Lime Juice to burn belly fat :ನಿಂಬೆ ರಸವನ್ನು ಸರಿಯಾದ ಸಮಯದಲ್ಲಿ ಸರಿಯಾದ ವಿಧಾನದಲ್ಲಿ ಕುಡಿದರೆ ಹೊಟ್ಟೆ ಮತ್ತು ಸೊಂಟದ ಭಾಗದ ಬೊಜ್ಜು ಸುಲಭವಾಗಿ ಕರಗಿ ಬಿಡುತ್ತದೆ. ದುಂಡಗಿರುವ ಹೊಟ್ಟೆ ಚಪ್ಪಟೆಯಾಗಿ ಬಿಡುತ್ತದೆ.
Lime Juice For weight lose : ಆಧುನಿಕತೆಯ ಭರದಲ್ಲಿ ಇತ್ತೀಚಿಗೆ ಬಹುತೇಕ ಪ್ರತಿಯೊಬ್ಬರೂ ಕಳಪೆ ಜೀವನಶೈಲಿಯನ್ನೇ ಅನುಸರಿಸುವಂತಾಗಿದೆ. ಹೀಗಾಗಿ ಬೊಜ್ಜು ಅನ್ನುವುದು ನಮ್ಮನ್ನು ಕಾಡುವ ಅತಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅನೇಕ ಜನರು ತಮ್ಮ ದೇಹದ ತೂಕವನ್ನು ನಿಯಂತ್ರಿಸುವ ಸಲುವಾಗಿ ವ್ಯಾಯಾಮ,ಯೋಗ,ಜಿಮ್, ಜುಂಬಾ ಹೀಗೆ ಹತ್ತು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.ಮತ್ತೆ ಕೆಲವರು ತೂಕ ಇಳಿಸಿಕೊಳ್ಳಲು ನೈಸರ್ಗಿಕ ವಿಧಾನಗಳನ್ನು ಅನುಸರಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ತೂಕವನ್ನು ಕಳೆದುಕೊಳ್ಳಲು ಕೆಲವು ಸರಳ ನೈಸರ್ಗಿಕ ಮಾರ್ಗಗಳಿವೆ. ಅವುಗಳನ್ನು ಸರಿಯಾಗಿ ಅನುಸರಿಸಿಕೊಂಡು ಬಂದರೆ ಬೊಜ್ಜು ಕರಗಿಸುವುದು ಕಷ್ಟದಾಯಕವಲ್ಲ.
ತೂಕ ಇಳಿಸಲು ಅಥವಾ ಬೊಜ್ಜು ಕರಗಿಸಲು ಇರುವ ನೈಸರ್ಗಿಕ ಉಪಾಯವೆಂದರೆ ನಿಂಬೆ ರಸ. ನಿಂಬೆ ರಸವನ್ನು ಸರಿಯಾದ ಸಮಯದಲ್ಲಿ ಸರಿಯಾದ ವಿಧಾನದಲ್ಲಿ ಕುಡಿದರೆ ಹೊಟ್ಟೆ ಮತ್ತು ಸೊಂಟದ ಭಾಗದ ಬೊಜ್ಜು ಸುಲಭವಾಗಿ ಕರಗಿ ಬಿಡುತ್ತದೆ.
ಪ್ರತಿದಿನ ನಿಂಬೆ ನೀರು ಕುಡಿದರೂ ತೂಕ ಕಡಿಮೆಯಾಗುವುದಿಲ್ಲ ಎಂದು ಹಲವರು ದೂರುತ್ತಾರೆ.ನಿಂಬೆ ನೀರನ್ನು ಸರಿಯಾಗಿ ಕುಡಿಯದ ಕಾರಣ ಹೀಗಾಗುತ್ತದೆ.ಯಾವುದೇ ಪರಿಹಾರವನ್ನು ಸರಿಯಾದ ರೀತಿಯಲ್ಲಿ ಅನುಸರಿಸದಿದ್ದರೆ ಅದು ಫಲಕಾರಿಯಾಗುವುದಿಲ್ಲ.
ನಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಮಾತ್ರ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಹೊರಹಾಕಲು ಸಹಾಯ ಮಾಡುತ್ತದೆ.ಇದು ನಮ್ಮ ಚರ್ಮ ಮತ್ತು ಕೂದಲು ಸೇರಿದಂತೆ ದೇಹದ ಅನೇಕ ಭಾಗಗಳಿಗೆ ಪ್ರಯೋಜನಕಾರಿಯಾಗಿದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಮತ್ತು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ.ಇದು ದೇಹದಲ್ಲಿ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಸುಧಾರಿಸುತ್ತದೆ.
ನಿಂಬೆಯಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದನ್ನು ಸೇವಿಸಿದಾಗ ದೇಹದ ತೂಕ ಕಡಿಮೆಯಾಗಿ ನಮ್ಮ ದೇಹದಲ್ಲಿರುವ ಕಲ್ಮಶಗಳು ಹೊರಬರುತ್ತದೆ.ಈ ಕಾರಣದಿಂದಾಗಿ ದೇಹದ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.