ನವದೆಹಲಿ: ಯಾವುದೇ ಜೋಡಿ ತಮ್ಮ ಪ್ರೇಮವನ್ನು ಮದುವೆಯೆಂಬ ಬಂಧನದಲ್ಲಿ ಬಂದಿಸಲು ನಿರ್ಧರಿಸುವಾಗ ಅವರಲ್ಲಿ ಅನೇಕ ಕನಸುಗಳಿರುತ್ತವೆ. ಈ ವಿಷಯದಲ್ಲಿ ನಮ್ಮ ಬಾಲಿವುಡ್ ಸೆಲೆಬ್ರೆಟಿಗಳು ಪರದೆಯ ಮೇಲೆ ಮಾತ್ರವಲ್ಲ, ಆಫ್ ಸ್ಕ್ರೀನ್ ನಲ್ಲೂ ಬಹಳ ರೋಮ್ಯಾಂಟಿಕ್. 


COMMERCIAL BREAK
SCROLL TO CONTINUE READING


ಬಾಲಿವುಡ್ ನಲ್ಲಿ ಹೆಚ್ಚು ಟ್ರೆಂಡ್ ಆಗಿರುವ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ  ಜೋಡಿ ನಿನ್ನೆ ತಮ್ಮ ಮದುವೆ ದಿನಾಂಕವನ್ನು ಘೋಷಿಸುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಆ ಸುದ್ದಿ ದೇಶಾದ್ಯಂತ ಹರಡಿತು. ಈ ಜೋಡಿಯ ಮದುವೆಗೆ ನವೆಂಬರ್ 14 ಮತ್ತು 15ರಂದು ದಿನಾಂಕವನ್ನು ನಿಶ್ಚಯಗೊಳಿಸಲಾಗಿದೆ. ಆದರೆ ಈ ಜೋಡಿ ಅದೇ ದಿನಾಂಕವನ್ನು ಆಯ್ಕೆ ಮಾಡಿರುವುದರ ಹಿಂದಿನ ಸಿಕ್ರೆಟ್ ಏನು ಗೊತ್ತೇ? 



ಈ ದಿನಾಂಕವು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಪ್ರೇಮ ಕಹಾನಿಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.


ಅದೇ ದಿನಾಂಕದಲ್ಲಿ ಮೊದಲ ಚಿತ್ರ ಬಿಡುಗಡೆ:
ದೀಪಿಕಾ ರಣವೀರ್ ಅವರ ಜೋಡಿಯು ತೆರೆಯಲ್ಲಿ ಬಹಳ ಹೆಸರು ಮಾಡಿದ ಜೋಡಿ. ಇಬ್ಬರೂ 'ರಾಮ್ ಲೀಲಾ', 'ಬಾಜಿರಾವ್ ಮಸ್ತಾನಿ' ಮತ್ತು 'ಪದ್ಮಾವತ್' ಎಂಬ ಮೂರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವುಗಳಲ್ಲಿ ಎರಡನ್ನೂ ಮೊದಲ ಬಾರಿಗೆ 2013 ರಲ್ಲಿ 'ಗುಲಿಯೋಂಕಿ ರಾಸ್ಲೀಲಾ-ರಾಮ್ಲೀಲಾ' ಚಿತ್ರದಲ್ಲಿ ನೋಡಲಾಗಿತ್ತು. ಈ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸನ್ನು ಕಂಡಿತು.


ಅದೇ ಸಮಯದಲ್ಲಿ ಅವರಿಬ್ಬರ ಪ್ರೇಮಾಂಕುರ ಪ್ರಾರಂಭವಾಗಿತ್ತು. ಈ ಚಿತ್ರ ಬಿಡುಗಡೆಯಾದ ದಿನಾಂಕ ನವೆಂಬರ್ 15 ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದ್ದರಿಂದ ಅದೇ ದಿನಾಂಕದಂದೇ ದಾಂಪತ್ಯ ಜೀವನಕ್ಕೆ ಕಾಲಿಡಲು ಇಬ್ಬರೂ ತೀರ್ಮಾನಿಸಿರಬಹುದು ಎನ್ನಲಾಗುತ್ತಿದೆ.