What An Idea.! ಸ್ಮಾರ್ಟ್‌ಫೋನ್ ಹೀಗೂ ಬಳಸಬಹುದೆಂದು ತೋರಿಸಿ ಕೊಟ್ಟ ಉರ್ಫಿ

Uorfi Javed : ಉರ್ಫಿ ಜಾವೇದ್ ತನ್ನ ವಿಚಿತ್ರ ನೋಟದಿಂದ ಆಗಾಗ ಜನರ ಗಮನಸೆಳೆಯುತ್ತಿದ್ದಾರೆ. ತನ್ನ ಬೋಲ್ಡ್‌ ಲುಕ್‌ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ ಕೂಡ ಆಗುತ್ತಾರೆ. ಇದೀಗ ಉರ್ಫಿ ಜಾವೇದ್‌ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

Written by - Chetana Devarmani | Last Updated : Nov 19, 2022, 11:32 AM IST
  • ಉರ್ಫಿ ಜಾವೇದ್ ತನ್ನ ವಿಚಿತ್ರ ನೋಟದಿಂದ ಆಗಾಗ ಜನರ ಗಮನಸೆಳೆಯುತ್ತಿದ್ದಾರೆ
  • ತನ್ನ ಬೋಲ್ಡ್‌ ಲುಕ್‌ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ ಕೂಡ ಆಗುತ್ತಾರೆ
  • ಸ್ಮಾರ್ಟ್‌ಫೋನ್ ಹೀಗೂ ಬಳಸಬಹುದೆಂದು ತೋರಿಸಿ ಕೊಟ್ಟ ಉರ್ಫಿ
What An Idea.! ಸ್ಮಾರ್ಟ್‌ಫೋನ್ ಹೀಗೂ ಬಳಸಬಹುದೆಂದು ತೋರಿಸಿ ಕೊಟ್ಟ ಉರ್ಫಿ  title=
ಉರ್ಫಿ ಜಾವೇದ್

Urfi Javed : ಉರ್ಫಿ ಜಾವೇದ್ ತನ್ನ ವಿಚಿತ್ರ ನೋಟದಿಂದ ಆಗಾಗ ಜನರ ಗಮನಸೆಳೆಯುತ್ತಿದ್ದಾರೆ. ತನ್ನ ಬೋಲ್ಡ್‌ ಲುಕ್‌ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ ಕೂಡ ಆಗುತ್ತಾರೆ. ಇದೀಗ ಉರ್ಫಿ ಜಾವೇದ್‌ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಟೆಲಿವಿಷನ್ ತಾರೆ ಉರ್ಫಿ ಚಾರ್ಜಿಂಗ್ ವೈರ್‌ಗಳೊಂದಿಗೆ ತೂಗಾಡುತ್ತಿರುವ ಕಪ್ಪು ಸ್ಮಾರ್ಟ್‌ಫೋನ್‌ಗಳನ್ನು ಬಳಸಿದ್ದಾರೆ. ಉರ್ಫಿಯ ಈ ಡಿಫರೆಂಟ್‌ ಲುಕ್‌ ಕಂಡು ನೆಟ್ಟಿಗರ ತಲೆ ತಿರುಗುತ್ತಿದೆ. ಸ್ಮಾರ್ಟ್‌ಫೋನ್‌ ಅನ್ನು ಹೀಗೂ ಬಳಸಬಹುದೇ ಎಂದು ಯೋಚಿಸುವಂತಾಗಿದೆ. 

ಇದನ್ನೂ ಓದಿ : Ira Khan engagement : ಅದ್ಧೂರಿಯಾಗಿ ನಡೆದ ಅಮೀರ್ ಖಾನ್ ಪುತ್ರಿ ಇರಾ ಖಾನ್ ನಿಶ್ಚಿತಾರ್ಥ!

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, "Fully charged" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದು, ಹಲವಾರು ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬರು "ನನ್ನ ಫೋನ್‌ ಹಿಂದಿರುಗಿಸಿ" ಎಂದು ಬರೆದಿದ್ದಾರೆ. ಇನ್ನೊಬ್ಬರು “ಲ್ಯಾಪ್‌ಟಾಪ್ ಸ್ಕರ್ಟ್ ಮಾಡಿಕೊಳ್ಳಬಹುದಿತ್ತಲ್ಲಾ?" ಎಂದಿದ್ದಾರೆ. ಹೀಗೆ ನೆಟ್ಟಿಗರು ಸಹ ಇದಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Uorfi (@urf7i)

 

ಉರ್ಫಿ ಜಾವೇದ್ ಬಡೇ ಭಯ್ಯಾ ಕಿ ದುಲ್ಹನಿಯಾ, ಮೇರಿ ದುರ್ಗಾ ಮತ್ತು ಸೇರಿದಂತೆ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. ಅವರು ಬಿಗ್ ಬಾಸ್‌ನ ಡಿಜಿಟಲ್ ಆವೃತ್ತಿಯಲ್ಲಿ ಸಹ ಭಾಗವಹಿಸಿದ್ದರು. ಆದರೆ ಬೇಗನೆ ಎಲಿಮಿನೇಟ್ ಆದರು. ಅವರು ಈಗ Splitsvilla ನ ಇತ್ತೀಚಿನ ಆವೃತ್ತಿಯ ಭಾಗವಾಗಿದ್ದಾರೆ. 

ಇದನ್ನೂ ಓದಿ : ಸಿನಿರಂಗಕ್ಕೆ ನಟಿ ರೋಜಾ ಪುತ್ರಿ : ಮಗಳ ಸಿನಿ ಪಯಣದ ಬಗ್ಗೆ ಏನಂದ್ರು ಎಪಿ ಸಚಿವೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News