ಮುಂಬೈ: Dharmendra Hospitalised - ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, 86 ವರ್ಷದ ಧರ್ಮೇಂದ್ರ ಅವರನ್ನು ಭಾನುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದ್ದು, ಇದೀಗ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎನ್ನಲಾಗಿದೆ.

COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ, ಧರ್ಮೇಂದ್ರ ಅವರ ಬೆನ್ನಿನಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಂಡಿತ್ತು, ಈ ಹಿನ್ನೆಲೆಯಲ್ಲಿ  ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ಅವರು ಮೊದಲಿಗಿಂತ ಉತ್ತಮವಾಗಿದ್ದಾರೆ. ಚಿಂತೆ ಮಾಡಲು ಕಾರಣವಿಲ್ಲ ಎನ್ನಲಾಗಿದೆ. ಇಂದು ರಾತ್ರಿ ಅವರನ್ನು ಡಿಸ್ಚಾರ್ಜ್ ಕೂಡ ಮಾಡಬಹುದು ಎನ್ನಲಾಗಿದೆ.


ಟ್ವೀಟ್ ಮಾಡುವ ಮೂಲಕ ಆರೋಗ್ಯದ ಮಾಹಿತಿ ನೀಡಿದ ಧರ್ಮೇಂದ್ರ
ತಮ್ಮ ಆರೋಗ್ಯದ ಕುರಿತು ಖುದ್ದು ಟ್ವೀಟ್ ಮಾಡಿರುವ ಧರ್ಮೇಂದ್ರ ಅವರು, ಆರೋಗ್ಯದ ಕುರಿತು ಅಸಡ್ಡೆ ತೋರಿದರ ಪರಿಣಾಮ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ. ಇದರಿಂದ ಅವರು ಸ್ನಾಯು ನೋವಿಗೆ ಒಳಗಾಗಿದ್ದಾರೆ. ನೋವು ವಿಪರೀತವಾದ ಕಾರಣ ಆಸ್ಪತ್ರೆಗೆ ದಾಖಲಿಸಬೇಕಾಯಿತು ಎನ್ನಾಲಾಗಿದೆ. ಮುಂದೆ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ಧರ್ಮೇಂದ್ರ, 'ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ದೇವರ ದಯೆಯಿಂದ ಇದೀಗ ನಾನು ಚೆತರಿಸಿಕೊಂಡಿದ್ದೇನೆ. ಲವ್ ಯು ಆಲ್' ಎಂದಿದ್ದಾರೆ.


RCB ಅಭಿಮಾನಿ, ಆಸ್ಟ್ರೇಲಿಯಾ ಸುಂದರಿ 'ಕೆಜಿಎಫ್‌' ಬಗ್ಗೆ ಹೇಳಿದ್ದನ್ನ ಕೇಳಿದ್ರೆ ಶಾಖ್‌ ಆಗ್ತೀರಾ..!

ದೀರ್ಘಕಾಲದವರೆಗೆ ಚಿತ್ರರಂಗದಿಂದ ದೂರವಿರುವ ಧರ್ಮೇಂದ್ರ ಅವರು ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ' ಪ್ರೇಮಕಥೆಯ ಮೂಲಕ ಬಾಲಿವುಡ್‌ಗೆ ಮರಳಲಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಜೊತೆಗೆ ರಣವೀರ್ ಸಿಂಗ್, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ-'ಕೆಜಿಎಫ್‌' ಚಿತ್ರದ ಹೆಸರು ಕೇಳಿದ್ರೆ ಸಾಕು ಭಯವಾಗುತ್ತೆ' ಎಂದ ಆಮೀರ್‌ ಖಾನ್

ಮುಂಬರುವ ದಿನಗಳಲ್ಲಿ ಧರ್ಮೇಂದ್ರ ಅವರ ಇಬ್ಬರು ಮಕ್ಕಳಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಜೊತೆಗೆ 'ಅಪ್ನೆ 2' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರ ಮೊಮ್ಮಗ ಮತ್ತು ಸನ್ನಿ ಡಿಯೋಲ್ ಅವರ ಪುತ್ರ ಕರಣ್ ಡಿಯೋಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ. 'ಅಪ್ನೆ -2' ಚಿತ್ರ 2007 ರಲ್ಲಿ ತೆರೆಕಂಡ ಅವರ 'ಅಪ್ನೆ  ಚಲನಚಿತ್ರದ ಭಾಗ 2 ಆಗಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.