Ram Gopal Verma: ಯಾವುದೇ ಕ್ಷೇತ್ರದಲ್ಲಿಯಾದರೂ ಹೆಚ್ಚು ಸಾಧನೆ ಮಾಡುವವರನ್ನು ಯಶಸ್ವಿ ವ್ಯಕ್ರಿ ಎಂದು ಕರೆಯಲಾಗುತ್ತದೆ. ಅದರಲ್ಲೂ ಯಶಸ್ಸಿನ ಪ್ರಮಾಣ ಕಡಿಮೆ ಇರುವ ಸಿನಿಮಾ ಇಂಡಸ್ಟ್ರಿಯಲ್ಲಿ ಯಶಸ್ವಿ ನಟ ಅಥವಾ ನಿರ್ದೇಶಕರಾಗಿ ಹೆಸರು ಮಾಡುವುದು ತುಂಬಾ ಕಷ್ಟ. ಅಂತಹ ವೃತ್ತಿಜೀವನವು ಅದರ ಫಿಲ್ಮೋಗ್ರಫಿಯಲ್ಲಿ 80% ಫೇಲ್‌ ಮತ್ತು ಉಳಿದ ಭಾಗವಷ್ಟೇ ಹಿಟ್‌ಗಳನ್ನು ಹೊಂದಿದ್ದರೆ, ಅದನ್ನು ಯಶಸ್ವಿ ವೃತ್ತಿಜೀವನ ಎಂದು ಕರೆಯಬಹುದೇ? ಖಂಡಿತವಾಗಿಯೂ ಅದನ್ನು ವೈಫಲ್ಯ ಎಂದು ಕರೆಯಲಾಗುತ್ತದೆ. ಹಾಗಾದರೆ ಯಾರು ಆ ದೊಡ್ಡ ಪ್ಲಾಪ್‌ ಡೈರೆಕ್ಟರ್‌ ಅಂತೀರಾ ಇಲ್ಲಿದೆ.. ಉತ್ತರ..


COMMERCIAL BREAK
SCROLL TO CONTINUE READING

ಅವರು ಬೇರೆ ಯಾರು ಅಲ್ಲ.. ಒಂದು ಕಾಲದಲ್ಲಿ ಟಾಪ್ ಡೈರೆಕ್ಟರ್ ಆಗಿದ್ದ RGV.. ಈಗ ಅವರು ಸಾಲು ಸಾಲು ಫ್ಲಾಪ್ ಗಳಿಂದ ಟ್ರ್ಯಾಕ್ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಪೋರ್ನ್ ಸ್ಟಾರ್ ಗಳ ಜೊತೆ ಅಡಲ್ಟ್ ಕಂಟೆಂಟ್ ಮಾಡುವುದಕ್ಕೇ ಮಾತ್ರ ಸೀಮಿತವಾಗಿದ್ದಾರೆ.


ಇದನ್ನೂ ಓದಿ-VK29 ಥೀಮ್ ಪೋಸ್ಟರ್ ರಿಲೀಸ್!.. ತಂದೆಯೊಂದಿಗೆ ಇಂಡಸ್ಟ್ರಿಗೆ ಪದಾರ್ಪಣೆ ಮಾಡಲಿರುವ ದುನಿಯಾ ವಿಜಯ್‌ ಪುತ್ರಿ!


ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಫ್ಲಾಪ್ ಕೊಟ್ಟ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಈ ಚಿತ್ರನಿರ್ಮಾಪಕ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 34 ಚಿತ್ರಗಳನ್ನು ಮಾಡಿದ್ದಾರೆ. ಅದರಲ್ಲಿ ಐದು ಚಿತ್ರಗಳು ಮಾತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿದ್ದವು... 


ಇದನ್ನೂ ಓದಿ-BBK 10: ತನಿಷಾ ಬೆನ್ನಲ್ಲೇ ಬಿಗ್ ಬಾಸ್ ಮನೆಯಿಂದ ಎಲಿಮಿನೆಟ್ ಆಗುತ್ತಿರುವ ಮತ್ತೊಬ್ಬ ಸ್ಪರ್ಧಿ ಇವರೇ! ಭಗ್ನವಾಯಿತು ಫೈನಲ್ ತಲುಪುವ ಕನಸು


ಕಡಿಮೆಯಾಗದ ಸ್ಟಾರ್ಡಮ್: 
ರಾಮ್ ಗೋಪಾಲ್ ವರ್ಮಾ ಅವರ ಟೇಕ್ ಈಗಾಗಲೇ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಆರ್‌ಜಿವಿ ಅವರ ಯಾವುದೇ ಸಿನಿಮಾವನ್ನು ಮಿಸ್‌ ಮಾಡದೇ ನೋಡುವ ಹಾರ್ಡ್ ಕೋರ್ ಅಭಿಮಾನಿಗಳಿದ್ದಾರೆ. ಅವರ ಚಿತ್ರಗಳಾದ ಶಿವ, ಸತ್ಯ, ರಂಗೀಲಾ ಮತ್ತು ಇತರ ಚಿತ್ರಗಳು ಭಾರತೀಯ ಚಿತ್ರರಂಗ ಮತ್ತು ಚಲನಚಿತ್ರ ನಿರ್ಮಾಪಕರ ಮೇಲೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಈ ಕಾರಣಕ್ಕಾಗಿಯೇ RGV ಭಾರತೀಯ ಚಲನಚಿತ್ರೋದ್ಯಮದಲ್ಲಿ ಶ್ರೇಷ್ಠ ಮತ್ತು ಅತ್ಯಂತ ಪ್ರಭಾವಶಾಲಿ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿದ್ದಾರೆ


ಸಿನಿಮಾಗಳ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಜಿವಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಯೂಟ್ಯೂಬ್ ವಿಡಿಯೋಗಳು ಕೋಟಿಗಟ್ಟಲೆ ವೀಕ್ಷಣೆ ಪಡೆಯುತ್ತವೆ. ಅಭಿಮಾನಿಗಳು ವರ್ಮಾ ಅವರನ್ನು ಹೆಚ್ಚು ಪ್ರಬುದ್ಧ ವ್ಯಕ್ತಿ ಎಂದು ಗೌರವಿಸುತ್ತಾರೆ. ಅವರ ವಿಚಾರಧಾರೆಯಿಂದ ಪ್ರೇರಿತರಾದವರೂ ಇದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.