Deepika Padukone: ಇದ್ದಕ್ಕಿದ್ದಂತೆ ಹೆಚ್ಚಾದ ಎದೆ ಬಡಿತ.. ಆಸ್ಪತ್ರೆಗೆ ಧಾವಿಸಿದ ದೀಪಿಕಾ ಪಡಕೋಣೆ!
Deepika Padukone: ವರದಿಯ ಪ್ರಕಾರ, ನಟಿ ಇತ್ತೀಚೆಗೆ ಆಕೆಯ ಹೃದಯ ಬಡಿತದ ದರ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ಚಿಕಿತ್ಸೆ ಬಳಿಕ ಸೆಟ್‌ಗೆ ಮರಳಿದ್ದಾರೆ. ಈ ವರದಿಯು ದೀಪಿಕಾ ಅಭಿಮಾನಿಗಳನ್ನು ತುಂಬಾ ಚಿಂತೆಗೀಡು ಮಾಡಿದೆ.
Deepika Padukone: ಪ್ರಾಜೆಕ್ಟ್ ಕೆ 2023 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿದ್ದಾರೆ. ಇದೊಂದು ಸೈಂಟಿಫಿಕ್ ಫ್ಯೂಚರಿಸ್ಟಿಕ್ ಸಿನಿಮಾ ಎಂದು ಹೇಳಲಾಗುತ್ತಿದ್ದು, ಸದ್ಯ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: Meghana Raj: ಅಮ್ಮ ಅಂತ ಹೇಳಿದ್ರೂ ಅಪ್ಪ ಅನ್ನುವ ರಾಯನ್! ಕ್ಯೂಟ್ ವಿಡಿಯೋ ಇಲ್ಲಿದೆ..
ನಗರದಲ್ಲಿ ದೀಪಿಕಾ ಬಿಗ್ ಬಿ ಜೊತೆ ಶೂಟಿಂಗ್‌ನಲ್ಲಿ ತೊಡಗಿದ್ದು, ವರದಿಯ ಪ್ರಕಾರ, ನಟಿ ಇತ್ತೀಚೆಗೆ ಆಕೆಯ ಹೃದಯ ಬಡಿತದ ದರ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ಚಿಕಿತ್ಸೆ ಬಳಿಕ ಸೆಟ್‌ಗೆ ಮರಳಿದ್ದಾರೆ. ಈ ವರದಿಯು ದೀಪಿಕಾ ಅಭಿಮಾನಿಗಳನ್ನು ತುಂಬಾ ಚಿಂತೆಗೀಡು ಮಾಡಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದೀಪಿಕಾ ಪಡುಕೋಣೆ ಅವರ ಹೃದಯ ಬಡಿತ ಹೆಚ್ಚಾದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದರು. ತಕ್ಷಣ ತಂಡ ಆಕೆಯನ್ನು ಹೈದರಾಬಾದ್‌ನ ಕಾಮಿನೇನಿ ಆಸ್ಪತ್ರೆಗೆ ಕರೆದೊಯ್ದಿದೆ. ಬಳಿಕ ಚಿಕಿತ್ಸೆ ಪಡೆದ ನಂತರ, ನಟಿ ಚಿತ್ರೀಕರಣದ ಸೆಟ್‌ಗೆ ಮರಳಿದರು.
ದೀಪಿಕಾ ಆರೋಗ್ಯದ ಬಗ್ಗೆ ವರದಿಗಳು ಹರಿದಾಡುತ್ತಿದ್ದು, ನಟಿ ಅಥವಾ ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಪ್ರಾಜೆಕ್ಟ್ ಕೆ ಹೊರತಾಗಿ, ದೀಪಿಕಾ ಪಡಕೋಣೆ ಪಠಾಣ್, ಫೈಟರ್ ಮತ್ತು ದಿ ಇಂಟರ್ನ್ ರೀಮೇಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಸಹ ನಟಿಸಿರುವ ಪಠಾಣ್, 25 ಜನವರಿ 2023 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೋಟಿ ಕೋಟಿ ಶುಲ್ಕ ಪಡೆಯುವ ಬಾಲಿವುಡ್ ಬೆಡಗಿಯರು!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.