Keerthy Suresh : ನಟಿ ಕೀರ್ತಿ ಸುರೇಶ್ ಸೌತ್ ಸಿನಿರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಉತ್ತಮ ನಟಿಯಾಗಿ ಗುರುತಿಸಿಕೊಂಡಿರುವ ಮಹಾನಟಿಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾ ʼದಸರಾʼದಲ್ಲಿ ಅಭಿನಯಿಸಲು ನಟಿ ಕೋಟಿಗಟ್ಟಲೇ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಕೀರ್ತಿ ನಾನಿ ನಟನೆಯ ಈ ಸಿನಿಮಾದಲ್ಲಿ ನಟಿಸಲು ಎಷ್ಟು ಸಂಭಾವನೆ ಪಡೆದ್ರು ಅಂತ ತಿಳ್ಕೋಳೊ ಆಸೆ ನಿಮಗಿದ್ರೆ ಮುಂದೆ ಓದಿ.
ನ್ಯೂಸ್ 18 ವರದಿಯ ಪ್ರಕಾರ ಕೀರ್ತಿ ಸುರೇಶ್ ತಮ್ಮ ಮುಂಬರುವ ಎರಡು ಚಿತ್ರಗಳಿಗೆ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಬಹುನಿರೀಕ್ಷಿತ ಸಿನಿಮಾ ದಸರಾದಲ್ಲಿ ನಟಿಸಲು ಬರೋಬ್ಬರಿ 3 ಕೋಟಿ ಪಡೆದಿದ್ದಾರೆ ಎಂದು ಹೇಳಲಾಗಿದೆ. ಸದ್ಯದ ಅಂದಾಜಿನ ಪ್ರಕಾರ ಕೀರ್ತಿ ಅವರ ಆಸ್ತಿ 22 ಕೋಟಿ ರೂ. ಅಂತ ಟಾಕ್ ಇದೆ. ಆದ್ರೆ ಈ ಸುದ್ದಿಯನ್ನು ಕೀರ್ತಿ ಖಚಿತಪಡಿಸಿಲ್ಲ.
ಇದನ್ನೂ ಓದಿ: ಈಶ ಮಹಾ ಶಿವರಾತ್ರಿ ಉತ್ಸವದಲ್ಲಿ ಚಿತ್ರರಂಗದ ನಟಿಯರು ಭಾಗಿ..! ಇಲ್ಲಿದೆ ನೋಡಿ ಲಿಸ್ಟ್
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದ್ರೆ, ಕೊನೆಯದಾಗಿ ಕೀರ್ತಿ ವಾಶಿ ಚಿತ್ರದಲ್ಲಿ ನಟಿಸಿದ್ದರು. ನಟ ವಿಷ್ಣು ಜಿ ರಾಘವ್ ಬರೆದು ನಿರ್ದೇಶಿಸಿರುವ ಈ ಸಿನಿಮಾ ಜೂನ್ 17 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಆದ್ರೆ ಅಷ್ಟಾಗಿ ದೊಡ್ಡ ಯಶಸ್ಸು ಕಾಣಲಿಲ್ಲ ಎಂದು ಹೇಳಬಹುದು. ಈ ಮಧ್ಯೆ, ಕೀರ್ತಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಕೆಲವು ವದಂತಿಗಳಿದ್ದವು. ಆದರೆ ಇದನ್ನು ಸಹ ನಟಿ ಖಚಿತಪಡಿಸಿಲ್ಲ.
ಆನ್‌ಲೈನ್ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ, ಕೀರ್ತಿ ತಮ್ಮ ಮೊದಲ ಬಹುಮಾನದ ಬಗ್ಗೆ ಮಾತನಾಡಿದ್ದರು. ತಾನು ಫ್ಯಾಶನ್ ಡಿಸೈನಿಂಗ್ ಓದುತ್ತಿದ್ದಾಗ ಫ್ಯಾಶನ್ ಶೋನಲ್ಲಿ ಭಾಗವಹಿಸಿ 500 ರೂಪಾಯಿಗಳನ್ನು ಬಹುಮಾನವಾಗಿ ಪಡೆದಿದ್ದೇನೆ ಎಂದು ನಟ ಹೇಳಿದ್ದಾರೆ. ಸದ್ಯ ಭೋಲಾ ಶಂಕರ, ಮಾಮನ್ನ, ಸೈರೆನ್, ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.