Shraddha Murder: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಕ್ರೂರ ಹತ್ಯೆಯ ಬಗ್ಗೆ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಏತನ್ಮಧ್ಯೆ, ಬಾಲಿವುಡ್ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ಚಲನಚಿತ್ರವನ್ನು ಮಾಡುವುದಾಗಿ ಘೋಷಿಸಿದೆ. ವರದಿಗಳ ಪ್ರಕಾರ, ಚಿತ್ರ ನಿರ್ದೇಶಕ ಮನೀಶ್ ಎಫ್ ಸಿಂಗ್ ಈ ಭೀಕರ ಕೊಲೆ ಪ್ರಕರಣದ ಮೇಲೆ ಸಿನಿಮಾ ಮಾಡಲು ಯೋಜನೆ ರೂಪಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : What An Idea.! ಸ್ಮಾರ್ಟ್‌ಫೋನ್ ಹೀಗೂ ಬಳಸಬಹುದೆಂದು ತೋರಿಸಿ ಕೊಟ್ಟ ಉರ್ಫಿ


ಇಂಡಿಯಾ ಹೆರಾಲ್ಡ್ ವರದಿಯ ಪ್ರಕಾರ, ನಿರ್ಮಾಪಕ ನಿರ್ದೇಶಕ ಮನೀಶ್ ಎಫ್ ಸಿಂಗ್ ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಕುರಿತು ಚಲನಚಿತ್ರವನ್ನು ನಿರ್ಮಿಸಲಿದ್ದಾರೆ. ಸದ್ಯ ಈ ಚಿತ್ರಕ್ಕೆ 'Who Killed Shraddha Walker' ಎಂದು ಹೆಸರಿಸಲಾಗಿದೆ. ವರದಿಯ ಪ್ರಕಾರ, ಚಿತ್ರವು ಶ್ರದ್ಧಾ ವಾಕರ್ ಕೊಲೆಯನ್ನು ಆಧರಿಸಿದೆ. ಈ ಚಿತ್ರದ ಚಿತ್ರಕಥೆಯ ಕೆಲಸವೂ ಆರಂಭವಾಗಿದೆ. ಆದರೆ, ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವವರೆಗೆ ಚಿತ್ರಕಥೆಯನ್ನು ಅಂತಿಮಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರಂತೆ.


ಇದು ಲವ್ ಜಿಹಾದ್ ಮೇಲೆ ಇರಲಿದೆ ಎಂದು ಮನೀಶ್ ಎಫ್ ಸಿಂಗ್ ತಮ್ಮ ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರಂತೆ. ಹೆಣ್ಣುಮಕ್ಕಳಿಗೆ ಬೊಗಳೆ ಬಿಡುವ ಮೂಲಕ ಬದುಕನ್ನು ಹಾಳು ಮಾಡುವ ಷಡ್ಯಂತ್ರಗಳನ್ನು ಜಗತ್ತಿನ ಮುಂದೆ ಬಯಲಿಗೆಳೆಯುವ ಪ್ರಯತ್ನ ಇದಾಗಿದೆಯಂತೆ. ವೃಂದಾವನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಾಗಲಿದ್ದು, ಸಿನಿಮಾದಲ್ಲಿನ ತಾರಾಗಣದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.


ಇದನ್ನೂ ಓದಿ : ಅದ್ಧೂರಿಯಾಗಿ ನಡೆದ ಅಮೀರ್ ಖಾನ್ ಪುತ್ರಿ ಇರಾ ಖಾನ್ ನಿಶ್ಚಿತಾರ್ಥ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.