VK29 ಥೀಮ್ ಪೋಸ್ಟರ್ ರಿಲೀಸ್!.. ತಂದೆಯೊಂದಿಗೆ ಇಂಡಸ್ಟ್ರಿಗೆ ಪದಾರ್ಪಣೆ ಮಾಡಲಿರುವ ದುನಿಯಾ ವಿಜಯ್‌ ಪುತ್ರಿ!

Duniya Vijay Daughter Monika: ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ ಸದ್ಯ ಭೀಮ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಇದೇ ವೇಳೆ ಅವರ ಪುತ್ರಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡುತ್ತಿದ್ದಾರೆ..   

Written by - Savita M B | Last Updated : Jan 19, 2024, 03:28 PM IST
  • ದುನಿಯಾ ವಿಜಯ್‌ ಸದ್ಯ ಭೀಮ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದ್ದಾರೆ..
  • ಈ ಚಿತ್ರದ ಅಪ್‌ಡೇಟ್‌ಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ
  • ಇದೇ ವೇಳೆ ಸ್ಯಾಂಡಲ್‌ವುಡ್‌ ಸಲಗ ತಮ್ಮ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ನೀಡಿದ್ದಾರೆ..
VK29 ಥೀಮ್ ಪೋಸ್ಟರ್ ರಿಲೀಸ್!.. ತಂದೆಯೊಂದಿಗೆ ಇಂಡಸ್ಟ್ರಿಗೆ ಪದಾರ್ಪಣೆ ಮಾಡಲಿರುವ ದುನಿಯಾ ವಿಜಯ್‌ ಪುತ್ರಿ!  title=

Monika Vijay Entry to Sandalwood: ಕನ್ನಡದ ಖ್ಯಾತ ನಟ ದುನಿಯಾ ವಿಜಯ್‌ ಸದ್ಯ ಭೀಮ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದ್ದಾರೆ.. ಈ ಚಿತ್ರದ ಅಪ್‌ಡೇಟ್‌ಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.. ಇದೇ ವೇಳೆ ಸ್ಯಾಂಡಲ್‌ವುಡ್‌ ಸಲಗ ತಮ್ಮ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ನೀಡಿದ್ದಾರೆ..

ಇತ್ತೀಚಿಗಷ್ಟೇ ದುನಿಯಾ ವಿಜಯ್‌ ಇಬ್ಬರೂ ಪುತ್ರಿಯರು ಸಿನಿರಂಗ ಪ್ರವೇಶಿಸಲಿದ್ದಾರೆ ಎನ್ನಲಾಗಿತ್ತು.. ಆದರೆ ದೊಡ್ಡ ಮಗಳು ಮೋನಿಕಾ ಮಾತ್ರ ಸಿನಿಮಾರಂಗಕ್ಕೆ ಬರೋದಾಗಿ ಅನೌನ್ಸ್‌ ಮಾಡಿದ್ದರು.. ಸದ್ಯ ಮೋನಿಕಾ ವಿಜಯ್ ಚೊಚ್ಚಲ ಸಿನಿಮಾದ ಬಿಗ್‌ಅಪ್‌ಡೇಟ್‌ವೊಂದು ಹೊರಬಿದ್ದಿದೆ.. ಮತ್ತೊಂದು ವಿಶೇಷತೆ ಎಂದರೇ ವಿಜಯ್‌ ಸಹ ತಮ್ಮ ಪುತ್ರಿಯ ಮೊದಲ ಸಿನಿಮಾದಲ್ಲಿ ನಟಿಸಲಿದ್ದಾರೆ.. 

ಇದನ್ನೂ ಓದಿ-BBK 10: ತನಿಷಾ ಬೆನ್ನಲ್ಲೇ ಬಿಗ್ ಬಾಸ್ ಮನೆಯಿಂದ ಎಲಿಮಿನೆಟ್ ಆಗುತ್ತಿರುವ ಮತ್ತೊಬ್ಬ ಸ್ಪರ್ಧಿ ಇವರೇ! ಭಗ್ನವಾಯಿತು ಫೈನಲ್ ತಲುಪುವ ಕನಸು

ಹೌದು ಮಗಳು ಮೋನಿಕಾ ನಟಿಸುತ್ತಿರುವ ಚೊಚ್ಚಲ ಚಿತ್ರದಲ್ಲಿ ದುನಿಯಾ ವಿಜಯ್ ತಂದೆಯ ಪಾತ್ರವನ್ನೇ ನಿರ್ವಹಿಸಲಿದ್ದಾರೆ ಎನ್ನಾಗಿದೆ.. ಸದ್ಯ ಈ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಆಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ..

ಇದನ್ನೂ ಓದಿ-ಬ್ಯಾಡ್ಮಿಂಟನ್ ಆಟಗಾರನೊಂದಿಗೆ 10 ವರ್ಷದಿಂದ ಲವ್..‌ ಆದರೆ ಇನ್ನೂ ಮದುವೆಯಾಗದ ಖ್ಯಾತ ನಟಿ ಈಕೆ!

ಸಂಬಂಧಗಳ ಕುರಿತು ಸಾರುವ ಸಿನಿಮಾದಲ್ಲಿ ದುನಿಯಾ ವಿಜಯ್ ಟನಿಸೋದು ಪಕ್ಕಾ ಆಗಿದೆ.. ಅಪ್ಪ ಹಾಗೂ ಮಗಳ ಇಬ್ಬರ ಪಾತ್ರಗಳೂ ಹೆಚ್ಚು ವಿಭಿನ್ನವಾಗಿದ್ದು.. ತೆರೆಯ ಮೇಲೂ ಸಹ ತಂದೆ ಮಗಳಾಗಿ ನಟಿಸುತ್ತಿದ್ದಾರೆ.. ಇವರಿಬ್ಬರ ಕಾಂಬಿನೇಷನ್‌ನ ಸಿನಿಮಾ ಬೆಳ್ಳಿ ತೆರೆಯ ಮೇಲೆ ಹೇಗೆ ವರ್ಕ್‌ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.. 

ಇನ್ನು ಈ ಚಿತ್ರವನ್ನು ಕಾಟೇರ ಚಿತ್ರದ ರೈಟರ್ ಜಡೇಶ್ ಕುಮಾರ್ ಅವರು ನಿರ್ದೇಶಿಸುತ್ತಿದ್ದಾರೆ.. ಅಪ್ಪನ ಹಾದಿಯಲ್ಲೇ ನಡೆಯುತ್ತಿರುವ ಮಗಳಿಗೆ ಜನ ಹೇಗ ಬೆಂಬಲ ನೀಡುತ್ತಾರೆ.. ಚಂದನವನದಲ್ಲಿ ತಮ್ಮ ಛಾಪು ಮೂಡಿಸುತ್ತಾರಾ ಮೋನಿಕಾ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗೋದು ಸಿನಿಮಾ ಬಿಡುಗಡೆ ಆದಮೇಲೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News