ನಾನೇ ಭಾರತ ಎಂದ ದೀಕ್ಷಿತ್ ಶೆಟ್ಟಿ..! ಗಣರಾಜ್ಯೋತ್ಸವದ ದಿನ ಬ್ಲಿಂಕ್ ಚಿತ್ರತಂಡದಿಂದ ವಿನೂತನ ಪ್ರಯತ್ನ
Blink Movie: ರವಿಚಂದ್ರ ಎ ಜೆ ಅವರ ನಿರ್ಮಾಣದ ದೀಕ್ಷಿತ್ ಶೆಟ್ಟಿ ಹಾಗೂ ಚೈತ್ರ ಆಚರ್ ಮುಖ್ಯಭೂಮಿಯಲ್ಲಿ ನಟಿಸಿರುವ ಬ್ಲಿಂಕ್ ಚಿತ್ರತಂಡ , ಚಿತ್ರೀಕರಣದ ದಿನದಿಂದಲೂ ತಮ್ಮ ವಿನೂತನ ಪ್ರಚಾರ ತಂತ್ರಗಳಿಂದ ಚಂದನವನದಲ್ಲಿ ಗಮನ ಸೆಳೆದಿದೆ.
ತಮ್ಮ ಚಿತ್ರವನ್ನು ಜನರಿಗೆ ಮುಟ್ಟಿಸುವಲ್ಲಿ ಗೆಲ್ಲಲೇಬೇಕು ಎಂದು ಶಪಥ ಮಾಡಿರುವ ಈ ತಂಡ ಯಾವುದೇ ಮುಚ್ಚು ಮರೆ ಇಲ್ಲದೆ , ನೂತನ ಚಿತ್ರಗಳನ್ನು ಕಟ್ಟುವಲ್ಲಿ , ಜನರಿಗೆ ತಲುಪಿಸುವಲ್ಲಿ ಇರುವ ಸಮಸ್ಯೆಗಳನ್ನು ತಿಳಿಸಲು ವಿನೂತನ ಪ್ರಯೋಗ ಮಾಡಿದ್ದು, "ಜನರಿಂದಲೇ ಸಿನಿಮಾ , ಜನರೇ ಸಿನಿಮಾ" ಎಂಬಾ ವಿಶಿಷ್ಟ ಸಾಲುಗಳು ಜನರ ಮನಸ್ಸನ್ನು ಗೆಲ್ಲುತ್ತಿವೆ..ಚಿತ್ರಮಂದಿರದಿಂದ ದೂರ ಉಳಿದಿರುವ ಜನರಿಗೆ, ಮತ್ತೆ ಚಿತ್ರಮಂದಿರದ ಆ ಮಾಂತ್ರಿಕ ಜಗತ್ತಿನ ವಿಶೇಷತೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ.
ಮಾರ್ಚ್ 08 ಕ್ಕೆ ಬೆಳ್ಳಿತೆರೆಗೆ ಅಪ್ಪಳಿಸಲು ಸಜ್ಜಾದ "ಬ್ಲಿಂಕ್"
ಈಗಾಗಲೇ ತಮ್ಮ ಹೊಸತನದಿಂದ ಜನರ ಗಮನಸೆಳೆದಿರುವ ಬ್ಲಿಂಕ್ ತಂಡವು ಮಾರ್ಚ್ 08 ಕ್ಕೆ ಚಿತ್ರಮಂದಿರದೊಳಗೆ ಪ್ರವೇಶಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದೆ.. ಜನನಿ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬ್ಲಿಂಕ್ ಚಿತ್ರವು ಸೈಫೈ ಪ್ರಕಾರದ ಚಿತ್ರವಾಗಿದ್ದು ಪ್ರೇಕ್ಷಕರನ್ನು ಸೆಳಿದಿಟ್ಟುಕೊಳ್ಳುವುದು ಖಂಡಿತವೆಂದು ನಿರ್ಮಾಪಕ ರವಿಚಂದ್ರ ಎ ಜೆ ಹೇಳುತ್ತಾರೆ ..
ಇದನ್ನೂ ಓದಿ-Vishwa neta movie : ʼವಿಶ್ವ ನೇತಾʼ ಸಿನಿಮಾದ ಮೂಲಕ ಪ್ರಪಂಚ ಮುಂದೆ ʼಪಿಎಂ ನಮೋʼ ಜೀವನ ಕಥೆ..!
ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಚಿತ್ರದ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ನಿರ್ದೇಶಕ ಶ್ರೀನಿಧಿ ಬೆಂಗಳೂರುರವರು, ಇದೊಂದು ಕಾಲ್ಪನಿಕ ಕಥೆಯಾಗಿದ್ದು ..ಕನ್ನಡ ಚಿತ್ರರಂಗದಲ್ಲಿ ಈ ಪ್ರಕಾರದ ಚಿತ್ರಗಳು ತೀರಾ ಕಡಿಮೆ ತೆರೆಕಂಡಿದ್ದು ಈ ಚಿತ್ರವು ನೋಡುಗರಲ್ಲಿ ಹೊಸತನ ಮೂಡಿಸುತ್ತದೆ ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಹೇಳುತ್ತಾರೆ
ದಿಯಾ,ದಸರಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿಯವರು ನಾಯಕ ನಟನ ಜವಬ್ದಾರಿಯನ್ನು ಹೊತ್ತಿದ್ದಾರೆ.. ಹಾಗೂ ಹೊಸ ದಿನಚರಿ ಖ್ಯಾತಿಯ ಮಂದಾರ ಬಟ್ಟಲಹಳ್ಳಿ ನಾಯಕಿನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ ..
ಇದನ್ನೂ ಓದಿ-BBK10: ಆತ್ಮಸಾಕ್ಷಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡ ಬಿಗ್‌ಬಾಸ್ ಸ್ಪರ್ಧಿಗಳು!
ಇತ್ತೀಚಿಗೆ ತೆರೆಕಂಡ ಟೋಬಿ ಮತ್ತು ಸಪ್ತಸಾಗರದಾಚೆ ಎಲ್ಲೋ 2 ಚಿತ್ರದ ಸುರಭಿ ಪಾತ್ರಧಾರಿ ಚೈತ್ರ ಜೆ ಆಚಾರ್ ಬ್ಲಿಂಕ್ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ ಹಾಗೂ ವಜ್ರಧೀರ್ ಜೈನ್, ಗೋಪಾಲಕೃಷ್ಣ ದೇಶಪಾಂಡೆ , ಕಿರಣ್ ನಾಯ್ಕ್ , ಮುರುಳಿ ಶೃಂಗೇರಿ , ಸುರೇಶ್ ಅನಗಹಳ್ಳಿ ಸೇರಿದಂತೆ ಇನ್ನು ದೊಡ್ಡ ತಾರಬಳಗವಿದೆ ...
ಈ ಚಿತ್ರಕ್ಕೆ ಪ್ರಸನ್ನ ಕುಮಾರ್ ಎಂ ಎಸ್ ರವರ ಸಂಗೀತ ನಿರ್ದೇಶನವಿದ್ದು , ಅವಿನಾಶ ಶಾಸ್ರ್ತಿರವರ ಕ್ಯಾಮೆರಾ ಕೈ ಚಳಕವಿದೆ..ಹಾಗೂ ಸಂಜೀವ್ ಜಾಗೀರ್ದಾರ್ ರವರ ಸಂಕಲನವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.