ಬಿಗ್ಬಾಸ್ ಮಾಜಿ ಸ್ಪರ್ಧಿ ಮೇಲೆ ಅತ್ಯಾಚಾರ, ಕೊಲೆ ಬೆದರಿಕೆ..!
Urfi Javed chote pandit : ಸಾಮಾಜಿಕ ಜಾಲತಾಣದಲ್ಲಿ ಉರ್ಫಿ ಪೋಸ್ಟ್ ಮಾಡಿದ ಫೋಟೋ ಒಂದು ವಿವಾದಗಳ ಕೇಂದ್ರ ಬಿಂದುವಾಗಿದೆ. ಈ ವಿವಾದ ಕೊಲೆ ಬೆದರಿಕೆಯವರೆಗೂ ಬೆಳೆದಿದೆ. ಈ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..
Urfi Javed : ಬಾಲಿವುಡ್ ಬೆಡಗಿ ಉರ್ಫಿ ಜಾವೇದ್ ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಉರ್ಫಿ ತಮ್ಮ ಅದ್ದೂರಿ ಉಡುಗೆ ತೊಡುಗೆಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಮೂಲಕ ಕಾಲಕಾಲಕ್ಕೆ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವರ ಪೋಸ್ಟ್ಗಳು ಅನೇಕ ವಿವಾದಗಳಿಗೆ ಕಾರಣವಾಗುತ್ತವೆ.
ಇತ್ತೀಚೆಗೆ ಬಿಗ್ ಬಾಸ್ ಸುಂದರಿ ಪೋಸ್ಟ್ ಮಾಡಿದ ಫೋಟೋ ಒಂದು ವಿವಾದಗಳ ಕೇಂದ್ರ ಬಿಂದುವಾಗಿದೆ. ಈ ವಿವಾದ ಕೊಲೆ ಬೆದರಿಕೆಯವರೆಗೂ ಬೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಉರ್ಫಿ ಹಾಕಿರುವ ಫೋಟೋಗಳನ್ನು ಡಿಲೀಟ್ ಮಾಡದಿದ್ದರೆ ಕೊಲೆ ಮಾಡುವುದಾಗಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ಇದನ್ನು ಸ್ವತಃ ಉರ್ಫೀ ಹೇಳಿಕೊಂಡಿದ್ದಾರೆ.
ಕರುನಾಡ ʼKGFʼ ರೋಚಕ ನೈಜ ಕಥೆ ಆಧಾರಿತ ವಿಕ್ರಮ್ ʼತಂಗಲಾನ್ʼ ಟೀಸರ್ ಔಟ್..!
ಉರ್ಫಿ ಜಾವೇದ್ ಮಾಡೆಲ್ ಮತ್ತು ನಟಿಯಾಗಿದ್ದು, ತಮ್ಮ ಚಿತ್ರ ವಿಚಿತ್ರ ಉಡುಪಿನಿಂದ ಟ್ರೆಂಡಿಂಗ್ ಆಗಿದ್ದಾರೆ. ಇತ್ತೀಚಿಗೆ ಅವರು 'ಭೂಲ್ ಭುಲಯ್ಯ' ಚಿತ್ರದ ಚೋಟಾ ಪಂಡಿತ್ ಲುಕ್ನಲ್ಲಿ ಫೋಟೋಶೂಟ್ ಮಾಡಿಸಿದ್ದರು. ಅಷ್ಟೇ ಅಲ್ಲದೆ, ಉರ್ಫಿ ಅದೇ ಗೆಟಪ್ನಲ್ಲಿ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದರು. ಇದರಿಂದ ಆಕೆಯ ಫೋಟೋಗಳು ವೈರಲ್ ಆಗಿವೆ. ಸಧ್ಯ ಕೆಲ ಅಪರಿಚಿತರು ಉರ್ಫಿ ಜಾವೇದ್ಗೆ ಕೊಲೆ ಬೆದರಿಕೆ ಹಾಕಿದ್ದಾರೆ.
ವಿಚಿತ್ರ ಫ್ಯಾಷನ್ ಗಳಿಂದ ಟೀಕೆಗೆ ಗುರಿಯಾಗಿದ್ದ ಉರ್ಪಿಗೆ ಚೋಟಾ ಪಂಡಿತ್ ಗೆಟಪ್ ಇನ್ನಿಲ್ಲದ ತಲೆನೋವು ತಂದಿದೆ. ಚೋಟಾ ಪಂಡಿತ್ ಖಾಸಗಿ ಪಾರ್ಟಿಯಲ್ಲಿ ಗೆಟಪ್ನಲ್ಲಿ ಭಾಗವಹಿಸಿದ್ದಕ್ಕೆ ಒಂದು ವರ್ಗದ ಜನರು ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಉರ್ಫಿ ಜಾವೇದ್ ಈ ವೇಷ ಧರಿಸಿ ತಮ್ಮ ಧರ್ಮವನ್ನು ಅವಮಾನಿಸುತ್ತಿದ್ದಾರೆ, ಇದು ಹೀಗೆಯೇ ಮುಂದುವರಿದರೆ ಕೊಲೆ ಮಾಡುತ್ತೇವೆ ಬೆದರಿಕೆಗಳು ಬಂದಿವೆ ಎಂದು ಉರ್ಫೀ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಫೋಟೊ, ವೀಡಿಯೋಗಳನ್ನು ಡಿಲೀಟ್ ಮಾಡುವಂತೆ ಬೆದರಿಕೆ ಮೇಲ್ ಗಳನ್ನು ಕಳುಹಿಸುತ್ತಿದ್ದಾರಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.