Nayanthara and Vignesh Shivan : ಲೇಡಿ ಸೂಪರ್‌ ಸ್ಟಾರ್‌ ನಯನತಾರ ಮತ್ತು ವಿಘ್ನೇಶ್ ಶಿವನ್ ಸೌತ್‌ ಕ್ಯೂಟ್‌ ಜೋಡಿಗಳಲ್ಲಿ ಒಂದು. 2022 ರಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇದೀಗ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ. ಇನ್ನು ದಂಪತಿಗಳ ಲವ್‌ಗೆ ಪ್ಯಾನ್‌ ಇಂಡಿಯಾ ಸ್ಟಾರ್‌ ನಟರೊಬ್ಬರು ಸೇತುವೆ ಆಗಿದ್ದರು ಎನ್ನುವ ವಿಚಾರ ಇದೀಗ ತಿಳಿದು ಬಂದಿದೆ. 


COMMERCIAL BREAK
SCROLL TO CONTINUE READING

ಹೌದು.. ಸಂದರ್ಶನವೊಂದರಲ್ಲಿ, ವಿಘ್ನೇಶ್, ನಾನ್‌ ರೌಡಿ ಧಾನ್ ಸಿನಿಮಾದ ಕಥೆಯನ್ನು ನಯನತಾರಾಗೆ ಹೇಳಲು ಧನುಷ್ ತಮಗೆ ಐಡಿಯಾ ನೀಡಿದ್ದರು ಅಂತ ತಿಳಿಸಿದ್ದಾರೆ. ಅಲ್ಲದೆ, ಅವಳು ಆ ಕಥೆಯನ್ನು ಇಷ್ಟಪಟ್ಟಳು. ಆದರೆ ನಟ ವಿಜಯ್ ಸೇತುಪತಿಯವರಿಗೆ ಸ್ಕ್ರಿಪ್ಟ್ ಮನವರಿಕೆಯಾಗಲಿಲ್ಲ. ಆದರೆ ನಯನ ಅವರು ಒಪ್ಪಿಗೆ ಸೂಚಿಸಿದ ನಂತರ ಅವರೂ ಒಪ್ಪಿಕೊಂಡರು ಎಂದು ನೆನಪಿಸಿಕೊಂಡರು.


ನಾನ್‌ ರೌಡಿ ಧಾನ್‌.. ಸಿನಿಮಾ ನಯನತಾರ ಅವರ ಜೊತೆ ಸಾಕಷ್ಟು ಸಮಯವನ್ನು ಕಳೆಯಲು ದಾರಿ ಮಾಡಿಕೊಟ್ಟಿತು. ನಾವು ಒಂದು ವರ್ಷದೊಳಗೆ ಹತ್ತಿರವಾದೆವು. ಮೂರು ತಿಂಗಳೊಳಗೆ ಮದುವೆಯಾಗಬೇಕು ಅಂತ ನಿರ್ಧರಿಸಿದೇವು ಅಂತ ನಯನತಾರಾ ಹೇಳಿದರು.  


ದಂಪತಿಗಳು ತಮ್ಮ ಮಕ್ಕಳಾದ ಉಯಿರ್ ಮತ್ತು ಉಲಗ್ ಅವರನ್ನು 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು. ನಯನತಾರಾ 2023 ರಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ನಟಿಸಿದ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು ಅಟ್ಲಿ ನಿರ್ದೇಶಿಸಿದ್ದಾರೆ ಮತ್ತು ದೀಪಿಕಾ ಪಡುಕೋಣೆ, ಪ್ರಿಯಾಮಣಿ ಮತ್ತು ಸನ್ಯಾ ಮಲ್ಹೋತ್ರಾ ಕೂಡ ಕಾಣಿಸಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.