ಹೊಲಗೇರಿ ಪದ ಬಳಕೆ : ನಟ ಉಪೇಂದ್ರ ಮೇಲೆ ಸಾಕ್ಷಿ ನಾಶ ಮತ್ತು ಸಂಧಾನಕ್ಕೆ ಯತ್ನ ಆರೋಪ..!
ನಟ ಉಪೇಂದ್ರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ದೂರುದಾರರ ಜೊತೆ ಸಂಧಾನ ಮಾಡಿಕೊಳ್ಳಲು ಉಪ್ಪಿ ಯತ್ನಸಿದ್ದಾಗಿ ಹೇಳಲಾಗುತ್ತಿದೆ.
Actor Upendra controversy : ಹೊಲಗೇರಿ ಪದ ಬಳಕೆ ಹಿನ್ನೆಲೆ ನಟ ಉಪೇಂದ್ರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ಸಾಕಷ್ಟು ದೂರುಗಳು ಸಹ ದಾಖಲಾಗಿದ್ದವು. ಕೋರ್ಟ್ ಮೊರೆ ಹೋಗಿ ತಮ್ಮ ಮೇಲಿನ ಎಫ್ಐಆರ್ ರದ್ದು ಮಾಡುವಂತೆ ಉಪೇಂದ್ರ ಕೇಳಿಕೊಂಡಿದ್ದರು. ಅದರಂತೆ ಕೋರ್ಟ್ ತೀರ್ಪು ಉಪ್ಪಿಗೆ ರಿಲೀಫ್ ನೀಡಿತ್ತು..
ಇದೀಗ ನಟ ಉಪೇಂದ್ರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ದೂರುದಾರರ ಜೊತೆ ಸಂಧಾನ ಮಾಡಿಕೊಳ್ಳಲು ಉಪ್ಪಿ ಯತ್ನಸಿದ್ದಾಗಿ ಹೇಳಲಾಗುತ್ತಿದೆ. ಅಲ್ಲದೆ, ಸಮುದಾಯದ ಕೆಲವರ ಜೊತೆ ಮಾತುಕತೆ ನಡೆಸಿ ಸಂಧಾನಕ್ಕೂ ಸಹ ನಟ ಮುಂದಾಗಿದ್ದರು ಎಂದು ದೂರಲಾಗಿದೆ.
ಇದನ್ನೂ ಓದಿ: ದರ್ಶನ್ ʼತಂಗಿಗಾಗಿʼ ಚಿತ್ರ ನಟಿ ಪೂನಂ ಬಾಜ್ವಾ ಹಾಟ್ ಫೋಟೋಸ್ ವೈರಲ್..!
ಈ ಕುರಿತು ಕರ್ನಾಟಕ ರಣಧೀರ ಪಡೆಯ ಭೈರಪ್ಪ ಹರೀಶ್ ಕುಮಾರ್ ಇಂದು ನಟ ಉಪೇಂದ್ರ ಮೇಲೆ ದೂರು ನೀಡಿದ್ದಾರೆ. ಕೇಸ್ ಸಿಕೆ ಅಚ್ಚುಕಟ್ಟು ಠಾಣೆಗೆ ವರ್ಗಾವಣೆ ಹಿನ್ನೆಲೆ, ವಿವಿಪುರಂ ಉಪ ವಿಭಾಗ ಎಸಿಪಿಯವರಿಗೆ ದೂರು ನೀಡುವಂತೆ ಹಲಸೂರು ಗೇಟ್ ಎಸಿಪಿಯಿಂದ ಸೂಚನೆ ನೀಡಲಾಗಿದೆ. ಉಪೇಂದ್ರ ವಿರುದ್ಧ ಸಾಕ್ಷಿ ನಾಶಕ್ಕೆ ಯತ್ನದಡಿ ಎಫ್ಐಆರ್ ದಾಖಲಿಸುವಂತೆ ಭೈರಪ್ಪ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.