ಉದ್ಯಮಿ ರಾಜ್ ಕುಂದ್ರಾಗೆ ಹೆಚ್ಚಿದ ಸಂಕಷ್ಟ , ಉಮೇಶ್ ಕಾಮತ್ ಜೊತೆ ನಡೆಸಿದ ವ್ಯವಹಾರಗಳ ಸಾಕ್ಷಿ ಲಭ್ಯ

ಉಮೇಶ್ ಕಾಮತ್ ನೇರವಾಗಿ ರಾಜ್ ಕುಂದ್ರಾನನ್ನು  ಉದ್ದೇಶಿಸಿ ಬರೆದಿರುವ ಇ-ಮೇಲ್ ದೊರೆತಿದೆ. ಇದರಲ್ಲಿ ತಾನು ಇನ್ ವಾಯ್ಸ್ ಕಳುಹಿಸಿದ್ದು, ಅದನ್ನು ಪರಿಶೀಲಿಸುವಂತೆ ಉಮೇಶ್ ಕಾಮತ್  ರಾಜ್ ಕುಂದ್ರಾಗೆ ತಿಳಿಸಿದ್ದಾರೆ.  

Written by - Ranjitha R K | Last Updated : Jul 22, 2021, 08:42 PM IST
  • ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿರುವ ರಾಜ್ ಕುಂದ್ರಾ
  • ಉಮೇಶ್ ಕಾಮತ್ ಜೊತೆಗಿನ ವಹಿವಾಟಿನ ಸಾಕ್ಷಿ ಲಭ್ಯ
  • ಇಮೇಲ್ ಮೂಲಕ ಕಾಮತ್-ಕುಂದ್ರಾ ಮಾತುಕತೆ
ಉದ್ಯಮಿ ರಾಜ್ ಕುಂದ್ರಾಗೆ ಹೆಚ್ಚಿದ ಸಂಕಷ್ಟ , ಉಮೇಶ್ ಕಾಮತ್ ಜೊತೆ ನಡೆಸಿದ ವ್ಯವಹಾರಗಳ ಸಾಕ್ಷಿ ಲಭ್ಯ

ಮುಂಬೈ: ಅಶ್ಲೀಲ ಚಿತ್ರಗಳನ್ನು ನಿರ್ಮಿಸಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ (Raj Kundra) ಸಂಕಷ್ಟ ಹೆಚ್ಚುತ್ತಿದೆ.  ಪೊಲೀಸ್ ತನಿಖೆಯಲ್ಲಿ ರಾಜ್ ಕುಂದ್ರ ವಿರುದ್ಧ ಬಲವಾದ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗಿದೆ. ಪೊಲೀಸರಿಗೆ ಸಿಕಿರುವ ಸಾಕ್ಷ್ಯಗಳ ಆಧಾರದಲ್ಲಿ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ನಿರ್ಮಾಣ ಕಾರ್ಯದಲ್ಲಿ  ತೊಡಗಿರುವುದು ಸ್ಪಷ್ಟವಾಗುತ್ತಿದೆ ಎನ್ನಲಾಗಿದೆ. ರಾಜ್ ಕುಂದ್ರಾ ಮತ್ತು ಉಮೇಶ್ ಕಾಮತ್ (Umesh Kamat) ನಡುವಿನ ಹಣದ ವಹಿವಾಟಿಗೆ ಸಂಬಂಧಿಸಿದ ಇ-ಮೇಲ್ ಗಳ  ಪುರಾವೆಗಳು ದೊರೆತಿವೆ.

ಹಣದ ವಹಿವಾಟಿನ ಮಾತುಕತೆಯ ಸಾಕ್ಷ್ಯ :
ಉಮೇಶ್ ಕಾಮತ್ ನೇರವಾಗಿ ರಾಜ್ ಕುಂದ್ರಾನನ್ನು (Raj Kundra) ಉದ್ದೇಶಿಸಿ ಬರೆದಿರುವ ಇ-ಮೇಲ್ ದೊರೆತಿದೆ. ಇದರಲ್ಲಿ ತಾನು ಇನ್ ವಾಯ್ಸ್ ಕಳುಹಿಸಿದ್ದು, ಅದನ್ನು ಪರಿಶೀಲಿಸುವಂತೆ ಉಮೇಶ್ ಕಾಮತ್ (Umesh Kamt)  ರಾಜ್ ಕುಂದ್ರಾಗೆ ತಿಳಿಸಿದ್ದಾರೆ.  ಪ್ರತಿಕ್ರಿಯೆಯಾಗಿ, ರಾಜ್ ಕುಂದ್ರಾ ಇನ್‌ವಾಯ್ಸ್ ಅನ್ನು 1890 ಡಾಲರ್ ಗೆ ಸೀಮಿತಗೊಳಿಸುವಂತೆ ಸೂಚಿಸುತ್ತಾರೆ. ಪ್ರತಿಕ್ರಿಯೆಯಾಗಿ, ಉಮೇಶ್  2020 ರ ಜನವರಿಯ ಕನ್ಸಲ್ಟೆನ್ಸಿಯ ಶುಲ್ಕ ನೀಡಬೇಕು. ಜಾರ್ಜ್‌ಗೆ 35k ಮತ್ತು  ಮೇಘಾಗೆ 5k ಪಾವತಿಸಬೇಕಾಗುತ್ತದೆ ಎಂದು ಬರೆದಿದ್ದಾರೆ. ಈ ಎಲ್ಲಾ ಇಮೇಲ್‌ಗಳು (e mail) ಫೆಬ್ರವರಿ 1, 2020 ರಂದು ನಡೆದಿದೆ.  ಇದನ್ನು  ಹಾಟ್‌ಶಾಟ್ ನ  ಟೋನಿ ಮತ್ತು ಕೈನ್ರಿನ್‌ನ ಪ್ರದೀಪ್ ಬಕ್ಷಿಗೂ ಕಳುಹಿಸಲಾಗಿದೆ.

ಇದನ್ನೂ ಓದಿ : ನಟಿ ಪ್ರಿಯಾಮಣಿಗೆ ಸುಳ್ಳು ಹೇಳಿ ಮದುವೆಯಾದರೆ ಮುಸ್ತಾಪಾ ?

ಅಶ್ಲೀಲ ಅಪ್ಲಿಕೇಶನ್‌ನಿಂದ ಲಕ್ಷಾಂತರ ರೂಪಾಯಿ ಸಂಪಾದಿಸಿರುವ ರಾಜ್ ಕುಂದ್ರಾ : 
ರಾಜ್ ಕುಂದ್ರಾ ಬ್ಯಾಂಕ್ ಖಾತೆಗೆ (Bank account) ಹಾಟ್ ಹಿಟ್ ಅಪ್ಲಿಕೇಶನ್‌ನಿಂದ ನಿಯಮಿತ ರೂಪದಲ್ಲಿ ಪೇಮೆಂಟ್ ಆಗಿರುವ ಮಾಹಿತಿಯನ್ನು ಮುಂಬೈ ಪೊಲೀಸರು  ಹೊರಗೆಳೆದಿದ್ದಾರೆ. ಹಾಟ್ ಹಿಟ್ ತನ್ನನ್ನು ಅತ್ಯುತ್ತಮ ಭಾರತೀಯ ಚಲನಚಿತ್ರಗಳು ಮತ್ತು ವೆಬ್ ಸರಣಿ (Web series)ರೂಪಗಳಲ್ಲಿ ಪರಿಚಯಿಸುತ್ತಿದೆ. ಅಪ್ಲಿಕೇಶನ್‌ನಲ್ಲಿ ವೀಡಿಯೊ ವಿಷಯವನ್ನು ವೀಕ್ಷಿಸಲು, ಬಳಕೆದಾರರು ಕೆಲವೊಂದು ಪ್ಲಾನ್ ಗಳ ಚಂದಾದಾರರಾಗಬೇಕಾಗುತ್ತದೆ.  ಅಶ್ಲೀಲ ಚಿತ್ರಗಳ ಚಿತ್ರೀಕರಣಕ್ಕಾಗಿ ಉದಯೋನ್ಮುಖ ನಟರು ಮತ್ತು ನಟಿಯರನ್ನು ಒತ್ತಾಯಿಸಿದ್ದಕ್ಕಾಗಿ ಫೆಬ್ರವರಿಯಲ್ಲಿ, ಮುಂಬೈ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದರು. ಈ ಚಲನಚಿತ್ರಗಳನ್ನು ವೆಬ್‌ಸೈಟ್‌ಗಳು (Website) ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಸ್ಟ್ರೀಮ್ ಮಾಡಲಾಗಿತ್ತು.

ಇದನ್ನೂ ಓದಿ : Bhaijaan Angry: ದುಬೈನಲ್ಲಿ ಪತ್ನಿ, 17 ವರ್ಷದ ಪುತ್ರಿ ಇದ್ದಾಳೆಂಬ ಆರೋಪಕ್ಕೆ ಸಲ್ಮಾನ್ ಖಾನ್ ಗರಂ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

More Stories

Trending News