Devika Rani Death Anniversary 2023: ಭಾರತೀಯ ಚಿತ್ರರಂಗದ ಪ್ರಥಮ ಮಹಿಳೆ ಎಂದು ಕರೆಯಲ್ಪಡುವ ದೇವಿಕಾ ರಾಣಿ ಅವರ ಪುಣ್ಯತಿಥಿ ಇಂದು. 1908ರ ಮಾರ್ಚ್ 30ರಂದು ವಿಶಾಖಪಟ್ಟಣದಲ್ಲಿ ಜನಿಸಿದ ದೇವಿಕಾ 1994ರ ಮಾರ್ಚ್ 9ರಂದು ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಹೆಣ್ಣನ್ನು ಮನೆಯಿಂದ ಹೊರಗೆ ಹೋಗಲು ಅನುಮತಿಯೇ ಇಲ್ಲದ ಕಾಲಘಟ್ಟದಲ್ಲಿ ದೇವಿಕಾ ಅವರು ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸಮಾಜಕ್ಕೆ ವಿಭಿನ್ನ ಉದಾಹರಣೆಯಾಗಿದ್ದರು. ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡಿದವರ ಹೆಸರಲ್ಲಿ ದೇವಿಕಾ ರಾಣಿ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಹಲವು ಬಾರಿ ದೇವಿಕಾ ಅವರ ನಟನೆಯನ್ನು ಗ್ರೇಟಾ ಗಾರ್ಬೋಗೆ ಹೊಲಿಸಲಾಗುತ್ತಿದ್ದು, ಇದೆ ಕಾರಣದಿಂದ ದೇವಿಕಾ ರಾಣಿ ಅವರನ್ನು 'ಇಂಡಿಯನ್ ಗಾರ್ಬೋ' ಎಂದೇ ಕರೆಯಲಾಗುತ್ತಿತ್ತು.

COMMERCIAL BREAK
SCROLL TO CONTINUE READING

ದೇವಿಕಾ ರಾಣಿ ತನ್ನ ಒಂಬತ್ತನೇ ವಯಸ್ಸಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳುತ್ತಾರೆ. ಅಲ್ಲಿಂದ ಅವರು ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್‌ನಲ್ಲಿ ನಟನೆಯನ್ನು ಅಧ್ಯಯನ ಮಾಡುತ್ತಾರೆ. ದೇವಿಕಾ ಅಲ್ಲಿ ನಟನೆಯೊಂದಿಗೆ ಜವಳಿ ವಿನ್ಯಾಸ, ಅಲಂಕಾರ ಮತ್ತು ವಾಸ್ತುಶಿಲ್ಪವನ್ನೂ ಕೂಡ ಅಧ್ಯಯನ ಮಾಡುತ್ತಾರೆ. ತನ್ನ ಅಧ್ಯಯನವನ್ನು ಮುಗಿಸಿ ಭಾರತಕ್ಕೆ ಹಿಂದಿರುಗಿದ ಬಳಿಕ ದೇವಿಕಾ ಚಲನಚಿತ್ರಗಳನ್ನು ತನ್ನ  ವೃತ್ತಿ ಜೀವನವನ್ನಾಗಿಸಲು ಬಯಸುತ್ತಾರೆ. ಆದರೆ ದೇವಿಕಾಗೆ ಆಕೆಯ ಕುಟುಂಬ ಬೆಂಬಲ ಸಿಗುವುದಿಲ್ಲ.

ಈ ಸಂದರ್ಭದಲ್ಲಿ ದೇವಿಕಾ ಅವರು ಚಲನಚಿತ್ರ ನಿರ್ಮಾಪಕ ಹಿಮಾಂಶು ರಾಯ್ ಅವರನ್ನು ಭೇಟಿಯಾಗುತ್ತಾರೆ. ಹಿಮಾಂಶು ದೇವಿಕಾಳ ಸೌಂದರ್ಯದಿಂದ ಎಷ್ಟು ಪ್ರಭಾವಿತರಾಗುತ್ತಾರೆಂದರೆ, 1933 ರಲ್ಲಿ ಅವನು ತನ್ನ 'ಕರ್ಮ' ಚಿತ್ರದಲ್ಲಿ ದೇವಿಕಾಳನ್ನು ನಾಯಕಿ ನಟಿಯಾಗಿಸುತ್ತಾರೆ. ಭಾರತೀಯನೊಬ್ಬ ಮಾಡಿದ ಮೊದಲ ಇಂಗ್ಲಿಷ್ ಮಾತನಾಡುವ ಚಿತ್ರ ಇದಾಗಿದೆ. 'ಕರ್ಮ' ಚಿತ್ರದಲ್ಲಿ ದೇವಿಕಾ 4 ನಿಮಿಷಗಳ ಕಾಲ ಲಿಪ್ ಲಾಕ್ ಕಿಸ್ಸಿಂಗ್ ಸೀನ್ ನೀಡಿ ಎಲ್ಲರಲ್ಲೂ ನಿಬ್ಬೆರಗಾಗಿ ನೋಡುವಂತೆ ಮಾಡುತ್ತಾರೆ. ಈ ದೃಶ್ಯದ ನಂತರ ದೇವಿಕಾ ವಿರುದ್ಧ ಸಾಕಷ್ಟು ಟೀಕೆಗಳು ಕೂಡ ಕೇಳಿಬಂದವು ಮತ್ತು ಭಾರತದಲ್ಲಿ ಚಿತ್ರದ ಮೇಲೂ ಕೂಡ ನಿಷೇಧ ವಿಧಿಸಲಾಗುತ್ತದೆ.


ಇದನ್ನೂ ಓದಿ-ʼ95ನೇ ಆಸ್ಕರ್‌ ಪ್ರಶಸ್ತಿʼ ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ..! ನೇರ ಪ್ರಸಾರ ಇಲ್ಲಿ ಮಾತ್ರ 

ಎರಡನೇ ಬಾರಿಗೆ ಪ್ರೀತಿಯನ್ನು ಕಂಡುಕೊಂಡ ದೇವಿಕಾ
ನಂತರ ಹಿಮಾಂಶು ಮತ್ತು ದೇವಿಕಾ ವಿವಾಹವಾಗುತ್ತಾರೆ. ಇಬ್ಬರ ವಯಸ್ಸಿನಲ್ಲೂ 16 ವರ್ಷಗಳ ವ್ಯತ್ಯಾಸವಿತ್ತು. ದೇವಿಕಾ ಮತ್ತು ಹಿಮಾಂಶು ರಾಯ್ ಒಟ್ಟಾಗಿ ಬಾಂಬೆ ಟಾಕೀಸ್ ಎಂಬ ಸ್ಟುಡಿಯೋವನ್ನು ಕೂಡ ಸ್ಥಾಪಿಸುತ್ತಾರೆ. 1935 ರಲ್ಲಿ ಬಿಡುಗಡೆಯಾದ 'ಜವಾನಿ ಕಿ ಹವಾ' ಈ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ಮೊದಲ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ, ದೇವಿಕಾ ಮತ್ತು ನಜ್ಮುಲ್ ನಡುವೆ ಆತ್ಮೀಯತೆ ಹೆಚ್ಚಾಗತೊಡಗುತ್ತದೆ ಮತ್ತು ಒಂದು ರಾತ್ರಿ ಇಬ್ಬರೂ ಕಣ್ಮರೆಯಾಗುತ್ತಾರೆ. ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ಇಬ್ಬರು ಕೋಲ್ಕತ್ತಾದ ಹೋಟೆಲ್‌ನಲ್ಲಿ ಪತ್ತೆಯಾಗುತ್ತಾರೆ.


ಇದನ್ನೂ ಓದಿ-World Kidney Day 2023: ಕಿಡ್ನಿ ಸಮಸ್ಯೆ ಇದ್ದರೆ ಶರೀರ ಈ ಸಂಕೇತಗಳನ್ನು ನೀಡುತ್ತದೆ, ನಿರ್ಲಕ್ಷಿಸಬೇಡಿ!

ಸ್ವೆಟೋಸ್ಲಾಬ್ ರೋರಿಚ್ಗೆ ಜೊತೆಗೆ ಎರಡನೇ ಮದುವೆ
ಇಲ್ಲಿಂದ ಹಿಮಾಂಶು ಮತ್ತು ದೇವಿಕಾ ನಡುವಿನ ವಿವಾಹ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ದೇವಿಕಾ ತನ್ನ ಷರತ್ತುಗಳೊಂದಿಗೆ ಹಿಮಾಂಶು ಬಳಿ ಹಿಂದಿರುಗುತ್ತಾಳೆ ಮತ್ತು ಹಿಮಾಂಶು ಮರಣದವರೆಗೆ (1940) ಅವರೊಂದಿಗೆ ಇರುತ್ತಾಳೆ. ಆದರೆ, ಬಾಂಬೆ ಟಾಕೀಸ್ ಬ್ಯಾನರ್ ನಲ್ಲಿ ತಯಾರಾದ ಚಿತ್ರಗಳು ಹಿಟ್ ಆಗದೇ ಇದ್ದಾಗ ದೇವಿಕಾ ಚಿತ್ರರಂಗವನ್ನೇ ತೊರೆಯುತ್ತಾಳೆ. ಏತನ್ಮಧ್ಯೆ, ಆಕೆ ರಷ್ಯಾದ ವರ್ಣಚಿತ್ರಕಾರ ಸ್ವೆಟೊಸ್ಲಾಬ್ ರೋರಿಚ್ ಅವರನ್ನು ಭೇಟಿಯಾಗುತ್ತಾರೆ ಮತ್ತು  ನಂತರ ದೇವಿಕಾ ರಾಣಿ ಅವರನ್ನು ವಿವಾಹವಾಗುತ್ತಾರೆ. ದೇವಿಕಾ ರಾಣಿ 9 ಮಾರ್ಚ್ 1994 ರಂದು ತನ್ನ ಕೊನೆಯುಸಿರೆಳೆದಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.