RCB ಅಭಿಮಾನಿ, ಆಸ್ಟ್ರೇಲಿಯಾ ಸುಂದರಿ 'ಕೆಜಿಎಫ್‌' ಬಗ್ಗೆ ಹೇಳಿದ್ದನ್ನ ಕೇಳಿದ್ರೆ ಶಾಖ್‌ ಆಗ್ತೀರಾ..!

Written by - Malathesha M | Edited by - Manjunath N | Last Updated : May 1, 2022, 08:55 PM IST
  • ಇಂತಹ ಚಿನ್ನದಂತಹ ಕನ್ನಡ ಸಿನಿಮಾ ಬಗ್ಗೆ ವಿದೇಶಿಗರು ಸಖತ್‌ ಕ್ರೇಜ್‌ ಬೆಳೆಸಿಕೊಂಡಿದ್ದಾರೆ. ಇದೇ ರೀತಿ ಆಸ್ಟ್ರೇಲಿಯಾದ ಸುಂದರಿ ಒಬ್ಬಳು 'ಕೆಜಿಎಫ್‌' ಸಿನಿಮಾ ಬಗ್ಗೆ ಆಡಿರುವ ಮಾತುಗಳನ್ನ ಕೇಳಿದ್ರೆ ನೀವು ಶಾಕ್‌ ಆಗ್ತೀರಾ.
RCB ಅಭಿಮಾನಿ, ಆಸ್ಟ್ರೇಲಿಯಾ ಸುಂದರಿ 'ಕೆಜಿಎಫ್‌' ಬಗ್ಗೆ ಹೇಳಿದ್ದನ್ನ ಕೇಳಿದ್ರೆ ಶಾಖ್‌ ಆಗ್ತೀರಾ..! title=
Photo Courtesy: Twitter

'ಕೆಜಿಎಫ್‌'... 'ಕೆಜಿಎಫ್‌'... 'ಕೆಜಿಎಫ್‌'... ಹೀಗೆ ಎಲ್ಲೆಲ್ಲೂ 'ಕೆಜಿಎಫ್‌' ಪದವೇ ಕಿವಿಗೆ ಬೀಳುತ್ತಿದೆ. ಇಡೀ ಜಗತ್ತೇ ಮೆಚ್ಚಿರುವ 'ಕೆಜಿಎಫ್‌' ಸಿನಿಮಾ, ದಿನದಿಂದ ದಿನಕ್ಕೆ ದೊಡ್ಡ ದೊಡ್ಡ ದಾಖಲೆ ಬರೆಯುತ್ತಿದೆ.ಇಂತಹ ಚಿನ್ನದಂತಹ ಕನ್ನಡ ಸಿನಿಮಾ ಬಗ್ಗೆ ವಿದೇಶಿಗರು ಸಖತ್‌ ಕ್ರೇಜ್‌ ಬೆಳೆಸಿಕೊಂಡಿದ್ದಾರೆ. ಇದೇ ರೀತಿ ಆಸ್ಟ್ರೇಲಿಯಾದ ಸುಂದರಿ ಒಬ್ಬಳು 'ಕೆಜಿಎಫ್‌' ಸಿನಿಮಾ ಬಗ್ಗೆ ಆಡಿರುವ ಮಾತುಗಳನ್ನ ಕೇಳಿದ್ರೆ ನೀವು ಶಾಕ್‌ ಆಗ್ತೀರಾ. 

ಇದನ್ನೂ ಓದಿ: ₹1000 ಕೋಟಿ ಕ್ಲಬ್‌ ಸೇರಿದ 'ರಾಕಿ ಭಾಯ್‌' ಸಿನಿಮಾ ಕೆಜಿಎಫ್ ಚಾಪ್ಟರ್‌-2..?

ಕ್ಲಾಯ್-ಅಮಂಡಾ ಬೈಲೆ (Chloe-Amanda Bailey) ಎಂಬ ಆಸ್ಟ್ರೇಲಿಯಾ ಮೂಲದ ಯುವತಿ, ಕೆಜಿಎಫ್‌ ಚಾಪ್ಟರ್‌ 2 ನೋಡಿ 'ನಾನು ಸ್ವಲ್ಪ ತಡವಾಗಿ ಬಂದಿದ್ದೇನೆ' ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗೇ  'How did they make #KGFChapter2 look like that? Visually incredible, sound effects & BGM amazing. Yash is of course awesome - who picked is flamboyant outfits? They were perfectly Rocky bhai, I loved them! I regret having to wait to see this film. It was freaking fantastic.' ಎಂದು ಕೆಜಿಎಫ್ ಸಿನಿಮಾ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದಾರೆ.‌

ಇದನ್ನೂ ಓದಿ: ಬಹುಕೋಟಿ ಮೊತ್ತದ ಪಾನ್ ಮಸಾಲಾ ಜಾಹೀರಾತು ನಿರಾಕರಿಸಿದ ಯಶ್...!

ಆಸ್ಟ್ರೇಲಿಯಾದಲ್ಲೂ ಹವಾ:

ರಾಕಿಭಾಯ್‌ ಅಬ್ಬರ ಭಾರತದಲ್ಲಿ ಮಾತ್ರವಲ್ಲ. ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯಾ, ಕೆನಡಾ, ಯುರೋಪ್‌ ಸೇರಿದಂತೆ ಜಗತ್ತಿನ ಮೂಲೆಮೂಲೆಗೂ ತಲುಪಿದೆ. ಈಗಾಗಲೇ ಅಮೆರಿಕದಲ್ಲಿ ಭಾರತೀಯ ಸಿನಿಮಾವೊಂದು ಈವರೆಗೆ ಮಾಡಲಾಗದ ದಾಖಲೆಯನ್ನೂ ಕೆಜಿಎಫ್‌ ಚಾಪ್ಟರ್‌ 2 ಮಾಡಿ ತೋರಿಸಿದೆ. ರಾಕಿ ಆಕ್ಟಿಂಗ್‌ ಖದರ್‌ ಕಣ್ತುಂಬಿಕೊಂಡು ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾನೆ. ಅಮೆರಿಕ ಬಾಕ್ಸ್‌ ಆಫಿಸ್‌ನಲ್ಲಿ ಕೆಜಿಎಫ್‌ ಚಾಪ್ಟರ್‌ 2 ಹಾಲಿವುಡ್‌ ಸಿನಿಮಾಗಳ ಸಾಲಿನಲ್ಲಿ ನಿಂತಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ರಾಕಿ ಭಾಯ್ ಅಬ್ಬರ

ಒಟ್ಟಾರೆ ಹೇಳೋದಾದ್ರೆ ಕೆಜಿಎಫ್‌ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಾಣ ಮಾಡುತ್ತಾ, ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯನ್ನ ತರುತ್ತಿದೆ. ಅದರಲ್ಲೂ ಕನ್ನಡಿಗರಿಗೆ ಕೆಜಿಎಫ್‌ ಒಂದು ಹೆಮ್ಮೆಯ ವಿಚಾರವಾಗಿದ್ದು, ದೇಶಾದ್ಯಂತ ಕನ್ನಡ ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾಯುವಂತಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

 

Trending News