ನೀವಷ್ಟೇ ಅಲ್ಲ ನಾನೂ ಸಹ ದರ್ಶನ್‌ ಅವರ ಅಭಿಮಾನಿ : ಡಾ. ವೀರೇಂದ್ರ ಹೆಗ್ಗಡೆ

Dr. Veerendra Heggade on actor Darshan : ಮೇ 3 ರಂದು ಧರ್ಮಸ್ಥಳದಲ್ಲಿ ನಡೆದ 51ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಅವರು ಭಾಗವಹಿಸಿದ್ದರು. ಈ ವೇಳೆ ಡಾ. ವೀರೇಂದ್ರ ಹೆಗ್ಗಡೆ ಅವರು ದರ್ಶನ್‌ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.

Written by - Krishna N K | Last Updated : May 4, 2023, 05:02 PM IST
  • ಧರ್ಮಸ್ಥಳದಲ್ಲಿ ನಡೆದ 51ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಅವರು ಭಾಗವಹಿಸಿದ್ದರು.
  • ಈ ವೇಳೆ ಡಾ. ವೀರೇಂದ್ರ ಹೆಗ್ಗಡೆ ಅವರು ದರ್ಶನ್‌ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.
  • ನೀವಷ್ಟೇ ಅಲ್ಲ ನಾವೂ ಅವರಿಗೆ ಅಭಿಮಾನಿಗಳು ಎಂದು ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ನೀವಷ್ಟೇ ಅಲ್ಲ ನಾನೂ ಸಹ ದರ್ಶನ್‌ ಅವರ ಅಭಿಮಾನಿ : ಡಾ. ವೀರೇಂದ್ರ ಹೆಗ್ಗಡೆ title=

DBoss : ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ದರ್ಶನ್‌ ಅವರು ಖ್ಯಾತ ನಟರು ಅವರದ್ದು, ಶ್ರೇಷ್ಠವಾದ ವ್ಯಕ್ತಿತ್ವ. ನೀವಷ್ಟೇ ಅಲ್ಲ ನಾವೂ ಅವರಿಗೆ ಅಭಿಮಾನಿಗಳು ಎಂದು ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.

ಹೌದು.. ಧರ್ಮಸ್ಥಳದಲ್ಲಿ ಬುಧವಾರ ಅಂದ್ರೆ ಮೇ 3 ರಂದು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಭಾಗವಹಿಸಿ, ನವ ದಂಪತಿಗಳಿಗೆ ಶುಭ ಹಾರೈಸಿದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು ದರ್ಶನ್‌ ಅವರ ವ್ಯಕ್ತಿತ್ವವನ್ನು ಕೊಂಡಾಗಿದ್ದರು.

ಇದನ್ನೂ ಓದಿ: ತಾಯಾಗಲಿದ್ದಾರೆ ನಟಿ ʼಇಲಿಯಾನಾʼ..! ಬೇಬಿ ಬಂಪ್‌ನೊಂದಿಗೆ ಪೋಸ್‌ ನೀಡಿದ ಬೆಡಗಿ

ದರ್ಶನ್‌ ಕನ್ನಡದ ಖ್ಯಾತ ನಟರು. ನೀವಷ್ಟೇ ಅಲ್ಲ ನಾವೂ ಸಹ ಅವರ ಅಭಿಮಾನಿಗಳು. ದರ್ಶನ್‌ ಅವರು ಪ್ರಕೃತಿ, ಪ್ರಾಣಿಗಳನ್ನ ಪ್ರೀತಿಸ್ತಾರೆ, ಅಲ್ಲದೆ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಂರಕ್ಷಣೆ ಮಾಡ್ತಾರೆ. ಸಿನಿಮಾದಲ್ಲಿ ನಿರ್ದೇಶಕರು ಹೇಳಿದಂತೆ ಮಾಡುವುದು ಬೇರೆ, ಆದ್ರೆ ನಿಜ ಜೀವನದಲ್ಲೂ ಅವರು ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಹೇಳಿ ಮಾಡುವುದು ನಟನೆ, ನಾವು ಬೇರೆಯವರಿಗೆ ಹೇಳ್ತೀವಿ ಬರೀ ನಿಂದು ನಟನೆ ಅಂತ ಆದರೆ, ಸಿನಿಮಾದಲ್ಲಿ ಮಾತ್ರ ಅಲ್ಲ ನಿಜ ಜೀವನದಲ್ಲೂ ದರ್ಶನ್‌ ಅವರು ಶ್ರೇಷ್ಠವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಡಾ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ಇನ್ನು ಧರ್ಮಸ್ಥಳದಲ್ಲಿ ನಡೆದ 51ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನಟ ದರ್ಶನ್‌ ಭಾಗವಹಿಸಿ ನವ ಜೋಡಿಗೆ ಶುಭ ಕೋರಿದರು. ವೇದಿಕೆಯ ಮೇಲೆ ದರ್ಶನ್‌ ಮಾತನಾಡಲು ಆಗಮಿಸಿದಾಗ ಡಿ ಬಾಸ್‌ ಎಂದು ದಚ್ಚು ಅಭಿಮಾನಿಗಳು ಕೂಗಲು ಪ್ರಾರಂಭಿಸಿದರು. ಆಗ ದರ್ಶನ್‌ ಅವರು, ಇಲ್ಲಿ ಬರೀ ದೇವರಿಗೆ ಜೈಕಾರ ಹಾಕಬೇಕು, ವೀರೇಂದ್ರ ಹೆಗ್ಗಡೆಯವರಿಗೆ ಜೈಕಾರ ಹಾಕಬೇಕು ನಾವು ನೀವು ಇಲ್ಲಿ ನಿಮಿತ್ತ ಮಾತ್ರ ಎಂದು ಹೇಳಿ ಶಾಂತ ಗೊಳಿಸಿದರು. ಅಲ್ಲದೆ, ತಮ್ಮ ಹಳೆ ನೆನಪುಗಳನ್ನು ವೇದಿಕೆಯ ಮೇಲೆ ಹಂಚಿಕೊಂಡರು. ತಮ್ಮ ಮದುವೆ ಆಗಿದ್ದು ಇಲ್ಲಿಯೇ ಎಂದು ಹಳೇ ನೆನಪಿಗೆ ಜಾರಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News