Jailer Movie title Controversy: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಇತ್ತೀಚಿನ ಚಿತ್ರ ಜೈಲರ್ ವಿವಾದಕ್ಕೆ ಸಿಲುಕಿದೆ. ನಿರ್ದೇಶಕರೊಬ್ಬರು ಈ ಚಿತ್ರದ ಶೀರ್ಷಿಕೆಯನ್ನು ಬದಲಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮಲಯಾಳಂ ನಿರ್ದೇಶಕ ಸಕ್ಕೀರ್ ಮದತಿಲ್ ಅವರು ಸನ್ ಪಿಕ್ಚರ್ ನಿರ್ಮಾಣ ಸಂಸ್ಥೆಯನ್ನು ತಕ್ಷಣವೇ ಶೀರ್ಷಿಕೆ ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಸದ್ಯದಲ್ಲೇ ನಡೆಯಲಿದೆ ಎಂದು ವರದಿಯಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಸೂಪರ್ ಸ್ಟಾರ್ ಸಿನಿಮಾ ಕಾನೂನು ಸಂಕಷ್ಟದಲ್ಲಿ ಸಿಲುಕಿರುವುದು ಅಭಿಮಾನಿಗಳಲ್ಲಿ ಕೊಂಚ ಆತಂಕ ಮೂಡಿಸಿದೆ. ಜೈಲರ್ ಚಿತ್ರದಲ್ಲಿ ರಜನಿ ಎದುರು ತಮನ್ನಾ ನಟಿಸಿದ್ದಾರೆ. ಮೋಹನ್ ಲಾಲ್, ಶಿವರಾಜ್ ಕುಮಾರ್, ರಮ್ಯಾ ಕೃಷ್ಣ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಆಗಸ್ಟ್ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:Bhagya Lakshmi: 'ಭಾಗ್ಯಲಕ್ಷ್ಮಿ' ಸೀರಿಯಲ್ ನಟನ ಕಾರು ಅಪಘಾತ


ಮಲಯಾಳಂ ನಿರ್ದೇಶಕ ಸಕ್ಕಿರ್ ಮದತಿಲ್ ಅವರು ಆಗಸ್ಟ್ 2021 ರಲ್ಲಿ ಕೇರಳ ಫಿಲ್ಮ್ ಚೇಂಬರ್‌ನಲ್ಲಿ 'ಜೈಲರ್' ಶೀರ್ಷಿಕೆಯ ಹಕ್ಕು ಪಡೆದಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಅದೇ ವರ್ಷದ ನವೆಂಬರ್‌ನಿಂದ ಶೂಟಿಂಗ್ ಕೂಡ ಪ್ರಾರಂಭವಾಯಿತು. ಆದರೆ ಕೆಲವು ಹಣಕಾಸಿನ ಸಮಸ್ಯೆಗಳಿಂದಾಗಿ ನಿರ್ಮಾಣ ಕಾರ್ಯ ವಿಳಂಬವಾಯಿತು. ಮೇಲಾಗಿ, ಕಳೆದ ವರ್ಷ ಜುಲೈ 26 ರಂದು ದುಬೈ ಶಾರ್ಜಾದಲ್ಲಿ ನಡೆದ ಸಮಾರಂಭದಲ್ಲಿ ಶೀರ್ಷಿಕೆ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶಕ ಸಕ್ಕೀರ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕಮಲ್ ಹಾಸನ್, ಮುಂಜು ವಾರಿಯರ್ ಅವರಂತಹ ನಟರು ಕೂಡ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದಿದ್ದಾರೆ. 


ರಜಿನಿ ಜೈಲರ್ ಕೂಡ ಕೇರಳದಲ್ಲಿ ಬಿಡುಗಡೆಯಾಗಲಿದೆ. ಆದ್ದರಿಂದ, ನಿರ್ದೇಶಕ ಸಕ್ಕೀರ್ ಸನ್ ಪಿಕ್ಚರ್ಸ್ ಆ ಒಂದು ರಾಜ್ಯದಲ್ಲಿ ತಮ್ಮ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವಂತೆ ಕಂಪನಿಯನ್ನು ಕೇಳಿದರು. ಆದರೆ ಅದಕ್ಕೆ ಅವರು ಒಪ್ಪಲಿಲ್ಲ ಎಂದು ಸಕ್ಕೀರ್ ಹೇಳಿದ್ದಾರೆ. ಎರಡು ಚಿತ್ರಗಳ ಕಥೆ ವಿಭಿನ್ನವಾಗಿದ್ದರೂ ಶೀರ್ಷಿಕೆ ಒಂದೇ ಆದ ಕಾರಣ ಪ್ರೇಕ್ಷಕರು ಗೊಂದಲಕ್ಕೀಡಾಗಿದ್ದು, ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಈ ಬಗ್ಗೆ ಸನ್ ಪಿಕ್ಚರ್ಸ್ ಕಂಪನಿಯೂ ಕೋರ್ಟ್ ಮೆಟ್ಟಿಲೇರಿದೆಯಂತೆ.


ಇದನ್ನೂ ಓದಿ:"ನನಗೆ ನ್ಯಾಯ ಬೇಕು".. ಸುದೀಪ್‌ ವಿರುದ್ಧ ಪ್ರೊಡ್ಯೂಸರ್‌ ಕುಮಾರ್ ಪ್ರೊಟೆಸ್ಟ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.