Date fixed for the release : ಇತ್ತೀಚೆಗಷ್ಟೇ 'ಒಂದು ಸರಳ ಪ್ರೇಮ ಕಥೆ' ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿರುವ ಸಂತಸದಲ್ಲಿರುವ ನಿರ್ದೇಶಕ ಸಿಂಪಲ್ ಸುನಿ, ತಮ್ಮ ಬಹುನಿರೀಕ್ಷಿತ ಅವತಾರ ಪುರುಷ ಸಿನಿಮಾದ ಸೀಕ್ವೆಲ್ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಇದೀಗ ಮಾರ್ಚ್ 22ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಶರಣ್, ಆಶಿಕಾ ರಂಗನಾಥ್ ಮತ್ತು ಶ್ರೀನಗರ ಕಿಟ್ಟಿ ನಟಿಸಿದ್ದ ಮಾಟಮಂತ್ರದ ಸುತ್ತ ಸುತ್ತುವ ಅವತಾರ ಪುರುಷ ಚಿತ್ರವು 2022ರ ಮೇನಲ್ಲಿ ಬಿಡುಗಡೆಯಾಗಿತ್ತು. ಇದೀಗ, ಒಂದೂವರೆ ವರ್ಷಗಳ ನಂತರ ಚಿತ್ರದ ಮುಂದುವರಿದ ಭಾಗ 'ಅವತಾರ ಪುರುಷ- ತ್ರಿಶಂಕು ಪಯಣ' ಮಾರ್ಚ್ 22ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣುಲಿದೆ. 


ಇದನ್ನು ಓದಿ : ವಿಜಯ ರಾಘವೇಂದ್ರ ನಟನೆಯ ಸಸ್ಪೆನ್ಸ್ ಹಾಗೂ ಆ್ಯಕ್ಷನ್ ಥ್ರಿಲ್ಲರ್‌ ಚಿತ್ರ ಜೋಗ್ 101  ಮಾರ್ಚ್ 7 ರಂದು ತೆರೆಗೆ


ಅವತಾರ ಪುರುಷ ಸೀಕ್ವೆಲ್‌ನಲ್ಲಿ ಸಾಯಿಕುಮಾರ್, ವಿಜಯ್ ಚೆಂಡೂರ್, ಸುಧಾರಾಣಿ, ಭವ್ಯ, ಅಯ್ಯಪ್ಪ ಪಿ ಶರ್ಮಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ.
ಈಮಧ್ಯೆ, ಪುಷ್ಕರ ಸಂಸ್ಥೆಯು ಪ್ರತಿಭಾವಂತ ನಿರ್ದೇಶಕರು ಮತ್ತು ನಟರನ್ನು ಒಳಗೊಂಡ ಹಲವು ಸಿನಿಮಾಗಳನ್ನು ಸಿದ್ಧಪಡಿಸುತ್ತಿದೆ


ಇತ್ತೀಚೆಗಷ್ಟೇ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. 'ಅವತಾರ ಪುರುಷ ಸಿನಿಮಾ ಸೀಕ್ವೆಲ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ ಮತ್ತು ಏನೆಲ್ಲಾ ನಿರೀಕ್ಷೆಗಳು ಇದ್ದವೋ ಅದು ಭಾಗ 2 ರಲ್ಲಿದೆ. ಸೀಕ್ವೆಲ್ ನಡುವಿನ ಅಂತರವು ಉತ್ತಮವಾಗಿದೆ. ಸೀಕ್ವೆಲ್‌ಗಳು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅವತಾರ ಪುರುಷ 2 ಗಾಗಿ ನಾನು ಪರಿಪೂರ್ಣ ದಿನಾಂಕವನ್ನು ಕಂಡುಕೊಂಡಿದ್ದೇನೆ' ಎಂದು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಹೇಳುತ್ತಾರೆ.


ಇದನ್ನು ಓದಿ : BMRCL :ಹಳದಿ ಮಾರ್ಗದ ಮೊದಲ ಚಾಲಕ ರಹಿತ ರೈಲು : ಈ ಕುರಿತು ಮಾಹಿತಿ ಇಲ್ಲಿದೆ


'ನನ್ನ ನಿರ್ಮಾಣಧ 12 ಸಿನಿಮಾಗಳ ಪೈಕಿ 9 ಚಿತ್ರಗಳು ಹೊಸಬರ ಚಿತ್ರಗಳಾಗಿವೆ. ನಾನು ಅದನ್ನು ಮುಂದುವರಿಸಲು ಬಯಸುತ್ತೇನೆ. ನಾನು ಯಾವಾಗಲೂ ಹೊಸ ಪ್ರತಿಭೆಗಳನ್ನು ನಂಬುತ್ತೇನೆ. ಇದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಮೂಲಕ ಪ್ರಾರಂಭವಾಯಿತು. ನಾನು ಯಶಸ್ವಿಯಾಗಿದ್ದೇನೆ ಮತ್ತು ನನ್ನ ಮುಂದಿನ ಪ್ರಯತ್ನಗಳಲ್ಲಿ ನಾನು ಹೆಚ್ಚು ಹೊಸಬರು ಮತ್ತು ತಂತ್ರಜ್ಞರನ್ನು ಒಳಗೊಳ್ಳುತ್ತಿದ್ದೇನೆ' ಮತ್ತು 'ನನ್ನ ನಿರ್ಮಾಣ ಸಂಸ್ಥೆ ಪುಷ್ಕರ್ ಫಿಲ್ಮ್ಸ್ ಮೂಲಕ ಪ್ರೇಕ್ಷಕರಿಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ನೀಡಲು ನಾನು ಬಯಸುತ್ತೇನೆ. ಇದೀಗ, ನಾನು ಅವತಾರ ಪುರುಷಕ್ಕಾಗಿ ಕಾಯುತ್ತಿದ್ದೇನೆ' ಎಂದು ಪುಷ್ಕರ್ ಹೇಳುತ್ತಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.