ಹೇಳ್ಕೊಳ್ಳಿ ಎಲ್ಲವೂ ಸರಿಯಾಗುತ್ತದೆ ಎಂದು ದರ್ಶನ್‌ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.