ನವದೆಹಲಿ: ಸಲ್ಮಾನ್ ಖಾನ್ ರನ್ನು ಬಾಲಿವುಡ್ನ ಬಾಕ್ಸ್ ಆಫೀಸ್ 'ಸುಲ್ತಾನ್' ಎಂದೇ ಕರೆಯುತ್ತಾರೆ. ಇನ್ನು ಬಾಲಿವುಡ್ನ ನಟಿಯರ ಬಗ್ಗೆ ಮಾತನಾಡುವುದಾದರೆ, 'ದೀಪಿಕಾ ಪಡುಕೋಣೆ'ಯನ್ನು ಬಾಲಿವುಡ್ ಲೇಡಿ ಸಲ್ಮಾನ್ ಖಾನ್ ಎಂದೇ ಹೇಳಬಹುದು. ದೀಪಿಕಾ ಬಾಲಿವುಡ್ ಗಲ್ಲಾ ಪೆಟ್ಟಿಗೆಯ 'ರಾಣಿ'ಯಾಗಿದ್ದಾರೆ.


COMMERCIAL BREAK
SCROLL TO CONTINUE READING

ದೀಪಿಕಾ ಪಡುಕೋಣೆಯ 100 ಕೋಟಿ ಕ್ಲಬ್ನಲ್ಲಿ ಸೇರಿದ ಚಿತ್ರಗಳಲ್ಲಿ 'ಪದ್ಮಾವತಿ' ಏಳನೇ ಚಿತ್ರವಾಗಿದೆ. ಹಾಗಾಗಿ ದೀಪಿಕಾರನ್ನು ಬಾಲಿವುಡ್ನ 'ಹಿಟ್ ಮಿಷನ್ ಗರ್ಲ್' ಎಂದು ಕರೆಯಲಾಗಿದೆ. ದೀಪಿಕಾ ಪಡುಕೋಣೆ ಅಭಿನಯದ 'ಚೆನೈ ಎಕ್ಸ್ಪ್ರೆಸ್',' ಹ್ಯಾಪಿ ನ್ಯೂ ಇಯರ್' 'ಬಾಜಿ ಮಸ್ತಾನಿ','ರಾಮ್ ಲೀಲಾ', 'ರೇಸ್ 2', 'ಎ ಜವಾನಿ ಹೇ ದಿವಾನಿ' ಚಿತ್ರಗಳೂ ಸಹ ಗಲ್ಲಾ ಪೆಟ್ಟಿಗೆಯಲ್ಲಿ ಬಹಳ ಸದ್ದು ಮಾಡಿವೆ. ಚಿತ್ರಗಳಲ್ಲದೆ ದೀಪಿಕಾ ಪಡುಕೋಣೆ 18 ಬ್ರಾಂಡ್ಗಳನ್ನು ಕೂಡ ಪ್ರಚಾರ ಮಾಡಿದ್ದಾರೆ.