ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದಿಂದ ಬಹುತೇಕ ಚಿತ್ರರಂಗದ ಕೆಲಸಗಳು ಸ್ಥಗಿತವಾಗಿದ್ದವು. ಶೂಟಿಂಗ್ ಮುಗಿಸಿ ಬಿಡುಗಡೆಗಾಗಿ ಕಾಯುತ್ತಿದ್ದ ಚಿತ್ರಗಳಿಗೆ ಕೊರೊನಾ ಅಡ್ಡಿಯಾಗಿತ್ತು. ಇದೀಗ ಲಾಕ್​ಡೌನ್ ಸಡಿಲಿಕೆಯಾಗಿರುವ ಕಾರಣ ಸಿನಿಮಾ ಪ್ರದರ್ಶನಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳಲ್ಲಿ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಬಿಡುಗಡೆಗಾಗಿ ಕಾಯುತ್ತಿದ್ದ ಸ್ಯಾಂಡಲ್​ವುಡ್ನ ಒಂದೊಂದೆ ಸಿನಿಮಾಗಳು ರಿಲೀಸ್ ಡೇಟ್ ಘೋಷಿಸುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಉದ್ಯಮಿ ರಾಜ್ ಕುಂದ್ರಾಗೆ ಹೆಚ್ಚಿದ ಸಂಕಷ್ಟ , ಉಮೇಶ್ ಕಾಮತ್ ಜೊತೆ ನಡೆಸಿದ ವ್ಯವಹಾರಗಳ ಸಾಕ್ಷಿ ಲಭ್ಯ


Cinema Release) ಆಗಲಿದೆ. ಎಂದಿನಂತೆಯೆ ನಿಮ್ಮ ಪ್ರೀತಿ ಆಶೀರ್ವಾದ ಇರಲಿ’  ಎಂದು ಅವರು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ನಟಿ ಪ್ರಿಯಾಮಣಿಗೆ ಸುಳ್ಳು ಹೇಳಿ ಮದುವೆಯಾದರೆ ಮುಸ್ತಾಪಾ ?


ಸೆ.24ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿರುವ ‘ಬಡವ ರಾಸ್ಕಲ್’(Badava Rascal) ಚಿತ್ರವು ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಧನಂಜಯ್ ಹೇಳಿರುವಂತೆಯೇ ಇದು ಮಿಡಲ್ ಕ್ಲಾಸ್ ಹುಡುಗನೊಬ್ಬನ ಕಥೆಯಾಗಿದ್ದು, ಪೋಸ್ಟರ್, ಟೀಸರ್ ಮತ್ತು ಟ್ರೈಲರ್ ಮೂಲಕ ಗಮನ ಸೆಳೆದಿದೆ. ಸಹಾಯಕ ನಿರ್ದೇಶಕರಾಗಿದ್ದ ಗುರು ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಯುವ ಗಾಯಕ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಧನಂಜಯ್ ಜೊತೆ ನಟಿ ಅಮೃತಾ ಅಯ್ಯಂಗಾರ್ ತೆರೆ ಹಂಚಿಕೊಂಡಿದ್ದಾರೆ. ‘ಪಾಪ್‌ಕಾರ್ನ್ ಮಂಕಿ ಟೈಗರ್’ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ.


ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಧನಂಜಯ್ ಜೊತೆ ಗುಜ್ಮಾಲ್ ಪುರುಷೋತ್ತಮ್ ಬಂಡವಾಳ ಹೂಡಿದ್ದಾರೆ. ‘ಟಗರು’ ಸಿನಿಮಾದ ಡಾಲಿ ಪಾತ್ರದ ಮೂಲಕ ಸಖತ್ ಸೌಂಡ್ ಮಾಡಿದ್ದ ನಟ ಧನಂಜಯ್ ಈಗ ಸ್ಯಾಂಡಲ್ ವುಡ್(Sandalwood)ನ ಬ್ಯುಸಿ ನಟರಾಗಿದ್ದಾರೆ. ಅವರ ಕೈಯಲ್ಲಿಗ ಅನೇಕ ಸಿನಿಮಾ ಆಫರ್ ಗಳಿವೆ. ತಮ್ಮ ವಿಶಿಷ್ಟ ಅಭಿನಯದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಧನಂಜಯ್ ಸಂಪಾದಿಸಿದ್ದಾರೆ. ‘ಬಡವ ರಾಸ್ಕಲ್’ ಸಿನಿಮಾ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ.     


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ