Pushpa 2 Movie : ಪುಷ್ಪ: ದಿ ರೂಲ್ 2021 ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಚಲನಚಿತ್ರ ಪುಷ್ಪ: ದಿ ರೈಸ್‌ನ ಮುಂದುವರಿದ ಭಾಗವಾಗಿ 2024 ರಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಮುಗಿಸಲು ಮೂರು ವರ್ಷ ಸಮಯ ತೆಗೆದುಕೊಂಡಿದ್ದರೂ ಚಿತ್ರತಂಡ ಪುಷ್ಪಾ ಭಾಗ 1ರಲ್ಲಿ ಮಾಡಿದ ತಪ್ಪನ್ನೇ ಈ ಚಿತ್ರದಲ್ಲೂ ಪುನರಾವರ್ತಿಸುತ್ತಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳೆಲ್ಲ.. ಕಾತುರದಿಂದ ಕಾಯುತ್ತಿರುವ ಚಿತ್ರ ಪುಷ್ಪ 2 ಸಿನಿಮಾ ನೋಡಲು. ಪುಷ್ಪ: ದಿ ರೈಸ್ ಚಿತ್ರದ ಮುಂದುವರಿದ ಭಾಗವಾಗಿ ತಯಾರಾಗುತ್ತಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ಪುಷ್ಪ ಮೊದಲ ಭಾಗದಂತೆ.. ಈ ಎರಡನೇ ಭಾಗವೂ ಬ್ಲಾಕ್ ಬಸ್ಟರ್ ಆಗಲಿದೆ ಎಂಬ ವಿಶ್ವಾಸ ಅಭಿಮಾನಿಗಳದ್ದು.


ಮತ್ತೊಂದೆಡೆ, ಚಿತ್ರತಂಡ ಕೂಡ ಈ ಚಿತ್ರಕ್ಕಾಗಿ ಶ್ರಮಿಸುತ್ತಿದೆ. ಪುಷ್ಪ 1 ಚಿತ್ರ ತೆಲುಗು ಪ್ರೇಕ್ಷಕರಿಗೆ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿಯೂ ಹಿಟ್‌ ಆಗಿದೆ. ಚಿತ್ರದ ಮೊದಲ ಭಾಗದ ರಿಲೀಸ್‌ ವೇಳೆ ದಿನಾಂಕಗಳ ವಿಷಯದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಿತು. ನಿಗದಿತ ದಿನಾಂಕದಂದು ಚಿತ್ರದ ಬಿಡುಗಡೆಯನ್ನು ಮುಂದೂಡಬಾರದು ಎಂದು ದೃಢವಾಗಿ ನಿರ್ಧರಿಸಿತ್ತು. ಇದೇ ಕಾರಣಕ್ಕೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಬಹುಬೇಗ ಮುಗಿಸಿತು. ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಟೈಟ್‌ ಶೆಡೂಲ್‌ ಮಧ್ಯೆ ಚಿತ್ರತಂಡಕ್ಕೆ ಮತ್ತೆ ಸಿನಿಮಾ ವೀಕ್ಷಿಸಲು ಸಮಯವೂ ಸಿಗಲಿಲ್ಲ. 


ಇದನ್ನೂ ಓದಿ: sonali bendre: ನಿರ್ಮಾಪಕರೇ ನಟ - ನಟಿಯರ ನಡುವೆ ಸಂಬಂಧ ಕಟ್ಟೋದು.. ಸೋನಾಲಿ ಬೇಂದ್ರೆ ಸೆನ್ಸೇಷನಲ್‌ ಕಾಮೆಂಟ್‌ ! 


2021ರಲ್ಲಿ ತೆರೆಕಂಡ ಈ ಸಿನಿಮಾದ ಸೀಕ್ವೆಲ್ 2024ರಲ್ಲಿ ಬರುತ್ತಿರುವುದರಿಂದ ಹೇಗೋ ಮೂರು ವರ್ಷಗಳ ಗ್ಯಾಪ್ ಸಿಕ್ಕಿತ್ತು ಮೊದಲ ಭಾಗದಲ್ಲಿ ಮಾಡಿದ ಸಣ್ಣ ಪುಟ್ಟ ತಪ್ಪುಗಳನ್ನು ಚಿತ್ರತಂಡ ಈ ಬಾರಿ ಮಾಡುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಚಿತ್ರತಂಡ ಮೊದಲ ಭಾಗದಲ್ಲಿ ಮಾಡಿದ ತಪ್ಪನ್ನೇ ಪುನರಾವರ್ತಿಸಲು ಹೊರಟಿರುವಂತೆ ತೋರುತ್ತಿದೆ ಎನ್ನಲಾಗಿದೆ. 


ಪುಷ್ಪಾ 2 ಚಿತ್ರದ ಶೂಟಿಂಗ್ ಇನ್ನೂ ಬಾಕಿ ಇದೆ. ಮೇ ಅಂತ್ಯದೊಳಗೆ ಚಿತ್ರದ ಶೂಟಿಂಗ್ ಮುಗಿಸುವ ಸಾಧ್ಯತೆ ಕಾಣುತ್ತಿಲ್ಲ. ಚಿತ್ರ ಆಗಸ್ಟ್‌ನಲ್ಲಿಯೇ ರಿಲೀಸ್ ಆಗುತ್ತಿರುವುದರಿಂದ ಕೇವಲ ಎರಡೇ ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಚಿತ್ರದ ಪ್ರಚಾರದತ್ತ ಗಮನ ಹರಿಸಬೇಕಿದೆ.


ಈ ಸಿನಿಮಾ ನಿಗದಿತ ಸಮಯಕ್ಕೆ ಬಿಡುಗಡೆಯಾದರೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಿನಿಮಾ ಹಿಟ್ ಆಗಲಿದೆ ಎಂಬುದು ಸಿನಿ ತಜ್ಞರ ಅಭಿಪ್ರಾಯ. ಹಾಗಾಗಿ ಮೊದಲ ಭಾಗದಂತೆಯೇ ಈಗ ಎರಡನೇ ಭಾಗಕ್ಕೂ ಸುಕುಮಾರ್ ಕೆಲವು ಟ್ರಿಕಿ ಕೆಲಸಗಳನ್ನು ಮಾಡಬೇಕಿದೆ. ಅಲ್ಲದೆ, ಸುಕುಮಾರ್ ಅವರು ನಿಜವಾಗಿಯೂ ಹಾಗೆ ಮಾಡಬೇಕು ಎಂದು ಫಿಕ್ಸ್ ಆಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. 


ಇದನ್ನೂ ಓದಿ: Komal Kumar : ಕೋಮಲ್‌ ಪತ್ನಿ ಖ್ಯಾತ ನಿರ್ಮಾಪಕಿ.. ಪತಿಗಾಗಿ ವಿದೇಶದಲ್ಲಿನ ಕೆಲಸ ತೊರೆದು ಬಂದ ಇವರು ಯಾರು ಗೊತ್ತೇ!? 


ಅದ್ಧೂರಿ ಬಜೆಟ್‌ನಲ್ಲಿ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಕೆಂಪು ಚಂದನದ ಸ್ಮಗ್ಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ಅಲ್ಲು ಅರ್ಜುನ್ ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಖುಷಿ ಕೊಡುತ್ತಾರೆ ಮತ್ತು ಈ ಬಾರಿಯೂ ಸುಕುಮಾರ್ ಸಿನಿಮಾವನ್ನು ಸಂಪೂರ್ಣವಾಗಿ ನೋಡದೆ ಬಿಡುಗಡೆ ಮಾಡಿ ಬ್ಲಾಕ್ ಬಸ್ಟರ್ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.