Deepika padukone AB de villiers : ಬಾಲಿವುಡ್‌ ಬಹುನಿರೀಕ್ಷಿತ ʼಪಠಾಣ್ʼ ಸಿನಿಮಾದ ಪಾರ್ಟಿ ಸಾಂಗ್ ʼಬೇಷರಮ್‌ ರಂಗ್ʼ ಬಿಡುಗಡೆ ಸಿದ್ಧವಾಗಿದೆ. ಇದರ ಬೆನ್ನಲ್ಲೆ, ಹಳದಿ ಬಿಕಿನಿ ತೊಟ್ಟು ಕ್ಯಾಮರಾಗೆ ಪೋಸ್‌ ನೀಡಿರುವ ದೀಪಿಕಾ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಅದರಲ್ಲಿ ಖ್ಯಾತ ಕ್ರಿಕೆಟಿಗ ಎಬಿ ಡೀ ವಿಲಿಯರ್ಸ್‌ ಕಾಣುತ್ತಾರೆ. ಈ ವಿಚಾರವೇ ಈಗ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಬಾದ್‌ ಶಾ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಿಸುತ್ತಿದೆ. ಈಗಾಗಲೇ ಸಿನಿಮಾದ ಪಾರ್ಟಿ ಸಾಂಗ್ ಬೇಷರಾಮ್ ರಂಗ್ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದೆ. ಈ ಹಾಡನ್ನು ನೋಡಲು ಸಹ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಅಲ್ಲದೆ, ಈ ಹಾಡಿಗೆ ಸಂಬಂಧಪಟ್ಟಂತೆ ದೀಪಿಕಾ ಪಡುಕೋಣೆ ಸಿಜ್ಲಿಂಗ್ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.


ಇದನ್ನೂ ಓದಿ: ಯು ಟರ್ನ್ 2 : ಪಿಜ್ಜಾ ಹುಡುಗರ ಹಾರರ್ ಕಥೆಯ ಟ್ರೈಲರ್ ರಿಲೀಸ್‌..!


ಇನ್ನು ವೈರಲ್‌ ಆಗಿರುವ ಫೋಟೋಗಳಲ್ಲಿ ದೀಪ್ಸ್‌ ಸಖತ್‌ ಹಾಟ್‌ ಆಗಿ ಕಾಣುತ್ತಿದ್ದಾರೆ. ಕೊರೆಯುವ ಚಳಿಯಲ್ಲೂ ಯುವಕರು ಬೆವರುತ್ತಿದ್ದಾರೆ. ಇನ್ನು ಇದು ಒಂದು ಕಡೆಯಾದ್ರೆ, ದೀಪಿಕಾ ಜೊತೆ ಇಬ್ಬರು ನಟರು ಇರುವ ಫೋಟೋ ಒಂದು ವೈರಲ್‌ ಆಗುತ್ತಿದೆ. ಅದರಲ್ಲಿ ಸೌತ್ ಆಫ್ರಿಕಾ ಕ್ರಿಕೆಟಿಗ ಮಿಸ್ಟರ್‌ 360 ಎಬಿ ಡೀ ವಿಲಿಯರ್ಸ್‌ ನಂತೆಯೇ ಕಾಣುವ ಒಬ್ಬರ ವ್ಯಕ್ತಿ ಇದ್ದಾರೆ. ಇದನ್ನು ನೋಡಿದ ನೆಟ್ಟಿಗರು ಎಬಿಡಿಗೆ ಇಲ್ಲಿ ಏನು ಕೇಲಸ ಅಂತ ಟ್ರೋಲ್‌ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.