ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಸೆಟ್ ಫೋಟೋ ಲೀಕ್ !

Ramayana Set Photo Leak: ರಾಮಾಯಣ ಶೂಟಿಂಗ್ ಪ್ರಾರಂಭವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. 

Written by - Chetana Devarmani | Last Updated : Apr 4, 2024, 11:59 AM IST
  • ರಾಮಾಯಣ ಶೂಟಿಂಗ್ ಪ್ರಾರಂಭ
  • ರಾಮಾಯಣ ಸಿನಿಮಾ ಸೆಟ್ ಫೋಟೋ
  • ರಾಮಾಯಣ ಸಿನಿಮಾ ಅಪ್‌ಡೇಟ್ಸ್‌
ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಸೆಟ್ ಫೋಟೋ ಲೀಕ್ !  title=

Ramayana Shooting Set: ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಶೂಟಿಂಗ್ ಆರಂಭವಾಗಿದೆ. ಈ ಬೆನ್ನಲ್ಲೇ ರಾಮಾಯಣ ಸಿನಿಮಾ ಶೂಟಿಂಗ್‌ ಸೆಟ್‌ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಚಿತ್ರ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಕಳೆದ ಹಲವು ತಿಂಗಳುಗಳಿಂದ ಮುಖ್ಯಾಂಶಗಳಲ್ಲಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಚಿತ್ರದ ಪ್ರತಿಯೊಂದು ವಿವರವನ್ನು ತಿಳಿಯಲು ಜನರು ಕುತೂಹಲರಾಗಿದ್ದಾರೆ. 

ವರದಿಯ ಪ್ರಕಾರ, ರಾಮಾಯಣ ಶೂಟಿಂಗ್ ಪ್ರಾರಂಭವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋವೊಂದು ವೈರಲ್ ಆಗುತ್ತಿದ್ದು, ಇದು ಸೆಟ್‌ನ ಫೋಟೋ ಎಂದು ಹೇಳಲಾಗುತ್ತಿದೆ. ಈ ಫೋಟೋವನ್ನು ಆಕೃತಿ ಸಿಂಗ್ ಎಂಬ ನಟಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ವಿಷ್ಣುವರ್ಧನ್‌ ಜೊತೆ ನಟಿಸಿದ್ದ ಈ ನಟಿ ನೆನಪಿದ್ದಾರಾ? ಮದುವೆಯಾಗಿ ಗಂಡನ ಕಳೆದುಕೊಂಡ ಸ್ಟಾರ್‌ ಹೀರೋಯಿನ್ ಈಗ ಹೇಗಾಗಿದ್ದಾರೆ ನೋಡಿ! 

ರಾಮಾಯಣ ಚಿತ್ರದ ಶೂಟಿಂಗ್ ಏಪ್ರಿಲ್ 2 ರಿಂದ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ಪ್ರಮುಖ ತಾರೆಯರು ಇದರಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗಿದೆ. ನಟಿ ಆಕೃತಿ ಸಿಂಗ್ ಅವರು ಇನ್ಸ್ಟಾ ಸ್ಟೋರಿಯಲ್ಲಿ ಫೋಟೋ ಮತ್ತು ವೀಡಿಯೊ ಹಂಚಿಕೊಂಡಿದ್ದಾರೆ. ಚಿತ್ರದ ಸೆಟ್‌ನ ಹೊರಗಿನ ಎರಡು ಫೋಟೋಗಳನ್ನು ಹಂಚಿಕೊಳ್ಳುವಾಗ, ಅವರು 'ರಾಮಾಯಣ ದಿನ 1' ಎಂದು ಬರೆದಿದ್ದಾರೆ.

 

Ramayana part 1- started the shoot yesterday
byu/Glad-Ad5911 inBollyBlindsNGossip

 

ಏಪ್ರಿಲ್ 2 ರಂದು ಮುಂಬೈನಲ್ಲಿ ಸಿನಿಮಾ ಸೆಟ್‌ ಏರಿದೆ. ಫಿಲ್ಮ್ ಸಿಟಿಯಲ್ಲಿ ಸೆಟ್ ನಿರ್ಮಿಸಲಾಗಿದ್ದು ಇಲ್ಲಿ ಈ ಚಿತ್ರದ ಪಯಣ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಮೊದಲ ಶೆಡ್ಯೂಲ್ ಭಗವಾನ್ ರಾಮನ ಬಾಲ್ಯದ ಭಾಗಗಳ ಚಿತ್ರೀಕರಣದೊಂದಿಗೆ ಪ್ರಾರಂಭವಾಗಿದೆ. ಅಲ್ಲಿ ಗುರು ವಶಿಷ್ಠರು ರಾಮ ಮತ್ತು ಆತನ ಸಹೋದರರಿಗೆ ಬೋಧನೆ ಮಾಡುತ್ತಾರೆ. 

ಇದನ್ನೂ ಓದಿ: ತನಗಿಂತ 10 ವರ್ಷ ಚಿಕ್ಕವನ ಜೊತೆ ಕೃತಿ ಸನೋನ್ ಡೇಟಿಂಗ್, ವಿಶ್ವದ ಈ ಶ್ರೀಮಂತ ಉದ್ಯಮಿಯ ಪುತ್ರ.. ಯಾರು ಗೊತ್ತಾ? 

ಸೌತ್ ಸೂಪರ್ ಸ್ಟಾರ್ ಯಶ್ ಲಂಕಾಪತಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಮತ್ತು ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಸನ್ನಿ ಡಿಯೋಲ್ ಹನುಮಾನ್ ಪಾತ್ರವನ್ನು ನಿರ್ವಹಿಸಬಹುದು ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News