R Chandru: ʻಕಬ್ಜʼ ನಂತರ ಮತ್ತೆ ಸೆಂಚುರಿ ಸ್ಟಾರ್ಗೆ ಸ್ಟಾರ್ ಡೈರೆಕ್ಟರ್ನಿಂದ ಆಕ್ಷನ್ ಕಟ್!
R Chandru 6th Movie: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಆರ್.ಚಂದ್ರು ತಮ್ಮ ಆರನೇ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಡೈರೆಕ್ಟರ್ ಕರುನಾಡ ಚಕ್ರವತಿ ಶಿವರಾಜ್‌ಕುಮಾರ್ ಜೊತೆಗೆ ಮೂರನೇ ಬಾರಿಗೆ ಚಿತ್ರವನ್ನು ಮಾಡುತ್ತಿದ್ದಾರೆ. ಹಾಗಿದ್ರೆ ಇದು ಯಾವ ಸಿನಿಮಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Director R Chandru and Shivarajkumar New Movie: ಸ್ಯಾಂಡಲ್‌ವುಡ್‌ನ ಹೆಸರಾಂತ ಡೈರೆಕ್ಟರ್ ಆರ್.ಚಂದ್ರು ಹಲವು ತಿಂಗಳ ಹಿಂದೆ ಆರ್.ಸಿ. ಸ್ಟುಡಿಯೋಸ್ ಅನ್ನೋ ಒಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ, ದೊಡ್ಡ ಮಟ್ಟದಲ್ಲೇ ಲಾಂಚ್ ಮಾಡಿದ್ದರು. ಈ ನಿರ್ದೇಶಕ ಕನ್ನಡದ ಟಾಪ್ ನಟನರ ಜೊತೆಗೆ ಚಿತ್ರಗಳನ್ನು ಮಾಡಲಿ ಪ್ಲಾನ್ ಮಾಡಿದ್ದು, ಆ ಸಂಸ್ಥೆಯಿಂದ ಐದು ಸಿನಿಮಾಗಳನ್ನು ಕೂಡ ಘೋಷಣೆ ಮಾಡಿದ್ದರು.
ಇದೀಗ ನಿರ್ದೇಶಕ ಆರ್. ಚಂದ್ರು ಅದೇ ಸಂಸ್ಥೆಯಿಂದ ತಮ್ಮ ಆರನೇ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. ಈ ಸ್ಟಾರ್ ಡೈರೆಕ್ಟರ್ ತಮ್ಮ ಆರನೇ ಸಿನಿಮಾವನ್ನು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಜೊತೆಗೆ ಮಾಡಲಿದ್ದಾರೆ. ಈ ವಿಷಯವನ್ನು ನಿರ್ದೇಶಕ ಆರ್. ಚಂದ್ರು ಪೋಸ್ಟರ್ ರಿಲೀಸ್ ಮಾಡುವುದರ ಮುಖಾಂತರ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರವನ್ನು ಇದೇ ಏಪ್ರಿಲ್ 1 ರಂದು ರಿವೀಲ್ ಮಾಡಿದ್ದು, ಅಂದು ಮೈಲಾರಿ ಚಿತ್ರಕ್ಕೆ 14 ವರ್ಷ ಪೂರ್ಣಗೊಳಿಸಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಸೆಟ್ ಫೋಟೋ ಲೀಕ್ !
ನಟ ಶಿವರಾಜ್‌ಕುಮಾರ್ ಹಾಗೂ ಡೈರೆಕ್ಟರ್ ಆರ್. ಚಂದ್ರು ಕಾಂಬಿನೇಷನ್‌ನಲ್ಲಿ ಈ ಹಿಂದೆ ತೆರೆಕಂಡ ಮೈಲಾರಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೇ ನಿರ್ದೇಶಕ ಆಕ್ಷನ್ ಕಟ್ ಹೇಳಿರುವ ಕಬ್ಜ ಚಿತ್ರ ಕಳೆದ ವರ್ಷ ತೆರೆಕಂಡಿದ್ದು, ಅದರಲ್ಲಿ ಶಿವಣ್ಣ ವಿಶೇಷ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಹ್ಯಾಟ್ರಿಕ್ ಹೀರೋಗೆ ಈ ಡೈರೆಕ್ಟರ್ ಕಥೆ ಹೇಳಿದ್ದು, ಅದಕ್ಕೆ ಶಿವರಾಜ್‌ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಸದ್ಯ ಡೈರೆಕ್ಟರ್ ಆರ್.ಚಂದ್ರು ಆರನೇ ಸಿನಿಮಾ ಘೋಷಣೆ ಮಾಡಿರುವ ಖುಷಿಯಲ್ಲಿದ್ದಾರೆ. ಈ ನಿರ್ದೇಶಕ ಚಿತ್ರದ ಬಗ್ಗೆ ಎಲ್ಲಾ ಪ್ಲಾನ್ ಮಾಡಿದ್ದು, ಬರುವ ಲೋಕಸಭಾ ಚುನಾವಣೆ ಮುಗಿದ ಬಳಿಕ ಸಿನಿಮಾ ಸೆಟ್ಟಿಗೇರಲಿದೆ ಎಂದು ತಿಳಿಸಿದ್ದಾರೆ. ಆದರೆ ಈ ಚಿತ್ರದ ಶೀರ್ಷಿಕೆ ಏನು? ಇದರಲ್ಲಿ ಯಾರೆಲ್ಲಾ ಬಣ ಹಚ್ಚಲಿದ್ದಾರೆ? ಎಂಬ ಮಾಹಿತಿ ಸದ್ಯಕ್ಕೆ ಹೊರ ಹಾಕಿಲ್ಲ. ನಿರ್ದೇಶಕ ಚಂದ್ರು ಈ ಸಿನಿಮಾದ ಮೂಲಕ ಮತ್ತೊಂದು ಹಿಟ್ ಕೊಡುವ ಕನಸು ಇಟ್ಟುಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.