Samantha Ruth Prabhu Workout Video : ಸಮಂತಾ ರುತ್ ಪ್ರಭು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವಿಚಾರ ಅವರ ಅಭಿಮಾನಗಳಿಗೆ ಬೇಸರ ತಂದಿತ್ತು. ಗುರುವಾರ ರಾತ್ರಿ ಸಮಂತಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವುದನ್ನು ಕಾಣಬಹುದು.
ವಿಡಿಯೋ ಜೊತೆಗೆ, ಸಮಂತಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ, "2023 ನಾವು ಬಲಶಾಲಿಯಾಗುವ ವರ್ಷ". ಅಭಿಮಾನಿಗಳು ಮತ್ತು ಅನುಯಾಯಿಗಳು ವಿಡಿಯೋಗೆ ಶೀಘ್ರವಾಗಿ ಪ್ರತಿಕ್ರಿಯಿಸಿದರು. ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಸ್ಥಿತಿಯೊಂದಿಗೆ ಹೋರಾಡುತ್ತಿರುವ ನಟಿ ಸಮಂತಾ ಚೇತರಿಕೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : SK Bhagavan Biography : ಸಿನಿರಂಗದ ದಂತಕಥೆ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್
ಮಂತಾ ಪ್ರಸ್ತುತ ದೇವ್ ಮೋಹನ್ ನಟಿಸಿರುವ ಶಾಕುಂತಲಂ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ. ಶಾಕುಂತಲಂ ಮಹಾಭಾರತದ ಶಕುಂತಲಾ ಮತ್ತು ರಾಜ ದುಶ್ಯಂತರ ಮಹಾಕಾವ್ಯದ ಪ್ರೇಮಕಥೆಯನ್ನು ಚಿತ್ರಿಸುತ್ತದೆ. ಈ ಮೊದಲು, ಚಿತ್ರವು ಫೆಬ್ರವರಿ 17 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ಈಗ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ.
ಸಮಂತಾ ಅವರು ರಾಜ್ ಮತ್ತು ಡಿಕೆ ನೇತೃತ್ವದಲ್ಲಿ ಮುಂಬರುವ ಸಿಟಾಡೆಲ್ ಸರಣಿಯ ಚಿತ್ರೀಕರಣದಲ್ಲಿದ್ದಾರೆ. ಇದರಲ್ಲಿ ವರುಣ್ ಧವನ್ ಕೂಡ ನಾಯಕನಾಗಿ ನಟಿಸಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ರೊಮ್ಯಾಂಟಿಕ್ ಡ್ರಾಮಾ ಕುಶಿಯಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : Guess Who: ಗುಂಗುರು ಕೂದಲಿನ ಈ ಮುದ್ದಾದ ಬಾಲಕಿ ಇಂದು ಬಾಲಿವುಡ್‌ನ 'ಕ್ವೀನ್'.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.