Social Media Trending: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅನೇಕ ಬಾರಿ ನಟ-ನಟಿಯರು ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಂತಹ ಸೆಲೆಬ್ರಿಟಿಗಳಲ್ಲಿ ದಿಶಾ ಪಾಟ್ನಿ ಕೂಡ ಒಬ್ಬರು.


COMMERCIAL BREAK
SCROLL TO CONTINUE READING

ಅಭಿಮಾನಿಗಳೊಂದಿಗೆ ವಿಡಿಯೋ ಹಂಚಿಕೊಂಡ ದಿಶಾ
ಇತ್ತೀಚಿನ ಕೆಲ ದಿನಗಳಿಂದ ದಿಶಾ ಪಾಟ್ನಿ ತನ್ನ ಸಂಬಂಧ ಹಾಗೂ ಬ್ರೇಕ್ ಅಪ್ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ಸಂಗತಿ ನಿಮಗೆಲ್ಲಾ ತಿಳಿದೇ ಇದೆ. ಇಂತಹ ಪರಿಸ್ಥಿತಿಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಸಹ, ನಟಿ ತನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾಳೆ. ಆದರೆ ಈ ವಿಡಿಯೋದಲ್ಲಿ ನೀವು ನಟಿಯ ವಿಭಿನ್ನ ರೂಪವನ್ನೇ ನೋಡುವಿರಿ. ಅದೇನೇ ಇದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವೈರಲ್ ವಿಡಿಯೋವನ್ನು ಮೊದಲು ನೀವೂ ನೋಡಲೇಬೇಕು.



ಇದನ್ನೂ ಓದಿ-ಗ್ರೀಸ್‌ನಲ್ಲಿ ಹನ್ಸಿಕಾ ಅದ್ದೂರಿ ಬ್ಯಾಚುಲರ್ ಪಾರ್ಟಿ : ಮಸ್ತ್‌ ಮಜಾ ಮಾಡಿದ ಬಿಂದಾಸ್‌ ಬೆಡಗಿ..!

ಕಿಕ್ ಬಾಕ್ಸಿಂಗ್ ನೋಡಿ ಅವಾಕ್ಕಾದ ನೆಟ್ಟಿಗರು 
ಈ ವಿಡಿಯೋದಲ್ಲಿ ದಿಶಾ ಕಿಕ್ ಬಾಕ್ಸಿಂಗ್ ಮಾಡುತ್ತಿರುವುದನ್ನು ನೀವು ಗಮನಿಸಬಹುದು. ಸಾಮಾನ್ಯವಾಗಿ ದಿಶಾ ಆಗಾಗ್ಗೆ ತನ್ನ ಬೋಲ್ಡ್ ಮತ್ತು ಹಾಟ್ ಫೋಟೋಶೂಟ್‌ಗಳನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾಳೆ. ಇದೇ ಕಾರಣದಿಂದ ಇದೀಗ ಆಕೆಯ ಅಭಿಮಾನಿಗಳು ಈ ವಿಡಿಯೋ ನೋಡಿ ಅಚ್ಚರಿಗೊಂಡಿದ್ದಾರೆ. ಈ ವೀಡಿಯೋವನ್ನು ದಿಶಾ ಪಾಟ್ನಿ ತನ್ನ ಅಧಿಕೃತ  ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಹಂಚಿಕೊಂಡಿದ್ದಾರೆ. ದಿಶಾಳ ಈ ಕಿಕ್ ಬಾಕ್ಸಿಂಗ್ ವಿಡಿಯೋ ಮತ್ತು ನಟಿಯ ಈ ಹೊಸ ಶೈಲಿಯು ಆಕೆಯ ಅಭಿಮಾನಿಗಳಿಗೆ ತುಂಬಾ ಇಷ್ಟವಾದಂತೆ ತೋರುತ್ತಿದೆ.


ಇದನ್ನೂ ಓದಿ-ನಾನು ಅವರ ಸಿನಿಮಾ ಮಾಡಲ್ಲ ಅಂತ ಹೇಳಿದ್ದೆ.. ಅವರೇ ಬಲವಂತ ಮಾಡಿದ್ರು..!


ವೀಡಿಯೊ ವೈರಲ್ ಆಗಿದೆ
ದಿಶಾ ಈ ವಿಡಿಯೋವನ್ನು ಹಂಚಿಕೊಂದಾಗಿನಿಂದ 7.7 ದಶಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಲಕ್ಷಾಂತರ ಮಂದಿ (ಸೋಶಿಯಲ್ ಮೀಡಿಯಾ ಬಳಕೆದಾರರು) ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇತ್ತೀಚೆಗೆ ಓರ್ವ ನಿಗೂಢ ಯುವಕನೊಂದಿಗೆ ಕಾಣಿಸಿಕೊಂಡು ಭಾರಿ ಹೆಡ್ಲೈನ್ ಗಿಟ್ಟಿಸಿದ್ದಳು, ಈ ನಿಗೂಢ ವ್ಯಕ್ತಿ ದಿಶಾ ಅವರ ಹೊಸ ಸ್ನೇಹಿತ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಎಂದು ನಂತರ ತಿಳಿದುಬಂದಿದೆ, ಆಟ ವೃತ್ತಿಯಲ್ಲಿ ನಟ, ರೂಪದರ್ಶಿ ಮತ್ತು ಜಿಮ್ ತರಬೇತುದಾರನಾಗಿದ್ದಾನೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.