Megha shetty : ನಟ ದರ್ಶನ್‌ ಅವರ ಬರ್ತ್‌ಡೇ ಮಾಡಿ ವಿಡಿಯೋ ಹಂಚಿಕೊಂಡು ವಿಜಯಲಕ್ಷ್ಮಿ ದರ್ಶನ್‌ ಅವರ ಕೋಪಕ್ಕೆ ಕಾರಣವಾಗಿದ್ದ, ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಸೈಲೆಂಟ್‌ ಆಗಿದ್ದಾರೆ. ವಿಜಯಲಕ್ಷ್ಮಿ ಅವರು ಗರಂ ಆಗಿ ಇನ್‌ಸ್ಟಾಗ್ರಮ್‌ನಲ್ಲಿ ಪೋಸ್ಟ್‌ ಅಪ್‌ಲೋಡ್‌ ಮಾಡುತ್ತಿದ್ದಂತೆ ಹೆದರಿ ತಮ್ಮ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು... ಇತ್ತೀಚಿಗೆ ದರ್ಶನ್‌ ಬರ್ತ್‌ಡೇಯನ್ನು ಮೇಘಾ ಶೆಟ್ಟಿ, ಪವಿತ್ರಾ ಗೌಡ್‌ ಸೇರಿದಂತೆ ಅವರ ಸ್ನೇಹಿತರು ಗ್ರ್ಯಾಂಡ್‌ ಆಗಿ ಸೆಲೆಬ್ರೆಟ್‌ ಮಾಡಿದ್ದರು. ಅಲ್ಲದೆ, ಆ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ದರ್ಶನ್‌ ಪತ್ನಿ ವಿಜಯಲಕ್ಷ್ಮಿಯವರ ಕೋಪಕ್ಕೆ ಗುರಿಯಾಗಿತ್ತು. ತಕ್ಷಣವೇ ಮೌನ ಮುರಿದ ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮೇಘಾ ಶೆಟ್ಟಿ ಟ್ಯಾಗ್‌ ಮಾಡಿ ಸಖತ್‌ ವಾರ್ನಿಂಗ್‌ ನೀಡಿದ್ದರು.


ಇದನ್ನೂ ಓದಿ: ನಟಿ ಮೇಘಾ ಶೆಟ್ಟಿ ವಿರುದ್ಧ ದರ್ಶನ್‌ ಪತ್ನಿ ಗರಂ : ʼನಾನ್‌ಸೆನ್ಸ್ʼ ತಡೆದುಕೊಳ್ಳಲ್ಲ ಎಂದ ವಿಜಯಲಕ್ಷ್ಮಿ


ಇನ್ನು ವಿಜಯಲಕ್ಷ್ಮಿಯವರ ವಾರ್ನಿಂಗ್‌ ಬೆನ್ನಲ್ಲೇ ವಿಡಿಯೋ ಡಿಲೀಟ್‌ ಮಾಡಿರುವ ಮೇಘಾ ಇದೂವರೆಗು ಸಹ ಈ ಕುರಿತು ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅವರು ಹೆದರಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ ನಟ ದರ್ಶನ್‌ ಜೊತೆಗೆ ನಟಿ ಮೇಘಾ ಶೆಟ್ಟಿ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.


ಅಲ್ಲದೆ, ದಚ್ಚು ಸಫಾರಿಗೆ ಹೋಗಿ ಬಂದ ಫೋಟೊಗಳಲ್ಲಿಯೂ ಮೇಘಾ ಕಾಣಿಸಿಕೊಂಡಿದ್ರು. ಇಷ್ಟೇಲ್ಲ ಆದ್ರೂ ಸುಮ್ಮನಿದ್ದ ವಿಜಯಲಕ್ಷ್ಮಿಯವರು ಇದೀಗ ಕೋಪಗೊಂಡು ಮೆಘಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇತ್ತ ದರ್ಶನ್ ಪತ್ನಿ ಕೆಂಡಾಮಂಡಲವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ನಟಿ ಮೇಘಾ ಶೆಟ್ಟಿ ತಮ್ಮ ಪೋಸ್ಟ್ ಡಿಲೀಟ್ ಮಾಡಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ. ಅಲ್ಲದೆ, ವಿಜಯಲಕ್ಷ್ಮಿಯವರು ಸಹ ತಾವು ಪೋಸ್ಟ್‌ ಮಾಡಿದ್ದ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.