Viral Video: ಮಾವನ ಜೊತೆ ಸೊಸೆಯ ತರಲೆ-ತುಂಟಾಟ: ಅಮಿತಾಬ್-ಐಶ್ ಕ್ಯೂಟ್ ವಿಡಿಯೋ ನೋಡಿ
Amitabh Bacchan and Aishwarya Rai: ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿರುವ ವೀಡಿಯೊದಲ್ಲಿ, ಐಶ್ವರ್ಯಾ ಜೋರಾಗಿ ಏನೋ ಹೇಳುತ್ತಾ, ಬಿಗ್ ಬಿ ಅವರನ್ನು ಹಗ್ ಮಾಡುತ್ತಿದ್ದಾರೆ. ಆದರೆ ಈ ವರ್ತನೆ ಬಚ್ಚನ್ ಅವರನ್ನು ಮುಜುಗರಕ್ಕೀಡು ಮಾಡಿದೆ. ಐಶ್ ಮಾತ್ರ `ಇವರು ಬೆಸ್ಟ್” ಎಂದು ಜೋರಾಗಿ ಕೂಗಿ ಹೇಳಿದ್ದಾರೆ.
Amitabh Bacchan and Aishwarya Rai: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಪ್ರಿಯರು ಮಾತ್ರವಲ್ಲ, ಅವರ ಸಮಕಾಲೀನರು ಮತ್ತು ಹಿಂದಿ ಚಿತ್ರರಂಗದ ಅನೇಕ ನಟರು, ತಮ್ಮ ನೆಚ್ಚಿನ ನಟನ ಬಗ್ಗೆ ಒಳ್ಳೆಯ ಮಾತುಗಳನ್ನೇ ಹೇಳುತ್ತಾರೆ. ಇನ್ನು ಇವರ ಪುತ್ರ ಅಭಿಷೇಕ್ ಬಚ್ಚನ್ ಅವರ ಪತ್ನಿ, ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಸಾಕಷ್ಟು ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇನ್ನು ಮಾವ ಸೊಸೆಯ ಅನುಬಂಧ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲೊಂದು ವಿಡಿಯೋ ಇದೆ.
ಇದನ್ನೂ ಓದಿ: Relationship Tips: ಸಂಗಾತಿ ಜೊತೆಗಿನ ನಿಮ್ಮ ಸಂಬಂಧವನ್ನು ಸುಮಧುರಗೊಳಿಸಬೇಕೇ? ಈ ಸಲಹೆಗಳನ್ನು ಟ್ರೈ ಮಾಡಿ ನೋಡಿ!
ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿರುವ ವೀಡಿಯೊದಲ್ಲಿ, ಐಶ್ವರ್ಯಾ ಜೋರಾಗಿ ಏನೋ ಹೇಳುತ್ತಾ, ಬಿಗ್ ಬಿ ಅವರನ್ನು ಹಗ್ ಮಾಡುತ್ತಿದ್ದಾರೆ. ಆದರೆ ಈ ವರ್ತನೆ ಬಚ್ಚನ್ ಅವರನ್ನು ಮುಜುಗರಕ್ಕೀಡು ಮಾಡಿದೆ. ಐಶ್ ಮಾತ್ರ "ಇವರು ಬೆಸ್ಟ್” ಎಂದು ಜೋರಾಗಿ ಕೂಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವರ ಕೆನ್ನೆಯನ್ನು ಮಗುವಿನಂತೆ ಸವರಿ ತರಲೆ ಮಾಡಿದ್ದಾರೆ. ಅದಕ್ಕೆ ಬಿಗ್ ಬಿ, “ಆರಾಧ್ಯ ಬಚ್ಚನ್’ನಂತೆ ವರ್ತಿಸುವುದನ್ನು ನಿಲ್ಲಿಸು” ಎಂದು ಹೇಳುವ ಮೂಲಕ ಶಾಂತಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಐಶ್ "ಆದರೆ ಇದು ಎಲ್ಲರಿಗೂ ತಿಳಿದಿದೆ" ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟಾರ್‌ಡಸ್ಟ್ ಅವಾರ್ಡ್ ಸಮಾರಂಭದ ವೀಡಿಯೊ ಇದಾಗಿದ್ದು, ಇದರಲ್ಲಿ ಅಮಿತಾಬ್ ಕೊಂಚ ವಿಭಿನ್ನವಾಗಿ ಕಾಣುತ್ತಾರೆ.
IPLನಲ್ಲಿ ಒಂದೇ ಒಂದು ಪಂದ್ಯವನ್ನಾಡದೆ 2 ಬಾರಿ ಚಾಂಪಿಯನ್ ಆದ ಆಟಗಾರನೀತ! ಹೆಸರು ಕೇಳಿದ್ರೆ ಶಾಕ್ ಆಗ್ತೀರ
ಅದೇ ವರ್ಷ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಐಶ್ವರ್ಯಾ ತನ್ನ ಮಾವ ಅಮಿತಾಭ್ ಶಾಶ್ವತವಾಗಿ ಐಕಾನ್ ಆಗಿ ಉಳಿಯುತ್ತಾರೆ ಎಂದು ಹೇಳಿದ್ದರು. "ನಾವೆಲ್ಲರೂ ಇಂದು ಕುಟುಂಬವಾಗಿದ್ದೇವೆ. ಅವರು ಪಿತಾಶ್ರೀ (PAA). ಅಭಿಷೇಕ್ ಅವರ ಮಗನಾಗಿ ಯಾವತ್ತೂ ಹೇಳುತ್ತಾರೆ; ಅಪಾರವಾದ ಶ್ರಮವನ್ನು ನನ್ನ ತಂದೆಯಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು. ಇದು ಗೌರವ ಮತ್ತು ಮೆಚ್ಚುಗೆಯನ್ನು ಉಂಟುಮಾಡುತ್ತದೆ. ಎಂದೆಂದಿಗೂ ನಮಗೆಲ್ಲ ಅಪ್ರತಿಮ ವ್ಯಕ್ತಿತ್ವವಾಗಿದ್ದಾರೆ. ಇಂದು ಮತ್ತು ಎಂದೆಂದಿಗೂ ಎಲ್ಲರೂ ಹಾಗೆ ಯೋಚಿಸುತ್ತಾರೆ. ಇದನ್ನು ಮೆಚ್ಚಬೇಕು, ಗೌರವಿಸಬೇಕು ಮತ್ತು ಪ್ರಶಂಸಿಸಬೇಕು ”ಎಂದು ಅವರು ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.