ವಿಜಯ ರಾಘವೇಂದ್ರ ನಟನೆಯ ಸಸ್ಪೆನ್ಸ್ ಹಾಗೂ ಆ್ಯಕ್ಷನ್ ಥ್ರಿಲ್ಲರ್‌ ಚಿತ್ರ ಜೋಗ್ 101 ಮಾರ್ಚ್ 7 ರಂದು ತೆರೆಗೆ

Jog 101 :ಜೋಗ್ 101 ಚಿತ್ರದ ಮೂಲಕ  ನಟ ವಿಜಯ್ ರಾಘವೇಂದ್ರ ಅವರು ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆಯಲು ಸಿದ್ಧರಾಗಿದ್ದು, ಈ ಸಿನಿಮಾ ಮಾರ್ಚ್ 7 ರಂದು ತೆರೆಗೆ ಬರಲಿದೆ 

Written by - Zee Kannada News Desk | Last Updated : Mar 7, 2024, 02:33 AM IST
  • ಜೋಗ್ 101 ಚಿತ್ರದ ಮೂಲಕ ನಟ ವಿಜಯ್ ರಾಘವೇಂದ್ರ ಅವರು ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆಯಲು ಸಿದ್ಧರಾಗಿದ್ದು, ಈ ಸಿನಿಮಾ ಮಾರ್ಚ್ 7 ರಂದು ತೆರೆಗೆ ಬರಲಿದೆ
  • ವಿಜಯ್ ಕನ್ನಡಿಗ ನಿರ್ದೇಶನದ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಜೋಗ್ 101 ಚಿತ್ರ ಮಾರ್ಚ್ 7 ರಂದು ತೆರೆಗೆ ಬರಲು ಸಿದ್ಧವಾಗಿದೆ.
  • ಚಿತ್ರದ ಶೀರ್ಷಿಕೆಯ ಮಹತ್ವವನ್ನು ವಿವರಿಸಿದ ವಿಜಯ್ ಕನ್ನಡಿಗ ಅವರು, “ಚಿತ್ರದಲ್ಲಿ 101 ಸಂಖ್ಯೆಗೆ ವಿಶೇಷ ಅರ್ಥವಿದೆ.
ವಿಜಯ ರಾಘವೇಂದ್ರ ನಟನೆಯ ಸಸ್ಪೆನ್ಸ್ ಹಾಗೂ ಆ್ಯಕ್ಷನ್ ಥ್ರಿಲ್ಲರ್‌ ಚಿತ್ರ ಜೋಗ್ 101  ಮಾರ್ಚ್ 7 ರಂದು ತೆರೆಗೆ title=

Suspense and Action Thriller Jog 101 : ವಿಜಯ್ ಕನ್ನಡಿಗ ನಿರ್ದೇಶನದ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಜೋಗ್ 101 ಚಿತ್ರ ಮಾರ್ಚ್ 7 ರಂದು ತೆರೆಗೆ ಬರಲು ಸಿದ್ಧವಾಗಿದೆ.

ಸಸ್ಪೆನ್ಸ್ ಡ್ರಾಮಾಗಳ ಸರಣಿಗೆ ಹೆಸರುವಾಸಿಯಾಗಿರುವ ನಟ ವಿಜಯ್ ರಾಘವೇಂದ್ರ ಅವರು ತಮ್ಮ ಮುಂಬರುವ ಚಿತ್ರ ಜೋಗ್ 101 ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆಯಲು ಸಿದ್ಧರಾಗಿದ್ದಾರೆ.

ವಿಜಯ್ ಕನ್ನಡಿಗ ನಿರ್ದೇಶನದ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಜೋಗ್ 101 ಚಿತ್ರ ಮಾರ್ಚ್ 7 ರಂದು ತೆರೆಗೆ ಬರಲು ಸಿದ್ಧವಾಗಿದೆ.ಮೂಲತಃ ಲೇಖಕರಾಗಿರುವ ವಿಜಯ್ ಕನ್ನಡಿಗ ಅವರು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಹಿಂದೆ ಕೆಲವು ಚಿತ್ರಗಳಲ್ಲಿ ವಿಜಯ್ ಕನ್ನಡಿಗ ಅವರು ಅಭಿನಯಿಸಿದ್ದಾರೆ.

ಇದನ್ನು ಓದಿ : BMRCL :ಹಳದಿ ಮಾರ್ಗದ ಮೊದಲ ಚಾಲಕ ರಹಿತ ರೈಲು : ಈ ಕುರಿತು ಮಾಹಿತಿ ಇಲ್ಲಿದೆ

ಆದರೆ ಪ್ರಸ್ತುತ ನಾನು ಅಭಿನಯಿಸಿರುವ ಚಿತ್ರ ಜೋಗ್ 101 ತುಂಬಾ ವಿಭಿನ್ನ ಕಥಾಹಂದರ ಹೊಂದಿದ್ದು,  "ನಾನು ಬ್ಯಾಕ್-ಟು-ಬ್ಯಾಕ್ ಚಿತ್ರಗಳ ಭಾಗವಾಗಲು ಅದೃಷ್ಟಶಾಲಿಯಾಗಿದ್ದೇನೆ. ಇದು ಸಸ್ಪೆನ್ಸ್ ಹಾಗೂ ಆ್ಯಕ್ಷನ್ ಥ್ರಿಲ್ಲರ್‌ ಚಿತ್ರ" ಎಂದು ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ.ಸೆವೆನ್ ಸ್ಟಾರ್ ಪಿಕ್ಚರ್ಸ್ ಬ್ಯಾನರ್‌ನಡಿಯಲ್ಲಿ ಟಿ ಆರ್ ರಾಘವೇಂದ್ರ ನಿರ್ಮಿಸಿರುವ ಜೋಗ್ 101 ಚಿತ್ರದಲ್ಲಿ ತೇಜಸ್ವಿನಿ ಶೇಖರ್ ಅವರು ನಾಯಕಿಯಾಗಿ ನಟಿಸುತ್ತಿದ್ದು, ಗೋವಿಂದೇಗೌಡ, ಕಡ್ಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ ಮುಂತಾದವರು ನಟಿಸಿದ್ದಾರೆ.

ಚಿತ್ರದ ಶೀರ್ಷಿಕೆಯ ಮಹತ್ವವನ್ನು ವಿವರಿಸಿದ ವಿಜಯ್ ಕನ್ನಡಿಗ ಅವರು, “ಚಿತ್ರದಲ್ಲಿ 101 ಸಂಖ್ಯೆಗೆ ವಿಶೇಷ ಅರ್ಥವಿದೆ. ಇದು ಕೇವಲ ಯಾದೃಚ್ಛಿಕ ಸಂಖ್ಯೆಯಲ್ಲ; ಇದು ಒಂದು ಸಂಕೇತವಾಗಿದೆ. ಪ್ರಕರಣದ ಸುತ್ತಲಿನ ರಹಸ್ಯವನ್ನು ಅನ್ಲಾಕ್ ಮಾಡುವ ಸುಳಿವು ನೀಡುತ್ತದೆ. ಇದು ಜೋಗ ಜಲಪಾತದ ಹಿನ್ನೆಲೆಯ ನಡುವೆ ತೆರೆದುಕೊಳ್ಳುತ್ತದೆ ಎಂದಿದ್ದಾರೆ.

ಇದನ್ನು ಓದಿ : ಕರ್ನಾಟಕದಲ್ಲಿ 3 ಇಎಸ್ ಐ ಆಸ್ಪತ್ರೆ ನಿರ್ಮಾಣಕ್ಕೆ ಇಎಸ್ ಐಸಿ ಅನುಮೋದನೆ

ಜೋಗ್ 101 ಚಿತ್ರ ಸಸ್ಪೆನ್ಸ್ ಹಾಗೂ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದರೂ ಚಿತ್ರದಲ್ಲಿ ಲವ್, ಕಾಮಿಡಿ ಹೀಗೆ ಎಲ್ಲಾ ಅಂಶಗಳು ಇವೆ. ನನ್ನ ಚಿತ್ರಗಳಲ್ಲಿ ಒಂದೆರೆಡು ಹಿಟ್ ಹಾಡುಗಳು ಇರುತ್ತಿದ್ದವು. ಆದರೆ ಇತ್ತೀಚಿನ ನನ್ನ ಸಿನಿಮಾಗಳಲ್ಲಿ ಅಂತಹ ಹಿಟ್ ಹಾಡುಗಳು ಯಾವುದು ಇರಲಿಲ್ಲ. ‘ಜೋಗ್ 101 ’ ಚಿತ್ರದ ಹಾಡುಗಳು ಆ ಕೊರತೆಯನ್ನು ದೂರ ಮಾಡಿದೆ ಎಂದು ವಿಜಯ್ ರಾಘವೇಂದ್ರ ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News