ಅದು ವಿಧಿಯಾಟ, ವಿಧಿಯ ಬರಹಕ್ಕೆ ಕನ್ನಡದ ಮಿನುಗು ತಾರೆಯೊಂದು ಕನ್ನಡಿಗರನ್ನ ತೊರೆದು ಹೋಗಿದೆ. ಆದರೆ ಆ ತಾರೆ ಈಗಲೂ ಕನ್ನಡಿಗರ ಎದೆಯಲ್ಲಿ ಮಿನುಗುತ್ತಿದ್ದು, ಮಾರ್ಚ್‌ 17ಕ್ಕೆ ಪವರ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಮತ್ತೊಂದು ಸರ್ಪ್ರೈಸ್‌ ಕನ್ನಡಿಗರಿಗೆ ಸಿಗಲಿದೆ. ಅಷ್ಟಕ್ಕೂ ಆ ಸರ್ಪ್ರೈಸ್‌ ಏನು ಅನ್ನೋದನ್ನ ಮುಂದೆ ಓದಿ.


COMMERCIAL BREAK
SCROLL TO CONTINUE READING

ಮಾರ್ಚ್‌ 17ಕ್ಕೆ ಅಪ್ಪು (Appu) ಕೊನೆಯ ಸಿನಿಮಾ 'ಜೇಮ್ಸ್' ಚಿತ್ರ ರಿಲೀಸ್‌ ಆಗಲಿದೆ.ಆ ದಿನವನ್ನು ಹಬ್ಬದಂತೆ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.ಆದರೆ ಈ ಹೊತ್ತಿನಲ್ಲೇ ಮತ್ತೊಂದು ಮಹತ್ವದ ಸುದ್ದಿ ನೀಡಿದ್ದಾರೆ ನಿರ್ದೇಶಕ ಸಂತೋಷ್ ಆನಂದ್‌ರಾಮ್.


ಅಭಿಮಾನಿಗಳ ಕಂಬನಿ


ನಿರ್ದೇಶಕ ಸಂತೋಷ್ ಆನಂದ್‌ರಾಮ್ ಪವರ್‌ ಸ್ಟಾರ್‌ ಪುನೀತ್‌ (Puneeth Rajkumar) ಅವರ ಜೊತೆ 2 ಸಿನಿಮಾಗಳಲ್ಲಿ ಕೆಲಸ ಮಾಡಿದವರು. ಕನ್ನಡದ ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳಾದ ‘ರಾಜಕುಮಾರ’ ಹಾಗೂ ‘ಯುವರತ್ನ’ ಚಿತ್ರಗಳನ್ನ ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಿದ್ದರು. ಇನ್ನೂ ಒಂದು ಸಿನಿಮಾ ಅಪ್ಪು ಅವರಿಗಾಗಿ ನಿರ್ದೇಶಿಸಲು ಸಂತೋಷ್ ಆನಂದ್‌ರಾಮ್ ಪ್ಲ್ಯಾನ್‌ ರೂಪಿಸಿದ್ದರು.ಆದರೆ ವಿಧಿಯಾಟ ಬೇರೆಯೇ ಆಗಿತ್ತು.ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ.ಹೀಗಾಗಿ ಪವರ್‌ ಸ್ಟಾರ್‌ಗೆ ಗೀತೆಯ ಮೂಲಕ ನಮಿಸಲು ಸಂತೋಷ್ ಆನಂದ್‌ರಾಮ್ ಪ್ಲ್ಯಾನ್‌ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.