Yash : ನಿಮಗೆ ಉಳಿದಿರುವ ಆಯ್ಕೆ ‘KGF 3’ ಒಂದೇ! ಕೊಂಕು ನುಡಿದವರಿಗೆ ಯಶ್ ಖಡಕ್ ಉತ್ತರ

Yash : ಯಶ್‌ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಅನೇಕರು ಅನೇಕ ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಕೆಲವರು "ನಿಮಗೆ ಉಳಿದಿರುವುದು ಕೆಜಿಎಫ್​ 3 ಮಾತ್ರ. ಅದನ್ನೇ ಮಾಡಬೇಕು" ಎಂದು ಕೊಂಕು ನುಡಿಗಳನ್ನಾಡಿದ್ದಾರೆ. ಈ ರೀತಿ ಕಾಲೆಳೆದವರಿಗೆ ಯಶ್‌ ಖಡಕ್‌ ಆಗಿ ಉತ್ತರ ನೀಡಿದ್ದಾರೆ.  

Written by - Chetana Devarmani | Last Updated : Jan 12, 2023, 01:24 PM IST
  • ಯಶ್‌ ಮುಂದಿನ ಸಿನಿಮಾ ಯಾವುದು?
  • ನಿಮಗೆ ಉಳಿದಿರುವ ಆಯ್ಕೆ ‘KGF 3’ ಒಂದೇ!
  • ಕೊಂಕು ನುಡಿದವರಿಗೆ ಯಶ್ ಖಡಕ್ ಉತ್ತರ
Yash : ನಿಮಗೆ ಉಳಿದಿರುವ ಆಯ್ಕೆ ‘KGF 3’ ಒಂದೇ! ಕೊಂಕು ನುಡಿದವರಿಗೆ ಯಶ್ ಖಡಕ್ ಉತ್ತರ title=
ಯಶ್‌

Rocking Star Yash : ನಟ ಯಶ್‌ ಸಿನಿ ಕರಿಯರ್‌ನಲ್ಲಿ ಚಿನ್ನದ ಅಕ್ಷರದಲ್ಲಿ ಬರೆದಿಡುವಂತಹ ಅಧ್ಯಾಯ ಅಂದರೆ ಅದು ಕೆಜಿಎಫ್‌. ಪ್ರಶಾಮತ್‌ ನೀಲ್‌ ನಿರ್ದೇಶನದ ಈ ಸಿನಿಮಾಗಳು ಯಶ್‌ ಮಾತ್ರವಲ್ಲ ಕನ್ನಡ ಚಿತ್ರಂಗದ ಖ್ಯಾತಿಯನ್ನು ಜಗದಗಲಕ್ಕೂ ಹರಡಿದವು. ಅದರಲ್ಲೂ ಕೆಜಿಎಫ್‌ 2 ಅಂತೂ ಅಪಾರ ಅಭಿಮಾನಿಗಳ ಜತೆಗೆ ಅನೇಕ ದಾಖಲೆಗಳನ್ನು ಉಡೀಸ್‌ ಮಾಡಿ ಗೆದ್ದು ಬೀಗಿತು. ಆ ಬಳಿಕ ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆದರು. ಬಾಲಿವುಡ್‌ ಮಂದಿಗೆ ಪ್ರೀತಿಪಾತ್ರರಾದರು. ಹೀಗಿರುವಾಗ ಯಶ್‌ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಅನೇಕರು ಅನೇಕ ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಕೆಲವರು "ನಿಮಗೆ ಉಳಿದಿರುವುದು ಕೆಜಿಎಫ್​ 3 ಮಾತ್ರ. ಅದನ್ನೇ ಮಾಡಬೇಕು" ಎಂದು ಕೊಂಕು ನುಡಿಗಳನ್ನಾಡಿದ್ದಾರೆ. ಈ ರೀತಿ ಕಾಲೆಳೆದವರಿಗೆ ಯಶ್‌ ಖಡಕ್‌ ಆಗಿ ಉತ್ತರ ನೀಡಿದ್ದಾರೆ.  

ಇದನ್ನೂ ಓದಿ Shah Rukh Khan : ಜಗತ್ತಿನ ನಾಲ್ಕನೇ ಶ್ರೀಮಂತ ನಟ ಶಾರುಖ್ ಖಾನ್ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಸಂದರ್ಶನವೊಂದರಲ್ಲಿ ಮಾತನಾಡಿದ ರಾಕಿಂಗ್‌ ಸ್ಟಾರ್‌ ಯಶ್​, "ಹೊಸ ಸಿನಿಮಾ ಘೋಷಿಸಲು ಇಷ್ಟೊಂದು ಸಮಯ ಏಕೆ ತೆಗೆದುಕೊಳ್ಳುತ್ತಿದ್ದೀರಿ? ನೀವು ಮುಂದೇನು ಮಾಡುತ್ತೀರಿ? ಎಂದು ಜನರು ಈಗಲೂ ಕೇಳುತ್ತಾರೆ. ನಿಮಗೆ ಉಳಿದಿರೋದು ಕೆಜಿಎಫ್ 3 ಮಾತ್ರ ಎಂದು ಅನೇಕರು ಹೇಳುತ್ತಾರೆ. ಗಡ್ಡ ತೆಗೆದರೆ ಜನ ಹೇಗೆ ಒಪ್ಪಿಕೊಳ್ತಾರೆ? ಹೀಗೆ ಅನೇಕ ಬಗೆಯ ಮಾತುಗಳು, ಪ್ರಶ್ನೆಗಳು ನನ್ನ ಆಪ್ತ ವಲಯದಿಂದಲೇ ಬಂದಿವೆ" ಎಂದಿದ್ದಾರೆ. 

"ಆದರೆ, ಅದು ನಿಮಗೆ ಹಾಗಿರಬಹುದು. ಗೆದ್ದಿರುವುದನ್ನು ನಿಭಾಯಿಸುವುದಕ್ಕಿಂತ ಹೊಸದನ್ನು ಗೆಲ್ಲುವ ಕೆಲಸವೇ ನನಗೆ ಬಹಳ ಇಷ್ಟ. ಎಗ್ಸೈಟ್​ಮೆಂಟ್ ಕೊಡುವ ಕೆಲಸವನ್ನು ಮಾಡಲು ನಾನು ಯಾವಾಗಲೂ ಇಷ್ಟ ಪಡ್ತೀನಿ. ಹೋರಾಡುತ್ತ ಮೃತಪಟ್ಟರೆ ಅದಕ್ಕೆ ನನಗೆ ಬೇಸರ ಆಗಲ್ಲ. ಹೋರಾಡುತ್ತಿದ್ದೇನಲ್ಲ ಎಂಬುದು ಮಾತ್ರ ನನಗೆ ಮುಖ್ಯ" ಎಂದು ಖಡಕ್‌ ಆಗಿ ಉತ್ತರ ನೀಡಿದ್ದಾರೆ. 

ಇದನ್ನೂ ಓದಿ : Prashanth Neel: ಪ್ರಶಾಂತ್ ನೀಲ್ ಟ್ವಿಟರ್ ಖಾತೆ ಕ್ಲೋಸ್! ಇದಕ್ಕೆ ಕಾರಣವಾಯ್ತಾ ಉರ್ದು ಟ್ವೀಟ್​?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News