Pavitra Lokesh : ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ​​​​​​​​​​ ನರೇಶ್ ನಡುವಿನ ಸಂಬಂಧದ ಬಗ್ಗೆ ಸೃಷ್ಟಿಯಾದ ವಿವಾದದ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಇಬ್ಬರೂ ಮೈಸೂರಿನ ಹೋಟೆಲ್​​ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಡೇಟಿಂಗ್‌ಗಾಗಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮಧ್ಯೆ ಒಪ್ಪಂದ ನಡೆದಿತ್ತು ಎಂಬ ಗಾಸಿಪ್‌ ಒಂದು ಶುರುವಾಗಿದೆ. ಅಲ್ಲದೇ, ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಕೂಡ ಹೇಳಲಾಗ್ತಿದೆ. ಟಾಲಿವುಡ್ ಇಂಡಸ್ಟ್ರಿಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧ ದೊಡ್ಡ ವಿವಾದವನ್ನೇ ಸೃಷ್ಟಿ ಮಾಡಿದೆ.  ಈ ಕುಟುಂಬ ಕಲಹ ಕೆಲ ದಿನಗಳ ಹಿಂದೆ ಬೀದಿಗೆ ಬಂದಿತ್ತು. ಇದಕ್ಕೆಲ್ಲಾ ನಟಿ ಪವಿತ್ರಾ ಲೋಕೇಶ್ ಕಾರಣ ಎಂದು ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇಲ್ಲಿನ ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುತ್ತಾರೆ, ಪ್ರಾಣಿಗಳ ಕೊಬ್ಬನ್ನು ಹಚ್ಚಿಕೊಳ್ತಾರೆ!


ಟಾಲಿವುಡ್‌ ನಟ ನರೇಶ್‌ ಅವರ ಮೂರನೇ ಪತ್ನಿ ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಇಬ್ಬರ ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗಿತ್ತು. ಆದರೆ ಇದೀಗ ಇವರಿಬ್ಬರ ನಡುವೆ ಡೇಟಿಂಗ್‌ ಒಪ್ಪಂದ ನಡೆದಿದೆ ಎಂದು ಗುಸುಗುಸು ಸುದ್ದಿಯೊಂದು ಹರಿದಾಡುತ್ತಿದೆ. ನಟ ನರೇಶ್‌ ಮೂರು ಮದುವೆಯಾಗಿದ್ದಾರೆ. ಪವಿತ್ರಾ ಲೋಕೇಶ್‌ ಅವರ ಜೊತೆ ನಾಲ್ಕನೇ ಬಾರಿ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ ಎಂಬ ಮಾತುಗಳ ಮಧ್ಯೆ ಇದೀಗ ಅವರ ನಡುವೆ ಒಪ್ಪಂದ ಒಂದಿದೆ ಎಂಬ ಸುದ್ದಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. 


ಇವರಿಬ್ಬರ ನಡುವೆ ಡೇಟಿಂಗ್‌ ಒಪ್ಪಂದ ನಡೆದಿದೆ. ಆ ಒಪ್ಪಂದದ ಪ್ರಕಾರ ನರೇಶ್‌ ಅವರು ಪವಿತ್ರಾ ಲೋಕೇಶ್‌ ಅವರಿಗೆ ಪ್ರತಿ ತಿಂಗಳು 25 ಲಕ್ಷ ರೂಪಾಯಿ ಹಣವನ್ನು ನೀಡಬೇಕು. ಹಾಗೋಂದು ವೇಳೆ ನರೇಶ್‌ ಏನಾದರೂ ಪವಿತ್ರಾ ಅವರಿಗೆ ಕೈ ಕೊಟ್ಟರೆ 50 ಕೋಟಿ ಹಣವನ್ನು ನೀಡಬೇಕು ಎಂದು ಸಿನಿರಂಗದಲ್ಲಿ ಗಾಸಿಪ್‌ ಶುರುವಾಗಿದೆ. ಈ ಒಪ್ಪಂದದ ಬಗ್ಗೆ ಆಗಲಿ ಅವರ ಸಂಬಂಧದ ಬಗ್ಗೆ ಆಗಲಿ ಯಾವುದೇ ಅಧಿಕೃತ ದಾಖಲೆಗಳು ಮಾತ್ರ ದೊರೆತಿಲ್ಲ. ಎಲ್ಲವೂ ಊಹಾಪೋಹಗಳು ಆಗಿವೆ. ತೆಲುಗಿನ ಮಾಧ್ಯಮಗಳಲ್ಲಿ ಈ ಅಗ್ರೀಮೆಂಟ್‌ ಬಗ್ಗೆ ಸುದ್ದಿ ಹರಿದಾಡುತ್ತಿದೆ. 


ಇದನ್ನೂ ಓದಿ: ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ್ ಗೆ ಹೃದಯಾಘಾತ : ಏಮ್ಸ್ ಗೆ ದಾಖಲು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.