ಹತ್ತು ವರ್ಷಗಳ ನಂತರ ಬೆಳ್ಳಿತೆರೆಯ ಮೇಲೆ ಮತ್ತೆ `ಬಹದ್ದೂರ್`!
Bahaddur Re-release: ಆರ್ ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್ ಶ್ರೀನಿವಾಸ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಿಸಿರುವ, ಚೇತನ್ ಕುಮಾರ್ ನಿರ್ದೇಶನದ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ಹಾಗೂ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದ ಸೂಪರ್ ಹಿಟ್ `ಬಹದ್ದೂರ್` ಚಿತ್ರ
Bahaddur: "ಬಹದ್ದೂರ್" ಚಿತ್ರ 2014 ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಹತ್ತು ವರ್ಷಗಳ ನಂತರ ಜೂನ್ 21 ರಂದು ಈ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಗೋಕುಲ್ ಫಿಲಂಸ್ ಅವರು ಅದ್ದೂರಿಯಾಗಿ ಅನೇಕ ಚಿತ್ರಮಂದಿರಗಳಲ್ಲಿ ಚಿತ್ರವನ್ನು ರೀ ರಿಲೀಸ್ ಮಾಡುತ್ತಿದ್ದಾರೆ.
"ಬಹದ್ದೂರ್" ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರು ಧ್ವನಿ ನೀಡಿದ್ದರು. ಪುನೀತ್ ಅವರು ತಮ್ಮ ಅಭಿನಯದ ಚಿತ್ರವನ್ನು ಹೊರತುಪಡಿಸಿ ಧ್ವನಿ ನೀಡಿದ ಮೊದಲ ಚಿತ್ರ "ಬಹದ್ದೂರ್". ಚಿತ್ರದ ಮೊದಲ ಸನ್ನಿವೇಶಕ್ಕೆ ರವಿಚಂದ್ರನ್ ಅವರು ಕ್ಲ್ಯಾಪ್ ಮಾಡಿ ಹಾರೈಸಿದ್ದರು.
ಇದನ್ನೂ ಓದಿ-"ಆ ಸೀನ್‌ಗಳನ್ನು ಮಾಡೋವಾಗ ತುಂಬಾ ನೋವಾಗುತ್ತೆ" ಇಂಟಿಮೇಟ್ ದೃಶ್ಯಗಳ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ ಖ್ಯಾತ ನಟಿ!!
ಪುನೀತ್ ರಾಜಕುಮಾರ್ ಅವರೆ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದ್ದರು. ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಇಂದಿಗೂ ಜನಪ್ರಿಯ. "ಬಹದ್ದೂರ್ " ಬಿಡುಗಡೆಯಾದ ಹತ್ತು ವರ್ಷಗಳಲ್ಲಿ ನೂರಾರೂ ಸಲ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದೆ.
ಈ ಚಿತ್ರ ಪ್ರಸಾರವಾದಗಲೆಲ್ಲ ಉತ್ತಮ ಟಿ.ಆರ್.ಪಿ ಬರುತ್ತಿರುವುದು ವಿಶೇಷ. ಧ್ರುವ ಸರ್ಜಾ ಹಾಗು ರಾಧಿಕಾ ಪಂಡಿತ್ ಅವರ ಅದ್ಭುತ ಅಭಿನಯ ಈ ಚಿತ್ರದ ಹೈಲೆಟ್. ಇದು ಧ್ರುವ ಸರ್ಜಾ ಅಭಿನಯದ ಎರಡನೇ ಚಿತ್ರ. ಹತ್ತು ವರ್ಷಗಳ ಮೇಲೆ ಈ ಚಿತ್ರ ಮರು ಬಿಡುಗಡೆಯಾಗುತ್ತಿರುವುದು ಸಂತೋಷವಾಗಿದೆ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.
ಇದನ್ನೂ ಓದಿ-'ರಾಬಿನ್‌ಹುಡ್'ಗೆ ಶ್ರೀಲೀಲಾ ಲೇಡಿಬಾಸ್..! ಮತ್ತೆ ಒಂದಾಯ್ತು 'ಎಕ್ಸ್-ಅರ್ಡಿನರಿ ಮ್ಯಾನ್' ಜೋಡಿ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ