Dhruva Sarja : 23 ದಿನದಲ್ಲಿ ಧ್ರುವ ಸರ್ಜಾ ಕಳೆದುಕೊಂಡ ತೂಕ ಕೇಳಿದ್ರೆ ಶಾಕ್ ಆಗ್ತೀರಾ!
Dhruva Sarja Weight Loss : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 23 ದಿನದಲ್ಲಿ ಕೆಜಿಗಟ್ಟಲೆ ತೂಕ ಇಳಿಸಿ ಬೆರಗು ಮೂಡಿಸಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ `KD` (ಕೆಡಿ) ಸಿನಿಮಾದ ಶೂಟಿಂಗ್‌ನಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ. ಕೆಡಿ ಚಿತ್ರಕ್ಕೆ ಆಕ್ಟನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ನಟರಾಗಿದ್ದಾರೆ.
Dhruva Sarja Weight Loss : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 23 ದಿನದಲ್ಲಿ ಕೆಜಿಗಟ್ಟಲೆ ತೂಕ ಇಳಿಸಿ ಬೆರಗು ಮೂಡಿಸಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ 'KD' (ಕೆಡಿ) ಸಿನಿಮಾದ ಶೂಟಿಂಗ್‌ನಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ. ಕೆಡಿ ಚಿತ್ರಕ್ಕೆ ಆಕ್ಟನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕ ನಟರಾಗಿದ್ದಾರೆ. ಕೆವಿಎನ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗಾಗಿಯೇ ಧ್ರುವ ತೂಕ ಇಳಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಧ್ರುವ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಅನುಮಾನ ಕೂಡ ಮೂಡಿದೆ.
ಈ ಹಿಂದೆ ಪೊಗರು ಸಿನಿಮಾದಲ್ಲಿ 13 ವರ್ಷದ ಹುಡುಗನ ರೀತಿ ಕಾಣಲು ಧ್ರುವ 30 ಕೆಜಿ ತೂಕ ಇಳಿಸಿಕೊಂಡಿದ್ದರು. ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದೀಗ ಮತ್ತೊಮ್ಮೆ ಸಿನಿಮಾಗಾಗಿ ಧ್ರುವ ತೂಕ ಇಳಿಸಿಕೊಂಡಿದ್ದಾರೆ. KD ಸಿನಿಮಾಗಾಗಿ ಧ್ರುವ ಸರ್ಜಾ 23 ದಿನದಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ : Yash : ನಿಮಗೆ ಉಳಿದಿರುವ ಆಯ್ಕೆ ‘KGF 3’ ಒಂದೇ! ಕೊಂಕು ನುಡಿದವರಿಗೆ ಯಶ್ ಖಡಕ್ ಉತ್ತರ
ಪಾತ್ರಕ್ಕಾಗಿ ಧ್ರುವ ಸರ್ಜಾ ಡೆಡಿಕೇಷನ್ ಹೇಗಿರುತ್ತೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಅಜಾನುಬಾಹು ಧ್ರುವ ಇದೀಗ 18 ಕೆಜಿ ತೂಕ ಇಳಿಸಿಕೊಂಡು ಸಿಕ್ಕಾಪಟ್ಟೆ ಸ್ಲಿಮ್ ಆಗಿ ಕಾಣುತ್ತಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಡೆಡಿಕೇಷನ್ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಆರೀಗ್ಯ ಜೋಪಾನ ಎಂದು ನೆಚ್ಚಿನ ನಟನ ಬಗ್ಗೆ ಕಾಳಜಿಯನ್ನು ತೋರ್ಪಡಿಸಿದ್ದಾರೆ.
Shah Rukh Khan : ಜಗತ್ತಿನ ನಾಲ್ಕನೇ ಶ್ರೀಮಂತ ನಟ ಶಾರುಖ್ ಖಾನ್ ಒಟ್ಟು ಆಸ್ತಿ ಎಷ್ಟು ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.