BBK 9: ಕೂಲ್‌ ಆಗಿಯೇ ಎಲ್ಲರ ಹೃದಯ ಗೆದ್ದ ರಾಕೇಶ್ ಅಡಿಗ! ಕಿಚ್ಚ ಮೇಲೆತ್ತುವ ಕೈ ಇವರದ್ದೇ?

Rakesh Adiga : ಬಿಗ್ ಬಾಸ್ ವೀಕ್ಷಕರು ಬಿಗ್ ಬಾಸ್ ಕನ್ನಡ 9 ಟ್ರೋಫಿ ಯಾರ ಪಾಲಾಗುತ್ತ ಎಂದು ತಿಳಿಯಲು ಕುತೂಹಲ ಹೊಂದಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹಾಡು ಹಾಡಿ, ಹೆಜ್ಜೆ ಹಾಕಿ, ಕೂಲ್‌ ಆಂಡ್‌ ಕಾಮ್‌ ಆಗಿ ರಾಕೇಶ್ ಅಡಿಗ ಇದ್ದರು. 

Written by - Chetana Devarmani | Last Updated : Dec 30, 2022, 08:08 PM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಫಿನಾಲೆ
  • ಕೂಲ್‌ ಆಗಿಯೇ ಎಲ್ಲರ ಹೃದಯ ಗೆದ್ದ ರಾಕೇಶ್
  • ಬಿಗ್ ಬಾಸ್ ವಿನ್ನರ್ ಆಗ್ತಾರಾ ರಾಕೇಶ್ ಅಡಿಗ?
BBK 9: ಕೂಲ್‌ ಆಗಿಯೇ ಎಲ್ಲರ ಹೃದಯ ಗೆದ್ದ ರಾಕೇಶ್ ಅಡಿಗ! ಕಿಚ್ಚ ಮೇಲೆತ್ತುವ ಕೈ ಇವರದ್ದೇ? title=
ರಾಕೇಶ್ ಅಡಿಗ

Bigg Boss Kannada Season 9 : ಬಿಗ್ ಬಾಸ್ ವೀಕ್ಷಕರು ಬಿಗ್ ಬಾಸ್ ಕನ್ನಡ 9 ಟ್ರೋಫಿ ಯಾರ ಪಾಲಾಗುತ್ತ ಎಂದು ತಿಳಿಯಲು ಕುತೂಹಲ ಹೊಂದಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹಾಡು ಹಾಡಿ, ಹೆಜ್ಜೆ ಹಾಕಿ, ಕೂಲ್‌ ಆಂಡ್‌ ಕಾಮ್‌ ಆಗಿ ರಾಕೇಶ್ ಅಡಿಗ ಇದ್ದರು. ಕಾವ್ಯಶ್ರೀ ಗೌಡ, ಅನುಪಮಾ ಗೌಡ, ಅಮೂಲ್ಯ ಗೌಡ, ದಿವ್ಯಾ ಉರುಡುಗ, ನೇಹಾ ಗೌಡ ಜೊತೆ ರಾಕೇಶ್ ಅಡಿಗ ಉತ್ತಮ ಸ್ನೇಹವನ್ನು ಹೊಂದಿದ್ದರು. ರಾಕೇಶ್ ಅಡಿಗ ಅವರ ತಾಳ್ಮೆ, ಸಂಯಮವೇ ಬಿಗ್‌ ಬಾಸ್‌ ಮನೆಯಲ್ಲಿ ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದ್ದು. 

ಇದನ್ನೂ ಓದಿ : Roopesh Shetty : ನಗುವಿನಿಂದ ಎಲ್ಲರ ಮನಗೆದ್ದ ಸ್ನೇಹಜೀವಿ ರೂಪೇಶ್ ಶೆಟ್ಟಿ ಬಿಗ್ ಬಾಸ್ ಗೆಲ್ತಾರಾ?

ಬಿಗ್ ಬಾಸ್ ಜರ್ನಿಯಲ್ಲಿ ರಾಕೇಶ್ ಅಡಿಗ ಅಬ್ಬಬ್ಬಾ ಅಂದ್ರೆ ಎರಡರಿಂದ ಮೂರು ಬಾರಿ ಏರುಧ್ವನಿಯಲ್ಲಿ ಮಾತನಾಡಿರುವುದು ಬಿಟ್ಟರೆ, ಮತ್ತೆಲ್ಲ ಸಂದರ್ಭಗಳನ್ನು ಶಾಂತವಾಗಿಯೇ ಹ್ಯಾಂಡಲ್‌ ಮಾಡಿದ್ದಾರೆ. ಎಂತಹ ಕಠಿಣ  ಪರಿಸ್ಥಿತಿಯಲ್ಲಿಯೂ ರಾಕೇಶ್ ಅಡಿಗ ತಾಳ್ಮೆ ಕಳೆದುಕೊಂಡಿಲ್ಲ. ಕೆಲವು ಅನಧಿಕೃತ ಸಾಮಾಜಿಕ ಮಾಧ್ಯಮ ಪುಟಗಳು ಈಗಾಗಲೇ ರಾಕೇಶ್ ಅಡಿಗ ಅವರನ್ನು ಬಿಗ್ ಬಾಸ್ ಕನ್ನಡ ಸೀಸನ್ 9 ರ ವಿನ್ನರ್ ಎಂದು ಘೋಷಿಸಿವೆ. ಆದರೆ, ಶೋ ಮೇಕರ್‌ಗಳಾದ ಕಲರ್ಸ್ ಕನ್ನಡದಿಂದ ಇದನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. 

ರಾಕೇಶ್ ಅಡಿಗ ಅವರು ಪ್ರತಿ ಕಾರ್ಯದಲ್ಲೂ ಅತ್ಯುತ್ತಮವಾದದ್ದನ್ನು ನೀಡಿದರು. ಅವರು ಬಿಗ್ ಬಾಸ್ ಕನ್ನಡ 9 ಮನೆಗೆ ಪ್ರವೇಶಿಸಿದಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದರು ಮತ್ತು ಟಾಸ್ಕ್‌ಗಳಲ್ಲಿ ತಮ್ಮ ಕಾರ್ಯಕ್ಷಮತೆ ಮತ್ತು ನಡವಳಿಕೆಯಿಂದ ಜನರನ್ನು ಆಕರ್ಷಿಸಿದರು. ರಾಕೇಶ್ ಅಡಿಗ ಅಭಿಮಾನಿಗಳು ಅವರನ್ನು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಮಾಡಲು ಯಾವುದೇ ಅವಕಾಶವನ್ನು ಬಿಡಲಿಲ್ಲ. ರಾಕೇಶ್ ಅಡಿಗ ನಾಮೆನೇಟ್‌ ಆದಾಗ ಸೇವ್‌ ಆಗುವವರಲ್ಲಿ ಯಾವಾಗಲೂ ಹೆಚ್ಚು ಮತ ಪಡೆದು ಅಗ್ರಸ್ಥಾನದಲ್ಲಿದ್ದರು. 

ಇದನ್ನೂ ಓದಿ : BBK 9 ಗ್ರ್ಯಾಂಡ್ ಫಿನಾಲೆಗೆ ಸ್ಯಾಂಡಲ್‌ವುಡ್‌ ಸ್ಟೈಲ್‌ ಐಕಾನ್‌ ಕಿಚ್ಚನ ಗಾರ್ಜಿಯಸ್ ಲುಕ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News