Vishwa neta movie : ʼವಿಶ್ವ ನೇತಾʼ ಸಿನಿಮಾದ ಮೂಲಕ ಪ್ರಪಂಚ ಮುಂದೆ ʼಪಿಎಂ ನಮೋʼ ಜೀವನ ಕಥೆ..!

Modi Vishwa neta movie : ಭಾರತೀಯ ರಾಜಕೀಯದಲ್ಲಿ ತಳ ಹಂತದಿಂದ ಬಂದು ಭವ್ಯ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಜೀವನ ಚರಿತ್ರೆ ಹೊತ್ತ ಸಿನಿಮಾವೊಂದು ತೆರೆ ಮೇಲೆ ಬರಲು ರೆಡಿಯಾಗಿದೆ. ʼಚಿತ್ರಕ್ಕೆ ವಿಶ್ವ ನೇತಾʼ ಎಂದು ಹೆಸರಿಡಲಾಗಿದೆ. 

Written by - Krishna N K | Last Updated : Jan 24, 2024, 11:16 AM IST
  • ವಿಶ್ವ ರಾಜಕೀಯದಲ್ಲಿ ನಮೋ ವಿಶೇಷ ಹೆಸರು ಗಳಿಸಿದ್ದಾರೆ.
  • ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲೂ ಪ್ರಮಖ ಪಾತ್ರ ವಹಿಸಿದ್ದಾರೆ.
  • ನಮೋ ಜೀವನ ಚರಿತ್ರೆ ಹೊತ್ತ ಸಿನಿಮಾವೊಂದ ತೆರೆ ಮೇಲೆ ಬರಲು ರೆಡಿಯಾಗುತ್ತಿದೆ.
Vishwa neta movie : ʼವಿಶ್ವ ನೇತಾʼ ಸಿನಿಮಾದ ಮೂಲಕ ಪ್ರಪಂಚ ಮುಂದೆ ʼಪಿಎಂ ನಮೋʼ ಜೀವನ ಕಥೆ..! title=

PM Narendra Modi : ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷವನ್ನು ಎರಡು ಬಾರಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ವಿಶ್ವ ರಾಜಕೀಯದಲ್ಲಿ ನಮೋ ವಿಶೇಷ ಹೆಸರು ಗಳಿಸಿದ್ದಾರೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲೂ ಪ್ರಮಖ ಪಾತ್ರ ವಹಿಸಿದ್ದಾರೆ. ಸಧ್ಯ ಹಲವಾರು ಅಪರೂಪದ ಸಾಧನೆಗೈದ ನಮೋ ಜೀವನ ಚರಿತ್ರೆ ಹೊತ್ತ ಸಿನಿಮಾವೊಂದ ತೆರೆ ಮೇಲೆ ಬರಲು ರೆಡಿಯಾಗುತ್ತಿದೆ.

ಭಾರತದ ನೆಚ್ಚಿನ ನಾಯಕ, ನರೇಂದ್ರ ಮೋದಿ ಅವರು ಎರಡು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ, ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸತತ ಎರಡು ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ. ಮೂರನೇ ಬಾರಿಗೆ ಭಾರತದ ಆಡಳಿತದ ಚುಕ್ಕಾಣಿ ಹಿಡಿಯಲು ಸಿದ್ದವಾಗಿದ್ದಾರೆ.

ಇದನ್ನೂ ಓದಿ:ಭಾರತದ ಶ್ರೀಮಂತ ದೇವಾಲಯಗಳು ಯಾವುವು ಎಂದು ನಿಮಗೆ ತಿಳಿದಿದೆಯೇ?

ಭಾರತೀಯ ರಾಜಕೀಯದಲ್ಲಿ ತಳ ಹಂತದಿಂದ ಬಂದು ಭವ್ಯ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಜೀವನ ಚರಿತ್ರೆ ಹೊತ್ತ ಸಿನಿಮಾವೊಂದು ತೆರೆ ಮೇಲೆ ಬರಲು ರೆಡಿಯಾಗಿದೆ. ʼಚಿತ್ರಕ್ಕೆ ವಿಶ್ವ ನೇತಾʼ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಯುವ ಪ್ರತಿಭೆ ಸಿ.ಎಚ್.ಕ್ರಾಂತಿ ಕುಮಾರ್ ನಿರ್ದೇಶನ ಮಾಡಲಿದ್ದಾರೆ. 'ವಂದೇ ಮೀಡಿಯಾ ಪ್ರೈವೇಟ್ ಲಿಮಿಟೆಡ್' ಬ್ಯಾನರ್ ಅಡಿಯಲ್ಲಿ ಕಾಶಿರೆಡ್ಡಿ ಶರತ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಭಯ್ ಡಿಯೋಲ್, ನೀನಾ ಗುಪ್ತಾ, ಅನುಪಮ್ ಖೇರ್ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಆಸ್ಕರ್ ಪುರಸ್ಕೃತ ಎಂ.ಎಂ.ಕೀರವಾಣಿ ಅವರ ಪುತ್ರ, ರಾಷ್ಟ್ರಪ್ರಶಸ್ತಿ ವಿಜೇತ ಕಾಲಭೈರವ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಶೀಘ್ರದಲ್ಲೇ ಸೆಟ್‌ಗೆ ಹೋಗಲು ಸಿದ್ಧತೆ ನಡೆಸುತ್ತಿದೆ. ಆರ್ಟಿಕಲ್ 370 ರದ್ದತಿ, ನೋಟು ಅಮಾನ್ಯೀಕರಣ, ಜಿಎಸ್‌ಟಿ, ಅಯೋಧ್ಯೆ ರಾಮಮಂದಿರ ನಿರ್ಮಾಣದಂತಹ ಅನೇಕ ದಿಟ್ಟ ಮತ್ತು ಸಂವೇದನಾಶೀಲ ನಿರ್ಧಾರಗಳಿಂದ ಪ್ರಧಾನಿಯವರು ಲಕ್ಷಾಂತರ ಭಾರತೀಯರ ಹೃದಯದಲ್ಲಿ ಹೃದಯಸ್ಪರ್ಶಿಯಾಗಿದ್ದಾರೆ. 

ಇದನ್ನೂ ಓದಿ:ಕರಾವಳಿ ಪ್ರದೇಶದಲ್ಲಿ ಚಳಿಯ ಪ್ರಮಾಣ ಹೆಚ್ಚಳ..! ಜಿಲ್ಲಾವಾರು ಹವಾಮಾನ ವರದಿ ಇಲ್ಲಿದೆ 

ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ʼಏಕರೂಪ ನಾಗರಿಕ ಸಂಹಿತೆʼ, ಒಂದು ರಾಷ್ಟ್ರ ಒಂದು ಚುನಾವಣೆ ಯಂತಹ ಕಾನೂನುಗಳನ್ನು ತರಲು ರೆಡಿಯಾಗಿದ್ದಾರೆ. ಇದಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಚಾಯ್ ವಾಲಾ ʼವಿಶ್ವ ನಾಯಕʼನಾಗಿ ಗುರುತಿಸಿಕೊಂಡಿದ್ದೇ ಸಿನಿಮಾದ ಹೈಲೆಟ್‌. 

ಈ ಹಿಂದೆ ನರೇಂದ್ರ ಮೋದಿಯವರ ಜೀವನಾಧಾರಿತ 'ಪಿಎಂ ನರೇಂದ್ರ ಮೋದಿ' ಬಯೋಪಿಕ್ ರಿಲೀಸ್‌ ಆಗಿತ್ತು. ಈ ಚಿತ್ರವನ್ನು 2019 ರ ಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ವಿವೇಕ್ ಒಬೆರಾಯ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ನಿರ್ವಹಿಸಿದ್ದರು. ನರೇಂದ್ರ ಮೋದಿಯವರ ಜೀವನಾಧಾರಿತ ವೆಬ್ ಸಿರೀಸ್ ಕೂಡ ತಯಾರಾಗುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News