Divya Uruduga Eliminated : ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಫಿನಾಲೆಯಲ್ಲಿ ಒಬ್ಬರ ಆಟ 99ನೇ ದಿನಕ್ಕೆ ಮುಕ್ತಾಯವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ರ ಗ್ರ್ಯಾಂಡ್ ಫಿನಾಲೆಯಿಂದ ಒಬ್ಬ ಸ್ಪರ್ಧಿ ಔಟ್‌ ಆಗಿದ್ದಾರೆ. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಮತ್ತು ದಿವ್ಯಾ ಉರುಡುಗ ಮೊದಲ ಐದು ಫೈನಲಿಸ್ಟ್‌ಗಳಾಗಿದ್ದು, ಅಂತಿಮ ವಾರಕ್ಕೆ ಕಾಲಿಟ್ಟಿದ್ದರು. ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯುತ್ತಿದ್ದು, ಕಿಚ್ಚ ಸುದೀಪ್‌ ಒಬ್ಬರನ್ನು ಮನೆಯಿಂದ ಹೊರ ಕರೆದಿದ್ದಾರೆ. ಇಂದು ಅಗ್ರ ಐದು ಫೈನಲಿಸ್ಟ್‌ಗಳಲ್ಲಿ ಒಬ್ಬರು ಎಲಿಮಿನೇಟ್‌ ಆಗಿದ್ದಾರೆ. ಅಂತಿಮವಾಗಿ, ಬಿಗ್ ಬಾಸ್ ಕನ್ನಡ 9 ರ ಅಗ್ರ ನಾಲ್ವರು ಫೈನಲಿಸ್ಟ್‌ಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : BBK 9 Winner : ಬಿಗ್ ಬಾಸ್ ವಿನ್ನರ್‌ಗೆ ಏನೆಲ್ಲಾ ಸಿಗಲಿದೆ? ಬಹುಮಾನದ ಒಟ್ಟು ಮೊತ್ತ ಎಷ್ಟು?


ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಕಾರ್ಯಕ್ರಮದ ಆರಂಭದಲ್ಲಿ ದಿವ್ಯಾ ಉರುಡುಗ ವಿರುದ್ಧ ಆರೋಪಗಳೇ ಹೆಚ್ಚು ಕೇಳಿ ಬಂದಿದ್ದವು. ಬಿಗ್ ಬಾಸ್ ಕನ್ನಡ 8 ರಲ್ಲಿ ದಿವ್ಯಾ ಉರುಡುಗ ಫೇವರಿಸಂ ಮಾಡಿದ್ದರು, ಪಾರ್ಶಿಯಾಲಿಟಿ ಮಾಡಿದ್ದರು, ಆಕೆಗೆ ಸ್ಪೋರ್ಟ್ಸ್‌ಮ್ಯಾನ್ ಸ್ಪಿರಿಟ್ ಇಲ್ಲ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ವಾದ, ವಿವಾದಗಳನ್ನು ಮಾಡಿಲ್ಲ. ಕಳಪೆ, ಅತ್ಯುತ್ತಮವನ್ನೂ ಪಡೆದಿಲ್ಲ. ಮನೆಯಲ್ಲಿ ಕ್ಯಾಪ್ಟನ್ ಕೂಡ ಆಗದೇ ಕಿಚ್ಚನ ಚಪ್ಪಾಳೆಯನ್ನೂ ಪಡೆಯದೇ ಫಿನಾಲೆವರೆಗೂ ಬಂದಿದ್ದಾರೆ. ಇದೇ ಎಲ್ಲೋ ಒಂದು ಕಡೆ ದಿವ್ಯಾ ಅವರಿಗೆ ಮೈನಸ್‌ ಪಾಯಿಂಟ್‌ ಆಯ್ತು ಎಂಬ ಮಾತುಗಳು ಕೇಳಿಬರುತ್ತಿವೆ.


 


BBK 9: ಕೂಲ್‌ ಆಗಿಯೇ ಎಲ್ಲರ ಹೃದಯ ಗೆದ್ದ ರಾಕೇಶ್ ಅಡಿಗ! ಕಿಚ್ಚ ಮೇಲೆತ್ತುವ ಕೈ ಇವರದ್ದೇ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.