ಎರಡು ಮದುವೆಯಾದರೂ ಮತ್ತೆ ಈ ನಟಿಯ ಪ್ರೇಮ ಪಾಶದಲ್ಲಿ ಬಿದ್ದಿದ್ದರಂತೆ ನಟ ಧರ್ಮೇಂದ್ರ !

Dharmendra Affair: ಧರ್ಮೇಂದ್ರ ಎರಡು ಮದುವೆ ಮಾಡಿಕೊಂಡಿದ್ದಾರೆ. ಎರಡು ಮದುವೆಯಾಗಿದ್ದರೂ ಮತ್ತೆ ಧರ್ಮೇಂದ್ರ ಮತ್ತೊಂದು ನಟಿಯ ಪ್ರೇಮ ಪಾಶದಲ್ಲಿ ಸಿಲುಕಿದ್ದರಂತೆ.

Written by - Ranjitha R K | Last Updated : Jul 12, 2023, 11:12 AM IST
  • ದಿಗ್ಗಜ ತಾರೆಗಳ ಪಟ್ಟಿಯಲ್ಲಿ ಧರ್ಮೇಂದ್ರ ಹೆಸರೂ ಸೇರಿದೆ.
  • ಸಿನಿ ಜೀವನ ಮಾತ್ರವಲ್ಲದೆ ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿಯಲ್ಲಿರುತ್ತಾರೆ.
  • ಧರ್ಮೇಂದ್ರ ಮತ್ತೊಂದು ನಟಿಯ ಪ್ರೇಮ ಪಾಶದಲ್ಲಿ ಸಿಲುಕಿದ್ದರಂತೆ.
ಎರಡು ಮದುವೆಯಾದರೂ ಮತ್ತೆ ಈ ನಟಿಯ ಪ್ರೇಮ ಪಾಶದಲ್ಲಿ ಬಿದ್ದಿದ್ದರಂತೆ ನಟ ಧರ್ಮೇಂದ್ರ ! title=

ಬೆಂಗಳೂರು : ಬಾಲಿವುಡ್ ದಿಗ್ಗಜ ತಾರೆಗಳ ಪಟ್ಟಿಯಲ್ಲಿ ಧರ್ಮೇಂದ್ರ ಹೆಸರೂ ಸೇರಿದೆ. ಧರ್ಮೇಂದ್ರ ತಮ್ಮ ಸಿನಿ ಜೀವನ ಮಾತ್ರವಲ್ಲದೆ ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿಯಲ್ಲಿರುತ್ತಾರೆ. ಧರ್ಮೇಂದ್ರ ಎರಡು ಮದುವೆ ಮಾಡಿಕೊಂಡಿದ್ದಾರೆ. ಪ್ರಕಾಶ್ ಕೌರ್ ಅವರೊಂದಿಗೆ ಮೊದಲು ಸಪ್ತಪದಿ   1980 ರಲ್ಲಿ ಬಾಲಿವುಡ್‌ನ ಕ ಡ್ರೀಮ್ ಗರ್ಲ್   ಹಮಾ ಮಾಲಿನಿ ಅವರನ್ನು ವಿವಾಹವಾದರು. ಹೀಗೆ ಎರಡು ಮದುವೆಯಾಗಿದ್ದರೂ ಮತ್ತೆ ಧರ್ಮೇಂದ್ರ ಮತ್ತೊಂದು ನಟಿಯ ಪ್ರೇಮ ಪಾಶದಲ್ಲಿ ಸಿಲುಕಿದ್ದರಂತೆ.  ಈ ನಟಿಯ ಜೊತೆ ಧರ್ಮೇಂದ್ರ ಹೆಸರು ಬಹಳ ಜೋರಾಗಿಯೇ ಕೇಳಿ ಬಂದಿತ್ತು.  

ನಟಿ ಅನಿತಾ ರಾಜ್ ಜತೆ ಧರ್ಮೇಂದ್ರ ಹೆಸರು ತಳುಕು :
ವರದಿಗಳ ಪ್ರಕಾರ, ಒಂದು ಕಾಲದಲ್ಲಿ ಧರ್ಮೇಂದ್ರ ಮತ್ತು ಅನಿತಾ ರಾಜ್ ನಡುವೆ ನಿಕಟತೆ ತುಂಬಾ ಹೆಚ್ಚಿತ್ತು. ಇವರಿಬ್ಬರು ಅನೇಕ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು ಕೂಡಾ. 'ಜಲ್ ಜಲಾ , 'ಕರಿಷ್ಮಾ ಕುದ್ರತ್ ಕಾ', 'ಇನ್ಸಾನಿಯತ್ ಕೆ ದುಷ್ಮನ್' ಮತ್ತು 'ನೌಕರ್ ಬಿವಿ ಕಾ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಧರ್ಮೆಂದ್ರ ಮತ್ತು ಅನಿತಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವಾಗಲೇ ಇಬ್ಬರ ನಡುವೆ ಪರಸ್ಪರ ಆತ್ಮೀಯತೆ ಬೆಳೆದಿತ್ತು ಎನ್ನಲಾಗಿದೆ. 

ಇದನ್ನೂ ಓದಿ : 14 ಬಾರಿ ಟ್ರೈ ಮಾಡಿದ್ರೂ ಗರ್ಭಿಣಿಯಾಗದ ಈ ನಟಿ ಸಲ್ಮಾನ್ ಖಾನ್ ಕೊಟ್ಟ ಆ ಸಲಹೆಯಿಂದ 2 ಮಕ್ಕಳ ತಾಯಿಯಾದ್ಳು!

ವರದಿಗಳನ್ನು ನಂಬುವುದಾದರೆ, ಧರ್ಮೇಂದ್ರ ಅವರು ಅನಿತಾ ರಾಜ್ ಹೆಸರನ್ನು ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಸೂಚಿಸುತ್ತಿದ್ದರಂತೆ. ಆದರೆ ಧರ್ಮೇಂದ್ರ ಮತ್ತು ಅನಿತಾ ರಾಜ್  ವಿಚಾರ ಪತ್ನಿ ಹೇಮಾ ಮಾಲಿನಿಗೆ ತಿಳಿದಾಗ ಮನೆಯಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆದಿದ್ದಂತೆ. ಇದಾದ ಬಳಿಕ ಗಲಾಟೆ ನಡೆದಿದ್ದು, ಧರ್ಮೇಂದ್ರ ಅವರು ಅನಿತಾ ರಾಜ್‌ನಿಂದ ದೂರ ಸರಿದಿದ್ದಾರೆ ಎನ್ನಲಾಗಿದೆ. 

ಯಾರು ಈ ಅನಿತಾ ರಾಜ್ ? : 
ಅನಿತಾ ರಾಜ್  ಆ ಕಾಲದ ಪ್ರಸಿದ್ಧ ಕ್ಯಾರೆಕ್ಟರ್ ಆರ್ಟಿಸ್ಟ್ ಜಗದೀಶ್ ರಾಜ್ ಅವರ ಮಗಳು. ಜಗದೀಶ್ ರಾಜ್ ಬಾಲಿವುಡ್ ಚಲನಚಿತ್ರಗಳಲ್ಲಿ ಗರಿಷ್ಠ 144 ಬಾರಿ ಪೊಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಾರಣದಿಂದಾಗಿ ಅವರ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿಯೂ  ಸೇರಿಸಲಾಗಿದೆ. ಆದರೆ, ಅನಿತಾ ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ಟಿವಿ ಧಾರಾವಾಹಿಗಳಾದ 'ಏಕ್ ಥಾ ರಾಜಾ ಏಕ್ ಥಿ ರಾಣಿ' ಮತ್ತು 'ಛೋಟಿ ಸರ್ದಾರ್ನಿ'ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅನಿತಾ ರಾಜ್ 1986 ರಲ್ಲಿ ಚಲನಚಿತ್ರ ನಿರ್ಮಾಪಕ ಸುನಿಲ್ ಹಿಂಗೋರಾಣಿ ಅವರನ್ನು ವಿವಾಹವಾಗಿದ್ದರು. 

ಇದನ್ನೂ ಓದಿ : Shivarajkumar Birthday: ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಗೆ ಹುಟ್ಟುಹಬ್ಬದ ಸಂಭ್ರಮ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News