ಅಭಿಮಾನಿಯ ಅಗಲಿಕೆಗೆ ಕಂಬನಿ ಮಿಡಿದ ʼದಾಸʼ..! ಪ್ಯಾನ್ಸ್‌ಗೆ ದಚ್ಚು ಮಾಡಿದ ಮನವಿ ಏನು..?
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯಾಗಿದ್ದ ಅಭಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ನೆಚ್ಚಿನ ಅಭಿಮಾನಿಯ ಅಗಲಿಕೆಗೆ ದಚ್ಚು ಕಂಬನಿ ಮಿಡಿದ್ದಾರೆ. ಅಲ್ಲದೆ, ತಮ್ಮ ಪ್ಯಾನ್ಸ್‌ಗೆ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಅಭಿ ʼದಾಸʼನ ಕಟ್ಟಾಮಾನಿಯಾಗಿದ್ದರು. ʼಯಜಮಾನʼನಿಗಾಗಿ ಗುಡಿ ಕಟ್ಟಿಸುವುದಾಗಿ ಹೇಳಿದ್ದರು.
Darshan DBoss : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯಾಗಿದ್ದ ಅಭಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ನೆಚ್ಚಿನ ಅಭಿಮಾನಿಯ ಅಗಲಿಕೆಗೆ ದಚ್ಚು ಕಂಬನಿ ಮಿಡಿದ್ದಾರೆ. ಅಲ್ಲದೆ, ತಮ್ಮ ಪ್ಯಾನ್ಸ್‌ಗೆ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಅಭಿ ʼದಾಸʼನ ಕಟ್ಟಾಮಾನಿಯಾಗಿದ್ದರು. ʼಯಜಮಾನʼನಿಗಾಗಿ ಗುಡಿ ಕಟ್ಟಿಸುವುದಾಗಿ ಹೇಳಿದ್ದರು.
ಡಿ ಬಾಸ್ ದರ್ಶನ್ ಅವರು ತಮ್ಮ ಅಭಿಮಾನಿಯ ಸಾವಿನ ಕುರಿತು ಟ್ಟಿಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ʼಎಲ್ಲರಿಗೂ ಕಳಕಳಿಯ ಮನವಿ. ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗೃಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ. ಅಭಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆʼ ಎಂದು ಬರೆದುಕೊಂಡಿದ್ದಾರೆ.
ಮತ್ತೇ ತೆಲುಗಿನಲ್ಲೆ ಸಿನಿಮಾ ಮಾಡ್ತಾರಂತೆ ಪ್ರಶಾಂತ್ ನೀಲ್.. ಕನ್ನಡದ KGF 3 ಗತಿ ಏನು..!
ಅಭಿ ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಕಳೆದ ಹತ್ತು ದಿನದ ಹಿಂದೆ ಡಿಬಾಸ್‌ಗಾಗಿ ದೇವಸ್ಥಾನ ಕಟ್ಟಿಸುವುದಾಗಿ ಹೇಳಿದ್ದರು. ಆದ್ರೆ ದುರ್ದೈವ ಅವರು ಇಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಭಿ ಶಬರಿಮಲೆಗೆ ಹೋದಾಗ ಅಲ್ಲಿಯೂ ಸಹ ಕ್ರಾಂತಿ ಸಿನಿಮಾದ ಪ್ರಚಾರ ಮಾಡಿದ್ದರು. ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ದಚ್ಚು ಮುಂಬರುವ ಸಿನಿಮಾದ ಕುರಿತು ಸ್ವಇಚ್ಛೆಯಿಂದ ಅದ್ಧೂರಿಯಾಗಿ ಪ್ರಚಾರ ಕಾರ್ಯ ಮಾಡುತ್ತಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.