ಬೆಂಗಳೂರು: ತಮ್ಮ ಸರಳತೆ ಹಾಗೂ ಕಾಮಿಡಿ ಮೂಲಕ ಮನಗೆದಿರುವ ನಟ ಕೋಮಲ್ ಕುಮಾರ್ ಹಲವು ವರ್ಷಗಳ ಸಿನಿಮಾದಿಂದ ದೂರ ಉಳಿದಿದ್ದರು. ಇದೀಗ ಉಂಡೆನಾಮ ಸಿನಿಮಾ ಬಳಿಕ ನಮೋ ಭೂತಾತ್ಮ 2 ಚಿತ್ರದಿಂದ ಕನ್ನಡಿಗರನ್ನು ರಂಜಿಸಲು ಮುಂದಾಗಿದ್ದಾರೆ


COMMERCIAL BREAK
SCROLL TO CONTINUE READING

ಇವರ ನಟನೆಯ ʼನಮೋ ಭೂತಾತ್ಮ 2 ಚಿತ್ರʼ ಬಿಡುಗಡೆಗೆ ಸಜ್ಜಾಗಿದೆ.  ಸದ್ಯ ಈ ಚಿತ್ರದ ಟೀಸರ್‌ ನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 


ಇದನ್ನೂ ಓದಿ: ಡಾರ್ಲಿಂಗ್​ ಕೃಷ್ಣ ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಇದೇ ತಿಂಗಳಿನಲ್ಲಿ ತೆರೆಗೆ ಅದ್ದೂರಿ ಎಂಟ್ರಿ..!


ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಧ್ರುವ ಸರ್ಜಾ,ನಾನು ಮೊದಲಿನಿಂದಲೂ ಕೋಮಲ್ ಅವರ ಅಭಿಮಾನಿ. ಅವರ ಅಭಿನಯದ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ಈ ಚಿತ್ರದ ನಿರ್ದೇಶಕ ನಮಗೂ ಆತ್ಮೀಯ ಹೀಗಾಗಿ  ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದಾರೆ. "ನಮೋ ಭೂತಾತ್ಮ 2" ಸೂಪರ್ ಹಿಟ್ ಆಗಲಿದೆ ಎಂಬ ಭರವಸೆ ಇದೆ ಎಂದಿದ್ದಾರೆ.


ಇದನ್ನೂ ಓದಿ: Golden Star Ganesh: ಹುಟ್ಟು ಹಬ್ಬ ದಿನದಂದು ʼಪೊರಕೆ,ಬಕೆಟ್‌ʼ ಹಿಡಿದು ಹೊರಟಿರುವ ಗೋಲ್ಡನ್​ ಸ್ಟಾರ್ ಗಣೇಶ್....!


ಇನ್ನು ಈ ಚಿತ್ರದ ಬಗ್ಗೆ ಮಾತಾನಾಡಿರುವ ನಟ ಕೋಮಲ್‌, ಮುರಳಿ ಮಾಸ್ಟರ್ ನಿರ್ದೇಶನ ಮಾಡಿ ನಾನೇ ನಿರ್ಮಿಸಿ, ನಟಿಸಿದ್ದ "ನಮೋ ಭೂತಾತ್ಮ" ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ ಹತ್ತು ವರ್ಷಗಳು ಕಳೆದರೂ ಜನ ಇಂದಿಗೂ ನೆನಪಿಟ್ಟುಕೊಂಡಿದ್ದಾರೆ.


ಇ ಬಾರಿ ನಂಬಿಕೆ ಇದೆ ಈ ಸಿನಿಮಾದ ಎರಡನೇ ಭಾಗವು ಚಿತ್ರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿದ್ದರಿಂದ ಜನ ಸಿನಿಮಾವನ್ನು ಮೆಚ್ಚುತ್ತಾರೆಂಬ ನಂಬಿಕೆ ಇದೆ ಎಂದಿದ್ದಾರೆ. ಈ ವೇಳೆ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ ಅವರಿಗೆ ಧನ್ಯವಾದ ತಿಳಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.