ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾನ ಬಿಗ್ ಸ್ಕ್ರೀನ್ ಮೇಲೆ ಯಾವಾಗಪ್ಪ ನೋಡೋದು ಅಂತ ಫ್ಯಾನ್ಸ್ ನಿದ್ದೆ ಬಿಟ್ಟು ಕಾಯುತ್ತಿದ್ದಾರೆ. ನಿಮ್ಗೆ ಗೊತ್ತಿರೋ ಹಾಗೇ ಡೈರೆಕ್ಟರ್ ಎಪಿ ಅರ್ಜುನ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬೊ ಸಖತ್ ಆಗೇ ವರ್ಕೌಟ್ ಆಗುತ್ತೆ. ಇದೀಗ ಈ ಜೋಡಿ ಕಡೆಯಿಂದ ಮಾರ್ಟಿನ್ ಅನ್ನೋ ವಿಭಿನ್ನ ಸ್ಟೋರಿ ಹೊಂದಿರೋ ಸಿನಿಮಾ ರೆಡಿಯಾಗಿದೆ. 


COMMERCIAL BREAK
SCROLL TO CONTINUE READING

ಯಾಕ್ ಸ್ವಾಮಿ ಮಾರ್ಟಿನ್ ಬಗ್ಗೆ ಏನು ಮ್ಯಾಟರ್ ರಿವಿಲ್ ಮಾಡ್ತಾ ಇಲ್ಲ ಅಂತ ಫ್ಯಾನ್ಸ್ ಕೇಳುತ್ತಲೇ ಇದ್ದರು. ಇದೀಗ ಧ್ರುವ ಸರ್ಜಾ ಫ್ಯಾನ್ಸ್ ಗೇ ಹ್ಯಾಪಿ ನ್ಯೂಸ್ ಸಿಕ್ಕಿದೆ. ಅದೇನ್ ಅಂದ್ರೆ ಬಹುನಿರೀಕ್ಷೆಯ ಮಾರ್ಟಿನ್ ಸಿನಿಮಾದ ಟೀಸರ್ ಇದೇ ತಿಂಗಳ 23ಕ್ಕೆ ರಿಲೀಸ್ ಆಗುತ್ತಿದೆ.


ಇದನ್ನೂ ಓದಿ- Rashmika Mandanna: ರಶ್ಮಿಕಾ ಅವರ ವ್ಯಾಲೆಂಟೈನ್ ಇವರೇ ನೋಡಿ.! ಕಿಸ್ ಕೊಟ್ಟ ವಿಡಿಯೋ ವೈರಲ್


ಈ ಸಲ ಕೂಡ ಮಾರ್ಟಿನ್ ಸಿನಿಮಾ ಮೂಲಕ ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ದೊಡ್ಡ ಮಟ್ಟದಲ್ಲೇ ಮ್ಯಾಜಿಕ್ ಮಾಡೋದು ಕನ್ಫರ್ಮ್ ಆಗಿದೆ. ಪಂಚ ಭಾಷೆಗಳಲ್ಲಿ ಫೆಬ್ರವರಿ 23ಕ್ಕೆ ಟೀಸರ್ ರಿಲೀಸ್ ಆಗುತ್ತಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಸೀಕ್ವೆನ್ಸ್‌ಗಾಗಿ ನಿರ್ಮಾಪಕರು 40 ದಿನಗಳ ಚಿತ್ರೀಕರಣ ನಡೆಸಿದ್ದಾರೆ. 


ಚೇಸ್ ದೃಶ್ಯಗಳಿಗೆ ಕೊರಿಯೋಗ್ರಫಿ ಮಾಡಲು ರವಿವರ್ಮ ಮತ್ತು ಫೈಟ್ ದೃಶ್ಯಗಳಿಗೆ ರಾಮ್-ಲಕ್ಷ್ಮಣ್ ಜೋಡಿಯನ್ನು ನಿರ್ದೇಶಕ ಅರ್ಜುನ್ ಬಳಸಿಕೊಂಡಿದ್ದಾರೆ.ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ.


ಇದನ್ನೂ ಓದಿ- ಕೊನೆಗೂ ರಿಲೀಸ್ ಆಯ್ತು ‘ಜೂಲಿಯಟ್ 2’ ಟ್ರೇಲರ್! ಸಿನಿಮಾದ ಟ್ರೇಲರ್ ಕಂಡ ಫ್ಯಾನ್ಸ್ ಹೇಳ್ತಿರೋದು ಏನು?


ಕ್ಲೈಮ್ಯಾಕ್ಸ್‌ನ ಚಿತ್ರೀಕರಣಕ್ಕಾಗಿ ಚಿತ್ರತಂಡ ಕೊಮ್ಮಘಟ್ಟದಲ್ಲಿ ಬೃಹತ್‌ ಸೆಟ್‌ ಹಾಕಿ ಅಲ್ಲಿ ಚಿತ್ರೀಕರಣ ಮಾಡಿ ಮುಗಿಸಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.