World Kidney Day 2023: ಕಿಡ್ನಿ ಸಮಸ್ಯೆ ಇದ್ದರೆ ಶರೀರ ಈ ಸಂಕೇತಗಳನ್ನು ನೀಡುತ್ತದೆ, ನಿರ್ಲಕ್ಷಿಸಬೇಡಿ!

Kidney Disease: ಮೂತ್ರಪಿಂಡದ ಕಾಯಿಲೆಯಿಂದಾಗಿ, ದೇಹದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ, ಏಕೆಂದರೆ ವಿಷಕಾರಿ ಪದಾರ್ಥಗಳು ಆಂತರಿಕ ಭಾಗದಲ್ಲಿಯೇ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ, ಆದ್ದರಿಂದ ರೋಗಲಕ್ಷಣಗಳನ್ನು ಸಮಯಕ್ಕೆ ಗುರುತಿಸುವುದು ಅವಶ್ಯಕ.  

Written by - Nitin Tabib | Last Updated : Mar 9, 2023, 08:04 PM IST
  • ಮೂತ್ರಪಿಂಡದ ಸೋಂಕು ಮತ್ತು ಮೂತ್ರಪಿಂಡ ವೈಫಲ್ಯದಂತಹ
  • ಸಮಸ್ಯೆಗಳು ಸಹ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ.
  • ಸಮಯಕ್ಕೆ ಅದರ ರೋಗಲಕ್ಷಣಗಳನ್ನು ಗುರುತಿಸುವುದು ತುಂಬಾ ಮುಖ್ಯ.
World Kidney Day 2023: ಕಿಡ್ನಿ ಸಮಸ್ಯೆ ಇದ್ದರೆ ಶರೀರ ಈ ಸಂಕೇತಗಳನ್ನು ನೀಡುತ್ತದೆ, ನಿರ್ಲಕ್ಷಿಸಬೇಡಿ! title=
ವಿಶ್ವ ಕಿಡ್ನಿ ದಿನ 2023

Kidney Dieses Warning Signs: ಕಿಡ್ನಿ ನಮ್ಮ ದೇಹದ ಬಹುಮುಖ್ಯ ಅಂಗವಾಗಿದೆ, ಕಿಡ್ನಿ ನಮ್ಮ ರಕ್ತದಲ್ಲಿರುವ ಕೊಳೆ ಸೋಸುತ್ತದೆ, ಹಾಗೆಯೇ ನಮ್ಮ ಮೂತ್ರಪಿಂಡಗಳು ದೇಹದಲ್ಲಿ ಶುದ್ಧ ರಕ್ತದ ಹರಿವಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಿಡ್ನಿ ಕಾರ್ಯದಲ್ಲಿ ಕೊಂಚ ಅಡೆತಡೆ ಎದುರಾದರೆ, ಅದರ ಪರಿಣಾಮ ನಮ್ಮ ದೇಹದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಮೂತ್ರಪಿಂಡದ ಸೋಂಕು ಮತ್ತು ಮೂತ್ರಪಿಂಡ ವೈಫಲ್ಯದಂತಹ ಸಮಸ್ಯೆಗಳು ಸಹ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ. ಸಮಯಕ್ಕೆ ಅದರ ರೋಗಲಕ್ಷಣಗಳನ್ನು ಗುರುತಿಸುವುದು ತುಂಬಾ ಮುಖ್ಯ. ಮೂತ್ರಪಿಂಡಗಳು ಹಾನಿಗೊಳಗಾದಾಗ ನಮ್ಮ ದೇಹವು ಕೆಲ ಎಚ್ಚರಿಕೆಯ ಸಂಕೇತಗಳನ್ನು ನೀಡುತ್ತದೆ ಅವು ಯಾವುವು ತಿಳಿದುಕೊಳ್ಳೋಣ ಬನ್ನಿ,

1. ಹೆಚ್ಚಿನ ಆಯಾಸ- ಮೂತ್ರಪಿಂಡದ ಫಿಲ್ಟರ್ ಪ್ರಕ್ರಿಯೆಯಲ್ಲಿನ ಅಡಚಣೆಯಿಂದಾಗಿ, ದೇಹದಲ್ಲಿ ವಿಷಕಾರಿ ಪದಾರ್ಥಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ದೌರ್ಬಲ್ಯದ ಅನುಭವವಾಗುತ್ತದೆ ಮತ್ತು ಆಯಾಸವೂ ಹೆಚ್ಚಾಗುತ್ತದೆ.

2. ನಿದ್ರೆಯ ಕೊರತೆ- ಮೂತ್ರಪಿಂಡದ ಕಾರ್ಯಚಟುವಟಿಕೆಯಲ್ಲಿನ ಅಡಚಣೆಯು ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ನಿದ್ರಾಹೀನತೆಯ ಸಮಸ್ಯೆ ಉದ್ಭವಿಸುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಎಚ್ಚರ ವಹಿಸುವುದು ಅವಶ್ಯಕ.

3. ತುರಿಕೆ- ಕಿಡ್ನಿ ಸಮಸ್ಯೆಯಿಂದ ಯಾವಾಗ ವಿಷಕಾರಿ ಪದಾರ್ಥಗಳು ದೇಹದಿನ ಹೊರಬರಲು ಸಾಧ್ಯವಾಗುತ್ತಿಲ್ಲವೋ ಆಗ ರಕ್ತದಲ್ಲಿ ಈ ಕೊಳೆ ಸೇರಿಕೊಳ್ಳುತ್ತದೆ ಮತ್ತು ಇದು ಚರ್ಮದಲ್ಲಿ ತುರಿಕೆಗೆ ಕಾರಣವಾಗುತ್ತದೆ.

4. ಮೂತ್ರದ ಬಣ್ಣದಲ್ಲಿ ಬದಲಾವಣೆ-  ಮೂತ್ರಪಿಂಡಗಳು ಹಾನಿಗೊಳಗಾದಾಗ, ಹೆಚ್ಚಿನ ಪ್ರೋಟೀನ್ ಹೊರಬರಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ಮೂತ್ರದ ಬಣ್ಣವು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ, ಅನೇಕ ಸಂದರ್ಭಗಳಲ್ಲಿ ನೊರೆ ಮತ್ತು ರಕ್ತವು ಮೂತ್ರದಿಂದ ಹೊರಬರಲು ಪ್ರಾರಂಭಿಸುತ್ತದೆ.

5. ಮುಖ ಮತ್ತು ಕಾಲುಗಳ ಊತ- ಮೂತ್ರಪಿಂಡಗಳು ನಮ್ಮ ದೇಹದಿಂದ ಸೋಡಿಯಂ ಅನ್ನು ತೆಗೆದುಹಾಕಲು ಸಾಧ್ಯವಾಗದಿದ್ದಾಗ, ಅದು ದೇಹದಲ್ಲಿಯೇ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ಕಾಲು ಮತ್ತು ಮುಖದಲ್ಲಿ ಊತ ಕಾಣಿಸಿಕೊಳ್ಳುತ್ತದೆ.

6. ಸ್ನಾಯು ಸೆಳೆತ- ಮೂತ್ರಪಿಂಡದ ವೈಫಲ್ಯದಿಂದಾಗಿ ಕಾಲುಗಳು ಮತ್ತು ಸ್ನಾಯುಗಳಲ್ಲಿ ಸೆಳೆತಗಳು ಪ್ರಾರಂಭವಾಗುತ್ತವೆ. ಏಕೆಂದರೆ ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಅಥವಾ ಇತರ ಎಲೆಕ್ಟ್ರೋಲೈಟ್‌ಗಳ ಮಟ್ಟದಲ್ಲಿ ಅಸಮತೋಲನ ಉಂಟಾಗುತ್ತದೆ.

ಇದನ್ನೂ ಓದಿ-ಕೆಲವೇ ದಿನಗಳಲ್ಲಿ ವೇಗವಾಗಿ ತೂಕ ಕಳೆದುಕೊಳ್ಳಬೇಕೇ? ಹಸಿರು ಪಪ್ಪಾಯಿ ಟ್ರೈ ಮಾಡಿ ನೋಡಿ!

7. ಉಸಿರಾಟದ ತೊಂದರೆ- ನೀವು ಆಗಾಗ್ಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ, ಅದು ಮೂತ್ರಪಿಂಡದ ಕಾಯಿಲೆಯ ಲಕ್ಷಣವಾಗಿರಬಹುದು, ಇಂತಹ ಪರಿಸ್ಥಿತಿಗಳು ಎರಿಥ್ರೋಪೊಯೆಟಿನ್ ಎಂಬ ಹಾರ್ಮೋನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ, ಇದು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ-Paan Hair Mask: ಕೂದಲಿನ ಹಲವು ಸಮಸ್ಯೆಗಳಿಗೆ ರಾಮಬಾಣ ಉಪಾಯ ಈ ಪಾನ್ ಹೆಯರ್ ಮಾಸ್ಕ್!

(ಹಕ್ಕುತಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News