Ranveer Singh Deepika Padukone Marriage: ರಾಮ್ ಲೀಲಾ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ರಣವೀರ್ ಸಿಂಗ್ ಪ್ರಪೋಸ್‌ ಮಾಡಿದ್ದರಂತೆ. ಡೇಟಿಂಗ್ ಮಾಡಿದ ಆರು ತಿಂಗಳಲ್ಲೇ ದೀಪಿಕಾ ತನಗೆ ಪರ್ಫೆಕ್ಟ್ ಎಂದು ತಿಳಿದೆ ಎಂದು ರಣವೀರ್ ಹೇಳಿದ್ದಾರೆ. ಕರಣ್ ಜೋಹರ್ ಅವರ ಪ್ರಸಿದ್ಧ ಚಾಟ್ ಶೋ 'ಕಾಫಿ ವಿತ್ ಕರಣ್' ಸೀಸನ್ 8 ರ ಮೊದಲ ಸಂಚಿಕೆಯಲ್ಲಿ ರಣವೀರ್ ಈ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ಈ ಸಮಯದಲ್ಲಿ, ರಣವೀರ್ ಅವರು ಮಾಲ್ಡೀವ್ಸ್‌ನಲ್ಲಿ ದೀಪಿಕಾಳನ್ನು ಮದುವೆಗೆ ಪ್ರಪೋಸ್‌ ಮಾಡಿದ್ದಾಗಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮನೆ ಶೋಧಿಸಿದ ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರ..! ಹೈಕೋರ್ಟ್‌ ಮೊರೆ ಹೋದ ನಟ ಜಗ್ಗೇಶ್‌   


ದೀಪಿಕಾಗೆ ಉಂಗುರ ತೊಡಿಸುವ ಮೂಲಕ ಮದುವೆಗೆ ಪ್ರಪೋಸ್‌ ಮಾಡಿದ್ದರಂತೆ. ಇದಕ್ಕಾಗಿ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ತೆರಳಿ ದೀಪಿಕಾಗೆ ರಹಸ್ಯವಾಗಿ ಉಂಗುರವನ್ನು ಸಹ ಖರೀದಿಸಿದ್ದರು. ಇದಾದ ನಂತರ ದೀಪಿಕಾ ಮತ್ತು ರಣವೀರ್ ರಜೆಯ ಮೇಲೆ ಮಾಲ್ಡೀವ್ಸ್‌ಗೆ ಹೋಗಲು ಯೋಜಿಸಿದಾಗ, ರಣವೀರ್ ಸಿಂಗ್‌ ಅವರು ದೀಪಿಕಾಗೆ ಉಂಗುರವನ್ನು ನೀಡುವ ಮೂಲಕ ಮದುವೆಯ ಪ್ರಪೋಸ್‌ ನೀಡಿದರು. ರಣವೀರ್‌ ಅವರ ಈ ಪ್ರಪೋಸಲ್‌ನ್ನು ದೀಪಿಕಾ ತಕ್ಷಣ ಒಪ್ಪಿಕೊಂಡಿದ್ದರು. 


ದೀಪಿಕಾ ತಾಯಿಯ ಮನವೊಲಿಸಲು ಹರಸಾಹಸ : 


ರಣವೀರ್ ಸಿಂಗ್‌ ಪ್ರಕಾರ, ರಜೆಯಿಂದ ಹಿಂದಿರುಗಿದ ನಂತರ ದೀಪಿಕಾ ತನ್ನ ಕುಟುಂಬಕ್ಕೆ ಸಂಪೂರ್ಣ ಕಥೆಯನ್ನು ಹೇಳಿದ್ದಾರೆ. ಈ ಸುದ್ದಿ ಕೇಳಿ ಎಲ್ಲರೂ ತುಂಬಾ ಸಂತೋಷಪಡುತ್ತಾರೆ ಎಂದು ಭಾವಿಸಿದ್ದೆ, ಆದರೆ ಅದು ಹಾಗಾಗಲಿಲ್ಲ ಎಂದು ಹೇಳಿದ್ದಾರೆ. ರಣವೀರ್ ಪ್ರಕಾರ, ಆರಂಭದಲ್ಲಿ ದೀಪಿಕಾ ಅವರ ತಾಯಿ ಈ ಸಂಬಂಧದ ಬಗ್ಗೆ ಸಂತೋಷವಾಗಿರಲಿಲ್ಲ. ದೀಪಿಕಾ ಅವರ ಬಳಿ, ಈ ಹುಡುಗ ಯಾರು? ಎಂದು ಕೇಳಿದ್ದರು. ರಣವೀರ್ ಪ್ರಕಾರ, ದೀಪಿಕಾ ಅವರ ತಾಯಿಯನ್ನು ಮದುವೆಗೆ ಒಪ್ಪಿಸಲು ಒಂದು ವರ್ಷ ತೆಗೆದುಕೊಂಡಿತು. ಆದರೆ ನಂತರ ದೀಪಿಕಾ ತಾಯಿ ಈ ಸಂಬಂಧವನ್ನು ಒಪ್ಪಿಕೊಂಡರು. ಇಂದು ನಾನು ದೀಪಿಕಾ ಅವರ ತಾಯಿಯ ನೆಚ್ಚಿನ ವ್ಯಕ್ತಿ ಎಂದು ನಟ ಹೇಳುತ್ತಾರೆ.  


ಇದನ್ನೂ ಓದಿ: ರಾಜ್‌ ಕುಂದ್ರಾಗೆ ಭಾರತ ತೊರೆಯಲು ಹೇಳಿದ್ರಂತೆ ಶಿಲ್ಪಾ ಶೆಟ್ಟಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.