ʼಡಿ ಬಾಸ್ʼ ಕಾರ್ ಡ್ರಿಫ್ಟಿಂಗ್ ನೋಡಿ ಸ್ಟನ್ ಆದ ಫ್ಯಾನ್ಸ್.! ಅದಕ್ಕೆ ಹೇಳೋದು ದಚ್ಚು ಡಿಫ್ರೇಂಟ್ ಅಂತ
DBoss : ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಬೆಟ್ಟದಿಂದ ಇಳಿಯುವಾಗ ಮಣ್ಣು ಸಡಿಲಗೊಂಡಿದ್ದರಿಂದ ಜಾರಿ ರಸ್ತೆಯ ಪಕ್ಕದಲ್ಲಿ ಸಿಕ್ಕಿಕೊಂಡಿತ್ತು. ಸ್ವಲ್ಪ ಯಾಮಾರಿದ್ದರೂ ಪಾತಾಳಕ್ಕೆ ಹೋಗುತ್ತಿತ್ತು. ಹೀಗೆ ಸಿಕ್ಕಿಕೊಂಡಿದ್ದ ಕಾರನ್ನು ಮತ್ತೆ ದಾಸ ರಸ್ತೆಗೆ ಎಳೆದು ತಂದಿದ್ದೇ ರೋಚಕ ಸಂಗತಿ.
Darshan car drifting video : ಇಷ್ಟು ದಿನ ಕ್ಯಾಮರಾ ಹಿಡಿದು ಕಾಡು ಮೇಡು ಅಲೆದು ವನ್ಯ ಜೀವಿಗಳ ಅದ್ಭುತ ಕ್ಷಣಗಳನ್ನು ಕ್ಲಿಕ್ಕಿಸುತ್ತಿದ್ದ ನಟ ದರ್ಶನ್ ಅವರು ಇದೀಗ ಕಾರ್ ಸ್ಟೇರಿಂಗ್ ಹಿಡಿದು ಮೈನವಿರೆಳಿಸುವಂತೆ ಡ್ರಿಫ್ಟಿಂಗ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೋಚಕವಾಗಿದೆ.
ಹೌದು.. ದರ್ಶನ್ ಅವರಿಗೆ ಕಾಡು, ಕಾಡಿನ ಪ್ರಾಣಿಗಳು ಅಂದ್ರೆ ವಿಶೇಷ ಕಾಳಜಿ ಇದೆ. ಅದಕ್ಕಾಗಿ ತಮ್ಮ ಬಿಡುವಿನ ಸಮಯವನ್ನು ಹೆಚ್ಚಾಗಿ ವನ್ಯ ಜೀವಿಗಳ ಫೋಟೋ ಕ್ಲಿಕ್ಕಿಸಲು ಕಳೆಯುತ್ತಾರೆ. ಇಷ್ಟು ದಿನ ನಟನೆ, ಕ್ಯಾಮರಾ ಹಿಡಿದು ಅದ್ಭುತ ನಟ ಮತ್ತು ಛಾಯಾಗ್ರಾಹಕ ಅಂತ ಅಭಿಮಾನಿಗಳಿಂದ ಕರೆಸಿಕೊಂಡಿದ್ದ ಗಜ ಇದೀಗ ಕಾರ್ ಡ್ರಿಫ್ಟಿಂಗ್ ಮಾಡುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ.
ಇದನ್ನೂ ಓದಿ: RRR 2 ಶೂಟಿಂಗ್ ಶೀಘ್ರದಲ್ಲೇ ಶುರು, ಈ ಬಾರಿ ರಾಜಮೌಳಿ ಹೇಳ್ತಿಲ್ಲ ಆಕ್ಷನ್ ಕಟ್.!
ಸದ್ಯ ನಟ ದರ್ಶನ್ ಅವರು ಮಲೆನಾಡಿನಲ್ಲಿ ಪ್ರವಾಸದಲ್ಲಿದ್ದಾರೆ. ಮಲೆನಾಡಿಗೂ ಮಳೆರಾಯನಿಗೂ ಬಿಟ್ಟು ಬಿಡದ ನಂಟು ಅಂತ ಎಲ್ಲರಿಗೂ ಗೊತ್ತಿದೆ. ಅಬ್ಬರದ ಮಳೆಯ ನಡುವೆಯೂ ದರ್ಶನ್ ಅವರು ತಮ್ಮ ಗ್ಯಾಂಗ್‌ನೊಂದಿಗೆ ಟ್ರಿಪ್ ಹೋಗಿದ್ದು, ಗುಡ್ಡಗಾಡು ಪ್ರದೇಶದಲ್ಲಿ ಪಕೃತಿ ನಡುವೆ ಸಮಯ ಕಳೆಯುತ್ತಿದ್ದಾರೆ.
ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಸರ್ಪ್ರೈಸ್
ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಬೆಟ್ಟದಿಂದ ಇಳಿಯುವಾಗ ಮಣ್ಣು ಸಡಿಲಗೊಂಡಿದ್ದರಿಂದ ಜಾರಿ ರಸ್ತೆಯ ಪಕ್ಕದಲ್ಲಿ ಸಿಕ್ಕಿಕೊಂಡಿತ್ತು. ಸ್ವಲ್ಪ ಯಾಮಾರಿದ್ದರೂ ಪಾತಾಳಕ್ಕೆ ಹೋಗುತ್ತಿತ್ತು. ಹೀಗೆ ಸಿಕ್ಕಿಕೊಂಡಿದ್ದ ಕಾರನ್ನು ಮತ್ತೆ ದಾಸ ರಸ್ತೆಗೆ ಎಳೆದು ತಂದಿದ್ದೇ ರೋಚಕ ಸಂಗತಿ.
ಇಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ ಡಿಫ್ಟ್ ಆಗುತ್ತಿರುತ್ತದೆ. ಅಂತಹುದರ ನಡುವೆ ಬ್ಯಾಲೆನ್ಸ್ ಮಾಡಿಕೊಂಡು ಬಹಳ ಎಚ್ಚರಿಕೆಯಿಂದ ವಾಹನವನ್ನು ರಸ್ತೆಗೆ ತರುವುದು ಅಷ್ಟು ಸಲಿಸಲ್ಲ. ಸ್ವಲ್ಪ ಯಾಮಾರಿದ್ರು ಪ್ರಾಣಕ್ಕೆ ಹಾನಿ ಖಂಡಿತ. ಆದ್ರೆ ದಚ್ಚು ಸ್ವಲ್ಪವೂ ಎದರದೆ ಕಾರನ್ನು ಓಡಿಸಿ ಡಿಫ್ಟಿಂಗ್ ಮಾಡುವ ಮೂಲಕ ರಸ್ತೆಗೆ ತಂದರು. ಈ ಕ್ಷಣದ ದೃಶ್ಯ ಮೈ ರೋಮಾಂಚನಗೊಳಿಸುವಂತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.