Deepika Padukone And Sanjay Leela Bhansali : ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಂದು ಅನೇಕ ತಾರೆಯರನ್ನು ಸಿನಿರಂಗಕ್ಕೆ ನೀಡಿದ್ದಾರೆ. ಈ ಪಟ್ಟಿಯಲ್ಲಿ ದೀಪಿಕಾ ಅವರ ಹೆಸರೂ ಸೇರಿದೆ. ದೀಪಿಕಾ ಪಡುಕೋಣೆ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು ಮತ್ತು ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಪಠಾಣ್ ಚಿತ್ರದ ಬಗ್ಗೆ ಚರ್ಚೆಯಲ್ಲಿದ್ದಾರೆ ಮತ್ತು ಅದೇ ಸಮಯದಲ್ಲಿ ಅವರು ರಣವೀರ್ ಸಿಂಗ್ ಅವರನ್ನು ವಿವಾಹವಾಗಿದ್ದು, ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ಆದರೆ ಸಂಜಯ್ ಲೀಲಾ ಬನ್ಸಾಲಿಯನ್ನು ಮದುವೆಯಾಗಲು ಬಯಸುವುದಾಗಿ ದೀಪಿಕಾ ಒಮ್ಮೆ ಹೇಳಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Armaan Malik ಮಾತ್ರವಲ್ಲ, ಈ ಬಾಲಿವುಡ್ ನಟರಿಗೂ 2-2 ಹೆಂಡತಿಯರು.!


ವಾಸ್ತವವಾಗಿ, ದೀಪಿಕಾ ಪಡುಕೋಣೆ ತಮ್ಮ ಚಿತ್ರದ ಪ್ರಚಾರಕ್ಕಾಗಿ ಬಿಗ್ ಬಾಸ್ ಸೀನಸ್‌ 11 ಗೆ ಬಂದಿದ್ದರು. ಈ ಸಂದರ್ಭದಲ್ಲಿ, ಇಲ್ಲಿ ಅವರಿಗೆ ಕೆಲವು ತಮಾಷೆಯ ಪ್ರಶ್ನೆಗಳನ್ನು ಕೇಳಲಾಯಿತು, ಅದಕ್ಕೆ ಅವರು ಬಹಳ ವಿಶಿಷ್ಟವಾದ ಉತ್ತರಗಳನ್ನು ನೀಡಿದರು, ಅದನ್ನು ಕೇಳಿ ಎಲ್ಲರೂ ಆಶ್ಚರ್ಯಚಕಿತರಾದರು. ವಾಸ್ತವವಾಗಿ, ಅವರು ಯಾರನ್ನು ಮದುವೆಯಾಗಲು ಬಯಸುತ್ತಾಳೆ ಎಂಬ ಪ್ರಶ್ನೆಯನ್ನು ಇದರಲ್ಲಿ ಕೇಳಲಾಯಿತು. ಈ ಪಟ್ಟಿಯಲ್ಲಿ 2 ಹೆಸರುಗಳಿದ್ದವು. ಮೊದಲನೆಯದು ರಣವೀರ್ ಸಿಂಗ್ ಮತ್ತು ಎರಡನೆಯದು ಸಂಜಯ್ ಲೀಲಾ ಬನ್ಸಾಲಿ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಜೊತೆ ಡೇಟಿಂಗ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಆದರೆ ಸಂಜಯ್ ಲೀಲಾ ಬನ್ಸಾಲಿಯನ್ನು ಮದುವೆಗೆ  ಆಯ್ಕೆ ಮಾಡಿದ್ದಾರೆ. ಇದನ್ನು ಕೇಳಿದ ಸಲ್ಮಾನ್ ಖಾನ್ ಕೂಡ ಹೀಗೇ ಆಗಿದ್ದರೆ ಈ ಮದುವೆ ನಡೆಯುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.


Samantha: ಸಮಂತಾ ವರ್ಕೌಟ್​ ನೋಡಿದ್ರೆ ಅಚ್ಚರಿ ಪಡ್ತೀರಾ.! ಆರೋಗ್ಯ ಇಷ್ಟೊಂದು ಸುಧಾರಿಸಿತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.