ಗ್ರೀಸ್‌ನಲ್ಲಿ ಹನ್ಸಿಕಾ ಅದ್ದೂರಿ ಬ್ಯಾಚುಲರ್ ಪಾರ್ಟಿ : ಮಸ್ತ್‌ ಮಜಾ ಮಾಡಿದ ಬಿಂದಾಸ್‌ ಬೆಡಗಿ..!

ನಟಿ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಉದ್ಯಮಿ ಸೋಹೇಲ್ ಕಥುರಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈಗಾಗಲೇ ಮದುವೆಗೆ ತಯಾರಿ ನಡೆದಿದೆ. ಇನ್ನು ಬ್ಯಾಚುಲರ್‌ ಪಾರ್ಟಿ ಮಾಡಲು ಹನ್ಸಿಕಾ ತನ್ನ ಗೆಳತಿಯರೊಂದಿಗೆ ಗ್ರೀಸ್‌ಗೆ ತೆರಳಿದ್ದು, ಮಸ್ತ್‌ ಮಜಾ ಮಾಡುತ್ತಿದ್ದಾರೆ. ಈ ಕುರಿತು ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

Written by - Krishna N K | Last Updated : Nov 27, 2022, 01:45 PM IST
  • ನಟಿ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಉದ್ಯಮಿ ಸೋಹೇಲ್ ಕಥುರಿಯಾ ಮದುವೆಯಾಗಲಿದ್ದಾರೆ
  • ಇದೀಗ ಹನ್ಸಿಕಾ ತಮ್ಮ ಗೆಳತಿಯರ ಜೊತೆ ಬ್ಯಾಚುಲರ್‌ ಪಾರ್ಟಿ ಮಾಡಲು ಗ್ರೀಸ್‌ಗೆ ತೆರಳಿದ್ದಾರೆ
  • ಈ ಕುರಿತು ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ
ಗ್ರೀಸ್‌ನಲ್ಲಿ ಹನ್ಸಿಕಾ ಅದ್ದೂರಿ ಬ್ಯಾಚುಲರ್ ಪಾರ್ಟಿ : ಮಸ್ತ್‌ ಮಜಾ ಮಾಡಿದ ಬಿಂದಾಸ್‌ ಬೆಡಗಿ..! title=

Hansika Motwani : ನಟಿ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಉದ್ಯಮಿ ಸೋಹೇಲ್ ಕಥುರಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈಗಾಗಲೇ ಮದುವೆಗೆ ತಯಾರಿ ನಡೆದಿದೆ. ಇನ್ನು ಬ್ಯಾಚುಲರ್‌ ಪಾರ್ಟಿ ಮಾಡಲು ಹನ್ಸಿಕಾ ತನ್ನ ಗೆಳತಿಯರೊಂದಿಗೆ ಗ್ರೀಸ್‌ಗೆ ತೆರಳಿದ್ದು, ಮಸ್ತ್‌ ಮಜಾ ಮಾಡುತ್ತಿದ್ದಾರೆ. ಈ ಕುರಿತು ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಇನ್ನು ಬ್ಯಾಚುರಲ್‌ ಪಾರ್ಟಿಯ ವಿಡಿಯೋದಲ್ಲಿ ಹನ್ಸಿಕಾ ಸಖತ್‌ ಕ್ಯೂಟಾಗಿ ಕಾಣಿಸಿಕೊಂಡಿದ್ದಾರೆ. ಹನ್ಸಿಕಾ ರೂಮ್‌ ನಿಂದ ಹೊರಗೆ ಬರುತ್ತಾರೆ. ಅವರ ಸ್ನೇಹಿತರು ಆಗ ಆಕೆಯ ಹೆಸರನ್ನು ಕರೆಯುವ ಮೂಲಕ ಸ್ವಾಗತಿಸುತ್ತಾರೆ. ಕ್ಯಾಮರಾ ಮುಂದೆ ಬಂದ ಹನ್ಸಿಕಾ ಕೂದಲನ್ನು ಒಂದು ಬದಿಗೆ ತಿರುಗಿಸುತ್ತಾರೆ. 'ವಧು' ಎಂಬ ಪದ ಬರೆದ ಜಾಕೆಟ್ ಅನ್ನು ಧರಿಸಿದ್ದಾರೆ. ವೀಡಿಯೊದಲ್ಲಿ ಹನ್ಸಿಕಾ ತನ್ನ ಸ್ನೇಹಿತರೊಂದಿಗೆ ಕುಳ್ಳಿರಿಸುವುದು, ರಸ್ತೆಯಲ್ಲಿ ನಡೆಯುವುದು ಮತ್ತು ನೃತ್ಯ ಮಾಡುವುದನ್ನು ನೋಡಬಹುದು.

ಇದನ್ನೂ ಓದಿ: ನಾನು ಅವರ ಸಿನಿಮಾ ಮಾಡಲ್ಲ ಅಂತ ಹೇಳಿದ್ದೆ.. ಅವರೇ ಬಲವಂತ ಮಾಡಿದ್ರು..!

 
 
 
 

 
 
 
 
 
 
 
 
 
 
 

A post shared by Hansika Motwani (@ihansika)

ಹನ್ಸಿಕಾ ಮೋಟ್ವಾನಿ ಅವರು ತಮ್ಮ ಸೋಹೇಲ್ ಕಥುರಿಯಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಬಾಲನಟಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು, ಬಹುಭಾಷಾ ನಾಯಕಿಯಾಗಿ ಹನ್ಸಿಕಾ ಮೋಟ್ವಾನಿ ಮಿಂಚಿದ್ದಾರೆ. ಇದೀಗ ಅವರು ಉದ್ಯಮಿ ಸೊಹೈಲ್ ಕಥುರಿಯಾ ಕೈ ಹಿಡಿಯಲಿದ್ದಾರೆ. ಈ ಹಿಂದೆ ಅವರ ಪ್ರೀ ವೆಡ್ಡಿಂಗ್ ಶೂಟ್‌ನ ವಿಡಿಯೋ ಮತ್ತು ಫೋಟೋಗಳನು ವೈರಲ್‌ ಆಗಿದ್ದವು. ಈ ಜೋಡಿಯ ಮದುವೆ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News