IPL 2023: ಗುಜರಾತ್ ಟೈಟಾನ್ಸ್ ತಂಡ IPL ಸೀಸನ್ 15 ರ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ತಂಡವು ಸಂಪೂರ್ಣ ಸೀಸನ್’ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿತ್ತು. ಅದೇ ಕಾರಣದಿಂದ IPL 2022 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಗುಜರಾತ್ ಟೈಟಾನ್ಸ್ ತಂಡವು ಒಂದಕ್ಕಿಂತ ಹೆಚ್ಚು ಮ್ಯಾಚ್ ವಿನ್ನರ್ ಆಟಗಾರರಿಂದ ತುಂಬಿತ್ತು. ಆದರೆ ಒಂದೇ ಒಂದು ಪಂದ್ಯವನ್ನು ಆಡದೆ ಸತತ ಎರಡು ಬಾರಿ ಚಾಂಪಿಯನ್ ಪ್ರಶಸ್ತಿ ಎತ್ತಿಹಿಡಿದಿದ್ದ ಆಟಗಾರನೊಬ್ಬ ಈ ತಂಡದಲ್ಲಿದ್ದನು.
ಗುಜರಾತ್ ಟೈಟಾನ್ಸ್ ತಂಡ IPL ಸೀಸನ್ 15 ರ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ತಂಡವು ಸಂಪೂರ್ಣ ಸೀಸನ್’ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿತ್ತು. ಅದೇ ಕಾರಣದಿಂದ IPL 2022 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಗುಜರಾತ್ ಟೈಟಾನ್ಸ್ ತಂಡವು ಒಂದಕ್ಕಿಂತ ಹೆಚ್ಚು ಮ್ಯಾಚ್ ವಿನ್ನರ್ ಆಟಗಾರರಿಂದ ತುಂಬಿತ್ತು. ಆದರೆ ಒಂದೇ ಒಂದು ಪಂದ್ಯವನ್ನು ಆಡದೆ ಸತತ ಎರಡು ಬಾರಿ ಚಾಂಪಿಯನ್ ಪ್ರಶಸ್ತಿ ಎತ್ತಿಹಿಡಿದಿದ್ದ ಆಟಗಾರನೊಬ್ಬ ಈ ತಂಡದಲ್ಲಿದ್ದನು.
ಗುಜರಾತ್ ಟೈಟಾನ್ಸ್ ಕಳೆದ ವರ್ಷ ಒಟ್ಟು 8 ವಿದೇಶಿ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಂಡಿತ್ತು. ಈ ತಂಡದಲ್ಲಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡೊಮಿನಿಕ್ ಡ್ರೇಕ್ಸ್ ಕೂಡ ಸೇರ್ಪಡೆಗೊಂಡಿದ್ದಾರೆ. ಡೊಮಿನಿಕ್ ಡ್ರೇಕ್ಸ್ ಅವರನ್ನು ಗುಜರಾತ್ 1.10 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಅವರು ಒಮ್ಮೆಯೂ ಪ್ಲೇಯಿಂಗ್ XI ಗೆ ಸೇರ್ಪಡೆಗೊಂಡಿರಲಿಲ್ಲ.
ಐಪಿಎಲ್ 2021 ರಲ್ಲಿ ಇಂಗ್ಲಿಷ್ ಆಲ್ ರೌಂಡರ್ ಸ್ಯಾಮ್ ಕುರ್ರಾನ್ ಗಾಯಗೊಂಡ ನಂತರ, ಡೊಮಿನಿಕ್ ಡ್ರೇಕ್ಸ್ ಅವರನ್ನು ಬದಲಿಯಾಗಿ ತಂಡಕ್ಕೆ ಸೇರಿಸಲಾಯಿತು. ಆ ಋತುವಿನಲ್ಲಿ ಡೊಮಿನಿಕ್ ಡ್ರೇಕ್ಸ್ ಅನ್ ಕ್ಯಾಪ್ಡ್ ಆಟಗಾರನಾಗಿ ಪ್ರವೇಶ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೂಡ ಡೊಮಿನಿಕ್ ಡ್ರೇಕ್ಸ್ ಸ್ಥಾನ ಪಡೆದಿದ್ದರು.
ಡೊಮಿನಿಕ್ ಡ್ರಾಕ್ಸ್ ಅವರು ಇಲ್ಲಿಯವರೆಗೆ ವೆಸ್ಟ್ ಇಂಡೀಸ್ ಪರ ಒಟ್ಟು 10 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 9.06 ಮತ್ತು ಬ್ಯಾಟಿಂಗ್’ನಲ್ಲಿ 15 ರನ್’ಗಳ ಎಕಾನಮಿಯೊಂದಿಗೆ 6 ವಿಕೆಟ್’ಗಳನ್ನು ಪಡೆದಿದ್ದಾರೆ. ಡೊಮಿನಿಕ್ ಡ್ರೇಕ್ಸ್ ಇದುವರೆಗೆ 3 ಪ್ರಥಮ ದರ್ಜೆ, 25 ಲಿಸ್ಟ್-ಎ ಮತ್ತು 43 ಟಿ20 ಪಂದ್ಯಗಳನ್ನು ಆಡಿದ್ದಾರೆ.